ಕರ್ನಾಟಕ

ಸಾಂಕ್ರಾಮಿಕ ರೋಗ ಮಂಗನಕಾಯಿಲೆ ಪತ್ತೆ

Pinterest LinkedIn Tumblr

monkey_webಖಾನಾಪುರ: ಬೆಳಗಾವಿ ಜಿಲ್ಲೆ ಖಾನಾಪುರದಲ್ಲಿ ಸಾಂಕ್ರಾಮಿಕ ರೋಗ ಮಂಗನ ಕಾಯಿಲೆ ಕಾಣಿಸಿಕೊಂಡಿದೆ. ಖಾನಾಪುರ ತಾಲೂಕಿನಲ್ಲಿ ಸುಮಾರು 25 ಜನಕ್ಕೆ ರೋಗ ತಗುಲಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಖಾನಾಪೂರ ತಾಲೂಕಿನ ಆಮ್ಟೆ, ಚಾಪೋಲಿ, ಕಣಕುಂಬಿ ಗ್ರಾಮಗಳಲ್ಲಿ ವಿವಿಧ ಜನರಿಗೆ ಕಾಯಿಲೆ ಹರಡಿದ ಶಂಕೆಯಿದ್ದು, ಮಂಗಗಳು ಸತ್ತರೆ ಯಾರು ಅವುಗಳ ಸಮೀಪ ಹೋಗಬೇಡಿ ಎಂದು ಸಾರ್ವಜನಿಕರಿಗೆ ಅಧಿಕಾರಿಗಳ ಮನವಿ ಮಾಡಿದ್ದಾರೆ.

1956 ರಲ್ಲಿ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಕಿರೆಸೂರು ಗ್ರಾಮದಲ್ಲಿ ಈ ರೋಗ ಮೊದಲು ಪತ್ತೆಯಾಗಿತ್ತು. ರೋಗ ನಿಯಂತ್ರಣಕ್ಕೆ ಜಿಲ್ಲಾ ಆರೋಗ್ಯಾಧಿಕಾರಿಗಳು ಮತ್ತು ಅರಣ್ಯ ಸಂರಕ್ಷಣಾಧಿಕಾರಿಗಳು ಶ್ರಮಿಸುತ್ತಿದ್ದಾರೆ.

Write A Comment