ಮನೋರಂಜನೆ

ಕಿರಗೂರಿನ ಗಯ್ಯಾಳಿಗಳಿಗೆ ಕತ್ತರಿ, ಸಾಹಿತಿಗಳ ಪ್ರತಿಭಟನೆ

Pinterest LinkedIn Tumblr

kiri

ಬೆಂಗಳೂರು: ಸಾಹಿತಿ ಪೂರ್ಣಚಂದ್ರ ತೇಜಸ್ವಿಯವರ “ಕಿರಗೂರಿನ ಗಯ್ಯಾಳಿಗಳು” ಕಾದಂಬರಿಯನ್ನು ಆಧರಿಸಿ ತಯಾರಿಸಿರುವ ಸಿನಿಮಾಕ್ಕೆ ಹಲವು ಕಡೆಗಳಲ್ಲಿ ಸೆನ್ಸಾರ್ ಮಾಡಿರುವುದನ್ನು ವಿರೋಧಿಸಿ ಸಾಹಿತಿಗಳು, ಕಲಾವಿದರು ಇಂದು ಕೋರಮಂಗಲದ ಕೇಂದ್ರೀಯ ಸದನದ ಎದುರು ಪ್ರತಿಭಟನೆ ನಡೆಸಿದರು.

ಹಿರಿಯ ವಕೀಲ ಹಾಗೂ ಬರಹಗಾರ ಡಾ.ಸಿ.ದ್ವಾರಕನಾಥ್ ಮಾತನಾಡಿ, ಕನ್ನಡದ ಶೇಷ್ಟ್ರ ಕಾದಂಬರಿಗಳಲ್ಲಿ ಒಂದಾದ ಕಿರಗೂರಿನ ಗಯ್ಯಾಳಿಗಳು ಕಾದಂಬರಿಯನ್ನು ಚಲನಚಿತ್ರವಾಗಿ ಮಾಡಲಾಗಿದ್ದು, ಅವುಗಳಲ್ಲಿ ಹಲವು ಕಡೆ ಬರುವ ಗ್ರಾಮೀಣ ಭಾಗದ ಸೊಗಡಿನ ಮಾತು, ಬೈಗುಳಗಳಿಗೆ ಸೆನ್ಸಾರಿ ಮಂಡಳಿ ಕತ್ತರಿಪ್ರಯೋಗ ಮಾಡಿರುವುದು ಖಂಡನೀಯ. ಹಲವು ಕಡೆಗಳಲ್ಲಿ ಈ ಬೈಗುಳಗಳಿಗೆ ಕತ್ತರಿ ಹಾಕಿರುವುದರಿಂದ ಚಿತ್ರದ ಸತ್ವವೇ ಇಲ್ಲದಂತಾಗಿದೆ. ಅದೇನು ಕೆಟ್ಟ ಪದಗಳಲ್ಲ. ಚಡ್ಡಿ ಎಂಬುದು ಹೇಗೆ ಕೆಟ್ಟ ಪದವಾಗುತ್ತದೆ ಎಂದು ಪ್ರಶ್ನಿಸಿದ ಅವರು, ಇದು ಗ್ರಾಮೀಣ ಭಾಗದಲ್ಲಿ ಬಳಸುವ ಸಾಧಾರಣ ಪದಗಳಾಗಿವೆ. ತಕ್ಷಣ ಸೆನ್ಸಾರ್ ಮಂಡಳಿ ಕತ್ತರಿ ಹಾಕಿರುವ ಎಲ್ಲ ಪದಗಳನ್ನು ಬಳಸಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.

ಸೆನ್ಸಾರ್ ಮಂಡಳಿಯ ಪರವಾಗಿ ಅಧಿಕಾರಿಗಳು ಮನವಿ ಸ್ವೀಕರಿಸಿ, ಸೋಮವಾರ ಮಾತುಕತೆ ನಡೆಸುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೈಬಿಡಲಾಯಿತು. ಪ್ರತಿಭಟನೆಯಲ್ಲಿ ಮುಖಂಡರಾದ ಬಿ.ಸುರೇಶ್, ಮಂಡ್ಯ ರಮೇಶ್, ಮತ್ತಿತರರು ಭಾಗವಹಿಸಿದ್ದರು.

Write A Comment