ಕರ್ನಾಟಕ

ಕೃಷಿ ಕ್ಷೇತ್ರಕ್ಕೆ 4,346 ಕೋಟಿ ರುಪಾಯಿ ಅನುದಾನ; ಸುವರ್ಣಕೃಷಿ ಗ್ರಾಮ ಯೋಜನೆ: 100 ಮಾದರಿ ಕೃಷಿ ಗ್ರಾಮ ಅಭಿವೃದ್ಧಿ

Pinterest LinkedIn Tumblr

Farmer

ಬೆಂಗಳೂರು: 2016-17ನೇ ಸಾಲಿನ ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ರೈತರ ಹಿತಾದೃಷ್ಟಿಯಿಂದ ರಾಜ್ಯದಲ್ಲಿ ಶೀಘ್ರದಲ್ಲೇ ಸುವರ್ಣ ಕೃಷಿ ಯೋಜನೆ ಜಾರಿ ತಂದು ಆ ಮೂಲಕ 100 ಮಾದರಿ ಕೃಷಿ ಗ್ರಾಮಗಳನ್ನು ಅಭಿವೃದ್ಧಿ ಪಡಿಸುವುದಾಗಿ ಹೇಳಿದ್ದಾರೆ.

ಈ ವೇಳೆ ಕೃಷಿ ಕ್ಷೇತ್ರಕ್ಕೆ 4,346ಕೋಟಿ ರೂಪಾಯಿ ಅನುದಾನ ಹಾಗೂ ಕೃಷಿ ನವೋದ್ಯಮ ಯೋಜನೆಗೆ 10 ಕೋಟಿ ಅನುದಾನವನ್ನು ಘೋಷಿಸಿದ ಸಿದ್ದರಾಮಯ್ಯ ಘೋಷಿಸಿದ್ದಾರೆ.

* ಕೃಷಿ ಪತ್ತಿನ ಸಹಕಾರ ಸಂಘಗಳೆಲ್ಲವೂ ಗಣಕೀಕರಣಗೊಳಿಸಲು ಕ್ರಮಕೈಗೊಳ್ಳಲಾಗುವುದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
* ಮೇಕೆ ಮತ್ತು ಕುರಿಗಳಿಗೆ ಕೃತಕ ಗರ್ಭಧಾರಣೆಗಾಗಿ ವೀರ್ಯ ಬ್ಯಾಂಕ್‌ ಸ್ಥಾಪನೆ. ಮೇಕೆ ಹಾಲಿಗೆ ಪ್ರೋತ್ಸಾಹ.
* ಕೆಎಂಎಫ್ ಸಂಪೂರ್ಣ ಹೂಡಿಕೆಯೊಂದಿಗೆ ಹಾಸನದಲ್ಲಿ ಪಶು ಆಹಾರ ಕೇಂದ್ರ 2015-16 ರ ಸಾಲಿನಲ್ಲಿ ಪಶುಸಂಗೋಪನಾ ಇಲಾಖೆಗೆ 1,886 ಕೋಟಿ ರೂ ಒದಗಿಸಲಾಗಿದೆ.
* ದೇಸಿ ಗೋ ವಂಶದ ವೀರ್ಯ ಬ್ಯಾಂಕ್‌ ಸ್ಥಾಪನೆ. ಸ್ಥಳೀಯ ತಳಿ ಅಭಿವೃದ್ದಿಗಾಗಿ 5 ಕೋಟಿ ರೂಪಾಯಿ.
* ಮತ್ಸಾಶ್ರಯ ಯೋಜನೆ ಅಡಿ ವಸತಿ ರಹಿತ ಮೀನುಗಾರರಿಗೆ ಮನೆಗಳ ನೀರ್ಮಾಣ. ಮಂಗಳೂರಿನ ಪಿಲಿಕುಳದಲ್ಲಿ 15 ಕೋಟಿ ರು. ಓಷನೇನಿಯಂ ನಿರ್ಮಾಣ.ಮಹಿಳಾ ಮೀನುಗಾರರಿಗೆ ಎಪ್ರಾನ್‌ ,ಗ್ಲೌಸ್‌, ಬುಟ್ಟಿ ನೀಡಲು 1 ಕೋಟಿ ರು ಬಿಡುಗಡೆ
* ಮೀನುಗಾರಿಕೆಗೆ 302 ಕೋಟಿ, ಮೀನುಗಾರಿಕೆ ಅಭಿವೃದ್ದಿಗೆ ಕ್ರಮ. ಬಂದರುಗಳು ಹೂಳೆತ್ತಲು, ತಡೆಗೋಡೆ ನಿರ್ಮಾಣಕ್ಕೆ ಹಣ.

Write A Comment