ಕರ್ನಾಟಕ

2016-17ನೇ ರಾಜ್ಯ ಬಜೆಟ್ ನಲ್ಲಿ ಬೆಂಗಳೂರು ನಗರಕ್ಕೆ ಏನು, ಎಷ್ಟು ದೊರೆಯಿತು….

Pinterest LinkedIn Tumblr

vidhana-soudha11

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ 2016-17 ಸಾಲಿನ ಆಯವ್ಯಯ ಪತ್ರದಲ್ಲಿ ಬೆಂಗಳೂರು ನಗರಕ್ಕೆ ಏನು, ಎಷ್ಟು ದೊರೆಯಿತು ಎಂಬುದರ ಮಾಹಿತಿ ಇಲ್ಲಿದೆ.

ಬೆಂಗಳೂರು ಕೆರೆಗಳ ಅಭಿವೃದ್ಧಿಗೆ 100 ಕೋಟಿ ರು. ಅನುದಾನ
ಬೆಂಗಳೂರಿನಲ್ಲಿ 51.56 ಕಿಲೋ ಮೀಟರ್ ಸಿಗ್ನಲ್ ಫ್ರೀ ಕಾರಿಡಾರ್ ನಿರ್ಮಾಣ.
ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ 112 ರಸ್ತೆಗಳ ಅಭಿವೃದ್ಧಿ.
ಬಿಎಂಟಿಸಿಗೆ 660 ಬಸ್ ಖರೀದಿಗೆ ನಿರ್ಧಾರ. 3 ಹೊಸ ಬೆಂಗಳೂರು ಒನ್ ಸ್ಥಾಪನೆ.
ಬೆಂಗಳೂರಿನಲ್ಲಿ ಮಹಿಳಾ ವಿದ್ಯಾರ್ಥಿ ನಿಲಯಕ್ಕೆ 8 ಕೋಟಿ
ಬೆಂಗಳೂರಿನ ಕೆರೆಗಳ ಅಭಿವೃದ್ಧಿಗೆ ರು. 100 ಕೋಟಿ
ಘನ ತ್ಯಾಜ್ಯ ನಿರ್ವಹಣೆಗೆ ರು. 500 ಕೋಟಿ
ಮಳೆ ನೀರು ಚರಂಡಿ ನಿರ್ಮಾಣಕ್ಕೆ 800 ಕೋಟಿ
ಬೆಂಗಳೂರಿನಲ್ಲಿ ಬಡವರಿಗಾಗಿ 3 ಸಾವಿರ ಬಿಡಿಎ ನಿವೇಶನ ಸ್ಥಾಪನೆ
2016-17ನೇ ಸಾಲಿನಲ್ಲಿ ಬಿಡಿಎನಿಂದ 3 ಸಾವಿರ ಹೊಸ ಫ್ಲಾಟ್ ಗಳ ನಿರ್ಮಾಣ.
2017ರೊಳಗೆ ಕೆಂಪೇಗೌಡ ಬಡಾವಣೆಯ 10 ಸಾವಿರ ನಿವೇಶನಗಳ ಹಂಚಿಕೆ.
ದಕ್ಷಿಣ ಪಿನಾಕಿನಿ ನದಿಗೆ ಬೆಂಗಳೂರಿನಿಂದ ಸಂಸ್ಕರಿಸಿದ ಕೊಳಚೆ ನೀರು ಹರಿಸಲು ಕ್ರಮ
ನಿವೇಶನ ರಹಿತ ಬಡ ಫಲಾನುಭವಿಗಳಿಗೆ ಸೈಟ್.
ಗ್ರಾಮೀಣ ಪ್ರದೇಶದಲ್ಲಿ 10 ಸಾವಿರ ನಿವೇಶನ ಹಂಚಿಕೆ.

ನೀರಾವರಿ ಇಲಾಖೆಗೆ 14, 477 ಕೋಟಿ ರು.ಮೀಸಲು

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಮಂಡಿಸಿದ 2016ನೇ ಸಾಲಿನ ಬಜೆಟ್ ನಲ್ಲಿ ನೀರಾವರಿ ಇಲಾಖೆಗೆ 14 ಸಾವಿರದ 477 ಕೋಟಿ ಮೀಸಲಿಡಲಾಗಿದೆ.

ಈ ಪೈಕಿ ಜಲಸಂಪನ್ಮೂಲ ಮೂಲ ಸೌಕರ್ಯ ಅಭಿವೃದ್ದಿಗೆ 550 ಕೋಟಿ ಅನುದಾನ ನೀಡಲಾಗಿದ್ದು, ನೀರಾವರಿ ಯೋಜನೆಗೆ 3000 ಕೋಟಿ ರು. ಮೀಸಲಿಡಲಾಗಿದೆ. ಮಲಪ್ರಭಾ ನಾಲಾ ಆಧುನೀಕರಣಕ್ಕೆ 962 ಕೋಟಿ ರುಪಾಯಿ ನೀಡಲಾಗಿದ್ದು, ಎತ್ತಿನ ಹೊಳೆ ಹಾಗೂ ಭದ್ರಾ ಮೇಲ್ದಂಡೆ ಯೋಜನೆಗೆ ಪ್ರತ್ಯೇಕ 2 ನಿಗಮಗಳನ್ನು ರಚನೆ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಬಯಲು ಸೀಮೆ ಜಿಲ್ಲೆಗಳಲ್ಲಿನ ನೀರನ ಬರ ನಿಗ್ರಹಕ್ಕೆ ಶಾಶ್ವತ ನೀರಾವರಿ ಯೋಜನೆಗಾಗಿ ವಿಶೇಷ ತಜ್ಞರ ಸಮಿತಿ ಮಾಡಲಾಗುವುದು ಮತ್ತು ಬಾಗಲಕೋಟೆ ಜಿಲ್ಲೆಯ ನವನಗರ ಘಟಕ-2ರ ಮೂಲಸೌಕರ್ಯ ಅಭಿವೃದ್ಧಿಗೆ 550 ಕೋಟಿ ರು.ಗಳನ್ನು ಮೀಸಲಿಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ದಕ್ಷಿಣ ಪಿನಾಕಿನಿ ನದಿಗೆ ಬೆಂಗಳೂರಿನಿಂದ ಸಂಸ್ಕರಿಸಿದ ಕೊಳಚೆ ನೀರು ಹರಿಸಲು ಕ್ರಮ ಕೈಗೊಳ್ಳಲಾಗುವುದು ಮತ್ತು ಕೆರೆಗಳಿಗೆ ನೀರು ಹರಿಸಲು ಗ್ರಾಮದ ಬಳಿ ಏತ ನೀರಾವರಿ ಯೋಜನೆ ಜಾರಿ ಮಾಡಲಾಗುವುದು. ಬೆಂಗಳೂರಿನ ಕೆರೆಗಳ ಅಭಿವೃದ್ಧಿಗೆ 100 ಕೋಟಿ ರು. ಮೀಸಲಿಡಲಾಗಿದ್ದು, ಘನ ತ್ಯಾಜ್ಯ ನಿರ್ವಹಣೆಗೆ 500 ಕೋಟಿ ರು. ಮಳೆ ನೀರು ಚರಂಡಿ ನಿರ್ಮಾಣಕ್ಕೆ 800 ಕೋಟಿ ಮೀಸಲಿಡಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು.

ಸಮಾಜ ಕಲ್ಯಾಣ ಇಲಾಖೆಗೆ 5,464 ಕೋಟಿ ಅನುದಾನ

ಬೆಂಗಳೂರು: ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಮಂಡಿಸಿದ 4ನೇ ಬಜೆಟ್ ನಲ್ಲಿ ಸಮಾಜ ಕಲ್ಯಾಣ ಇಲಾಖೆಗೆ 5,464 ಕೋಟಿ ರುಪಾಯಿ ಅನುದಾನ ಘೋಷಿಸಿದ್ದಾರೆ.

ಡಾ.ಬಿ.ಆರ್ ಅಂಬೇಡ್ಕರ್ 125ನೇ ಜಯಂತಿ ಬೃಹತ್ ಮಟ್ಟದಲ್ಲಿ ಆಚರಣೆ. ಎಸ್ ಸಿ, ಎಸ್ ಟಿ ಪ್ರತಿ ವಿದ್ಯಾರ್ಥಿ ಮಾಸಿಕ ಭೋಜನ ವೆಚ್ಚ 800 ರಿಂದ 1000 ರುಪಾಯಿಗೆ ಹೆಚ್ಚಳ. ಹೋಬಳಿ ಮಟ್ಟದಲ್ಲಿ 125 ಹೊಸ ವಸತಿ ಶಾಲೆಗಳು ಆರಂಭ. 1ರಿಂದ 5ನೇ ರ್ಯಾಂಕ್ ಪಡೆದ ಎಸ್ ಸಿ, ಎಸ್ ಟಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ. ಸಿಎ ಹಾಗೂ ಐಸಿಡಬ್ಲ್ಯೂ,ಕಂಪನಿ ಸೆಕ್ರೇಟರಿ ಪರೀಕ್ಷೆಗಳಲ್ಲಿ ಉತ್ತೀರ್ಣರಾದವರಿಗೆ ಪ್ರೋತ್ಸಾಹಧನ, 50 ಸಾವಿರ ಹಾಗೂ 1 ಲಕ್ಷ ರೂಪಾಯಿ ಪ್ರೋತ್ಸಾಹ ಧನ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಬೆಂಗಳೂರಿನಲ್ಲಿ ಮಹಿಳಾ ವಿದ್ಯಾರ್ಥಿ ನಿಲಯಕ್ಕೆ 8 ಕೋಟಿ ,ಮೈಸೂರು ನಗರದಲ್ಲಿ 60 ಕೋಟಿ ವೆಚ್ಚದಲ್ಲಿ ಜಿಲ್ಲಾಸ್ಪತ್ರೆ ಹಂಪಿ ವಿವಿಯಲ್ಲಿ ಮಹರ್ಷಿ ವಾಲ್ಮೀಕಿ ಅಧ್ಯಯನ ಪೀಠ ಸ್ಥಾಪನೆ. 5 ಸರ್ಕಾರಿ ಕಾಲೇಜುಗಳಲ್ಲಿ ಎಂಜಿನಿಯರಿಂಗ್ ಶಿಕ್ಷಣ. ಕರ್ನಾಟಕ ಚಿತ್ರಕಲಾ ಪರಿಷತ್ ಗೆ 1.5 ಕೋಟಿ ರೂಪಾಯಿ ಅನುದಾನ.

Write A Comment