ಕರ್ನಾಟಕ

ಕುಡಿದ ಅಮಲಿನಲ್ಲಿ ಬೆಂಕಿಗೆ ಮಗ ಬಲಿ-ತಾಯಿ ಗಂಭೀರ

Pinterest LinkedIn Tumblr

fire

ಬೆಂಗಳೂರು: ಕುಡಿದ ಮತ್ತಿನಲ್ಲಿ ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂಡು ಮನೆಗೆ ಬಂದ ಗಾರೆ ಕೆಲಸಗಾರನೊಬ್ಬ ಗ್ಯಾಸ್ ಸ್ಟೌವ್ ಅಂಟಿಸಿ ಬೆಂಕಿ ಹೊತ್ತಿಸಿಕೊಂಡು ಮೃತಪಟ್ಟರೆ ಆತನ ವೃದ್ಧ ತಾಯಿ ಗಂಭೀರವಾಗಿ ಗಾಯಗೊಂಡಿರುವ ದುರ್ಘಟನೆ ಹುಳಿಮಾವುವಿನ ಜಂಬುಸವಾರಿ ದಿಣ್ಣೆಯಲ್ಲಿ ನಿನ್ನೆ ರಾತ್ರಿ ನಡೆದಿದೆ.

ಜಂಬುಸವಾರಿ ದಿಣ್ಣೆಯ ೪ನೇ ಕ್ರಾಸ್‌ನ ಏಳುಮಲೈ(೪೫)ಮೃತಪಟ್ಟವರು,ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಗೊಂಡಿರುವ ಕುಪ್ಪಮ್ಮ(೭೫)ಸ್ಥಿತಿ ಗಂಭೀರವಾಗಿದೆ.

ಕುಡಿತದ ಚಟ ಅಂಟಿಸಿಕೊಂಡಿದ್ದ ಏಳುಮಲೈ ಇತ್ತೀಚಿಗೆ ಕುಡಿತದ ಚಟ ಅಂಟಿಸಿಕೊಂಡಿದ್ದು,ಸರಿಯಾಗಿ ಕೆಲಸಕ್ಕೆ ಹೋಗದೇ ಅಲೆಯುತ್ತಾ ತಾಯಿ ತಂಗಿಗೆ ಕಿರುಕುಳ ನೀಡುತ್ತಿದ್ದನು ಇದರಿಂದ ಬೇಸತ್ತ ತಾಯಿ ಕುಪ್ಪಮ್ಮ ಆತನನ್ನು ಮನೆಯಿಂದ ಹೊರಹಾಕಿದ್ದರು.

ಮನೆಗೆ ಸಮೀಪದಲ್ಲೆ ಏಳುಮಲೈ ಕೊಠಡಿಯೊಂದನ್ನು ಬಾಡಿಗೆಗೆ ತೆಗೆದುಕೊಂಡು ಅಲ್ಲಿ ವಾಸಿಸುತ್ತಿದ್ದನು.
ರಾತ್ರಿ ಕಂಠಮಟ್ಟ ಕುಡಿದು ಕೊಠಡಿಗೆ ಬಂದ ಆತ ಕ್ಯಾನ್‌ನಲ್ಲಿದ್ದ ಸೀಮೆ ಎಣ್ಣೆಯನ್ನು ಮೈಮೇಲೆ ಸುರಿದುಕೊಂಡು ರಾತ್ರಿ ೧೧ರ ವೇಳೆ ತಾಯಿ ಮನೆಗೆ ಹೋಗಿದ್ದಾನೆ.
ಮನೆಯ ಬಾಗಿಲು ತೆಗೆದ ತಾಯಿ ಮನೆಯೊಳಗೆ ಬಿಟ್ಟುಕೊಂಡಿದ್ದು ಸ್ವಲ್ಪ ಹೊತ್ತಿನ ನಂತರ ಗ್ಯಾಸ್ ಸ್ಟೌವ್ ಅಂಟಿಸಲು ಹೋಗಿದ್ದಾನೆ ಸ್ಟೌವ್ ಅಂಟಿಸಿದ ಕೂಡಲೇ ಬೆಂಕಿ ಹೊತ್ತಿಕೊಂಡಿದ್ದು ಬೆಂಕಿಯ ಕೆನ್ನಾಲಿಗೆಯಲ್ಲಿ ಸಿಲುಕಿದ ಮಗನನ್ನು ರಕ್ಷಿಸಲು ಹೋದ ತಾಯಿಗೆ ಬೆಂಕಿ ತಗುಲಿದೆ.

ಇಬ್ಬರನ್ನು ಸ್ಥಳೀಯರ ನೆರವಿನೊಂದಿಗೆ ರಕ್ಷಿಸಿ ಪಕ್ಕದ ಕೊಠಡಿಯಲ್ಲಿದ್ದ ಮಗಳು ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದರಾದರೂ ಮಾರ್ಗ ಮಧ್ಯೆ ಏಳುಮಲೈ ಮೃತಪಟ್ಟಿದ್ದಾನೆ ತಾಯಿ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದಾರೆ.ಹುಳಿಮಾವು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Write A Comment