
ಬೆಂಗಳೂರು: ನಕಲಿ ಕೀ ಬಳಸಿ ಕಳವು ಮಾಡಿದ ಬೈಕ್ಗಳನ್ನು ಓಎಲ್ಎಕ್ಸ್ನಲ್ಲಿ ಮಾರಾಟ ಮಾಡುತ್ತಿದ್ದ ಖತರ್ನಾಕ್ ಆರೋಪಿಯೊಬ್ಬನನ್ನು ಬಂಧಿಸಿರುವ ನ್ನು ಮಾಗಡಿರಸ್ತೆ ಪೊಲೀಸರು ಬಂಧಿಸಿದ್ದಾರೆ.
ಚಿಕ್ಕಬಾಣಾವರದ ಮೇದರಹಳ್ಳಿಯ ನವಾಜ್ ವೈ.ಕೆ(೨೫)ಬಂಧಿತ ಆರೋಪಿಯಾಗಿದ್ದಾನೆ ಬಂಧಿತನಿಂದ ೮ ಸಾವಿರ ನಗದು,ಚಿನ್ನಾಭರಣಗಳು,೫ ಬೈಕ್ಗಳು ಸೇರಿ ೫ ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿಸಿಪಿ ಲಾಬೂರಾಮ್ ಅವರು ತಿಳಿಸಿದ್ದಾರೆ.
ಆರೋಪಿಯು ಸ್ನೇಹಿತರ,ಸಂಬಂಧಿಕರ ದ್ವಿಚಕ್ರ ವಾಹನಗಳನ್ನು ಚಲಾಯಿಸಿ ಕೊಡುವುದಾಗಿ ಹೇಳಿ ತೆಗೆದುಕೊಂಡು ಹೋಗಿ ನಕಲಿ ಕೀಯನ್ನು ಮಾಡಿಸಿ, ನಕಲಿ ದಾಖಲಾತಿಗಳನ್ನು ಸೃಷ್ಠಿಸಿ, ಬೇರೆ ಹೆಸರಿನಲ್ಲಿ ಸಿಮ್ ಪಡೆದು ಆಕ್ಟಿವೇಷನ್ ಆದ ನಂತರ ನಕಲಿ ಕೀಯನ್ನು ಬಳಸಿ, ವಾಹನವನ್ನು ಕಳವು ಮಾಡಿ ಅವುಗಳನ್ನು ಓಎಲ್ಎಕ್ಸ್ನಲ್ಲಿ ಹಾಕಿ ಮಾರಾಟ ಮಾಡಿ ಮೋಜಿನ ಜೀವನ ನಡೆಸುತ್ತಿದ್ದನು.
ಆರೋಪಿಯು ಓಎಲ್ಎಕ್ಸ್ನಲ್ಲಿ ಮಾರಾಟ ಮಾಡಿದ್ದ ೨ಬಜಾಜ್ ಪಲ್ಸರ್ ,೧ ರಾಯಲ್ ಎನ್ಫೀಲ್ಡ್ ಒಂದು ಆಕ್ಟೀವಾ ಹೊಂಡಾ ಒಂದು ಟಿ.ವಿ.ಎಸ್.ವಿಕ್ಟರ್ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ, ಆರೋಪಿಯು ವಿದ್ಯಾರಣ್ಯಪುರದಲ್ಲಿ ಛೇವರ್ಲೆಟ್ ಬಿಟ್ ವಾಹನವನ್ನು ಕಳವು ಮಾಡಿ, ಅದನ್ನು ಓಎಲ್ಎಕ್ಸ್ನಲ್ಲಿ ವೈಟ್ಫೀಲ್ಡ್ನ ವ್ಯಕ್ತಿಯೊಬ್ಬರಿಗೆ ಮಾರಾಟ ಮಾಡಿದ್ದು ಈ ಬಗ್ಗೆ ವೈಟ್ಫೀಲ್ಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಆರೋಪಿಯ ಬಂಧನದಿಂದ ಮಾಗಡಿರಸ್ತೆ,ಶೇಷಾದ್ರಿಪುರ, ಜ್ಞಾನಭಾರತಿ,ಸಿಟಿ ರೈಲ್ವೆ , ಕೆ.ಜಿ.ಹಳ್ಳಿ, ವಿದ್ಯಾರಣ್ಯಪುರ,ವೈಟ್ಫೀಲ್ಡ್ ಪೊಲೀಸ್ ಠಾಣೆಗಳ ಕಳವು ಪ್ರಕರಣಗಳು ಪತ್ತೆಯಾಗಿವೆ.