ರಾಷ್ಟ್ರೀಯ

ಇಸ್ಲಾಂ ವಿಶ್ವದ ಮಹಾನ್‌ ಧರ್ಮ: ಮೋದಿ

Pinterest LinkedIn Tumblr

modi11

ನವದೆಹಲಿ (ಪಿಟಿಐ): ಇಸ್ಲಾಂ ವಿಶ್ವದ ಮಹಾನ್‌ ಧರ್ಮ ಎಂದು ಬಣ್ಣಿಸಿದ ಪ್ರಧಾನಿ ಮೋದಿ, ಅಲ್ಲಾನ ಪ್ರಾರ್ಥಿಸುವುದೇ ಹಿಂಸೆಯನ್ನು ತ್ಯಜಿಸಿ ಎಂಬ ಕರೆ ಮತ್ತು ಮನುಕುಲಕ್ಕಾಗಿ ಶಾಂತಿಯ ಪ್ರತಿಪಾದನೆ ಎಂದು ಹೇಳಿದರು.

ನಾಲ್ಕು ದಿನಗಳ ವಿಶ್ವ ಸೂಪಿ ವೇದಿಕೆ ಉದ್ದೇಶಿಸಿ ಮಾತನಾಡಿದ ಅವರು, ಧಾರ್ಮಿಕ ಮುಖಂಡರು ಇಸ್ಲಾಂನ ಸಂದೇಶವನ್ನು ಸಾರಬೇಕು ಎಂದರು.
ಕೆಲ ದೇಶಗಳಲ್ಲಿ ಭಯೋತ್ಪಾದಕರ ಗುಂಪುಗಳೇ ನೀತಿ ನಿರೂಪಣೆಯಲ್ಲಿ ಮಹತ್ವದ ಶಕ್ತಿಗಳಾಗಿವೆ ಎಂದು ಎಂದು ಹೇಳಿದರು.

ಕೆಲ ಉಗ್ರರ ಗುಂಪುಗಳು ಸಂಪೂರ್ಣವಾಗಿ ತರಬೇತಿ ಹೊಂದಿವೆ. ಇತರರು ಇತರೇ ಮಾರ್ಗಗಳ ಮೂಲಕ ತರಬೇತಿ ಪಡೆಯುತ್ತಿದ್ದಾರೆ ಎಂದು ಪಾಕಿಸ್ತಾನದ ಹೆಸರು ಹೇಳದೇ ಆರೋಪಿಸಿದರು.

ಭಯೋತ್ಪಾದನೆ ಮತ್ತು ಉಗ್ರವಾದ ಈಗ ನಾಶದ ಶಕ್ತಿಯಾಗುತ್ತಿವೆ. ಭಯೋ ತ್ಪಾದನೆ ಬೆಳೆಯುತ್ತಿದೆ. ಇದರಿಂದ ಮೃತಪಡುವವರ ಸಂಖ್ಯೆಯೂ ಹೆಚ್ಚುತ್ತಿದೆ. ಧರ್ಮ ಮತ್ತು ಭಯೋತ್ಪಾದನೆಯ ಸಂಪರ್ಕವಾಗದಂತೆ ನೋಡಿಕೊಳ್ಳಬೇಕು ಎಂದರು.

ಧರ್ಮದ ಹೆಸರಿನಲ್ಲಿ ಭಯೋತ್ಪಾದನೆಯನ್ನು ಹಬ್ಬುವವರು ಧರ್ಮ ವಿರೋಧಿಗಳು. ಭಯೋ ತ್ಪಾದನೆ ನಮ್ಮ ಜೀವನವನ್ನು ಬದಲಾಯಿಸುತ್ತಿದೆ’ ಎಂದು ವಿವರಿಸಿದರು.

ಭಯೋತ್ಪಾದನೆ ಯಾವುದೇ ಧರ್ಮಕ್ಕೆ ಸೀಮಿತವಾಗಿಲ್ಲ. ಇದರ ವಿರುದ್ಧ ಹೋರಾಡಲು ಮೌಲ್ಯಗಳ ಬಲ ಮತ್ತು ಧರ್ಮಗಳ ನೈಜ ಸಂದೇಶಗಳ ಬಳಕೆ ಮಾಡಬೇಕು ಎಂದರು.

‘ನಮ್ಮ ದೇಶದ ಎಲ್ಲ ಜನರು, ಅವರು ಮುಸ್ಲಿಂ, ಸಿಖ್‌, ಕ್ರೈಸ್ತ, ಜೈನ, ಬೌದ್ಧ, ಪಾರ್ಸಿಗಳು ಭಾರತದ ಅವಿಭಾಜ್ಯ ಅಂಗ’ಎಂದರು. 200ಕ್ಕೂ ಹೆಚ್ಚು ಧಾರ್ಮಿಕ ಮುಖಂಡರು, ವಿದ್ವಾಂಸರು, ಶಿಕ್ಷಣ ತಜ್ಞರು ಸಮ್ಮೇಳನದಲ್ಲಿ ಭಾಗವಹಿಸುತ್ತಿದ್ದಾರೆ. ಅಖಿಲ ಭಾರತ ಉಲೇಮಾ ಮತ್ತು ಮಶಾಯಿಕ್‌ ಮಂಡಳಿ ಈ ಸಮ್ಮೇಳನವನ್ನು ಆಯೋಜಿಸಿದೆ.

Write A Comment