ರಾಷ್ಟ್ರೀಯ

ಆಧಾರ್ ಯೋಜನೆಯಲ್ಲಿ ಈಗ ಖಾಸಗಿತನಕ್ಕೆ ರಕ್ಷಣೆ ಇದೆ, ಜೇಟ್ಲಿ

Pinterest LinkedIn Tumblr

16-arun-jaitly-webನವದೆಹಲಿ: ಲೋಕಸಭೆಯು ಕಳೆದವಾರ ಅಂಗೀಕರಿಸಿರುವ ಆಧಾರ್ ಮಸೂದೆಯು ಹಿಂದಿನ ಯುಪಿಯ ಸರ್ಕಾರದ ಕಲ್ಪನೆಯ ಕೂಸು, ಆದರೆ ಈಗ ಅದರಲ್ಲಿ ಪೌರರ ಖಾಸಗಿತನಕ್ಕೆ ರಕ್ಷಣೆ ಒದಗಿಸಲಾಗಿದೆ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಬುಧವಾರ ರಾಜ್ಯಸಭೆಗೆ ತಿಳಿಸಿದರು.

ಆಧಾರ್ ಮಸೂದೆಯನ್ನು ವಿತ್ತ ಮಸೂದೆಯಾಗಿ ಕಳೆದ ವಾರ ಲೋಕಸಭೆ ಅಂಗೀಕರಿಸಿದ್ದು, ಈದಿನ ರಾಜ್ಯಸಭೆಯಲ್ಲಿ ಸಿಪಿಐ(ಎಂ) ನಾಯಕ ಸೀತಾರಾಂ ಯೆಚೋರಿ ಮತ್ತು ವಿತ್ತ ಸಚಿವ ಅರುಣ್ ಜೇಟ್ಲಿ ಮಧ್ಯೆ ತೀವ್ರ ಮಾತಿನ ಚಕಮಕಿ ನಡೆಯಿತು. ಪ್ರಸ್ತಾಪಿತ ಮಸೂದೆಯನ್ನು ಸಾಮೂಹಿಕ ಕಣ್ಗಾವಲು ಸಲುವಾಗಿ ದುರ್ಬಳಕೆ ಮಾಡುವ ಸಾಧ್ಯತೆ ಇದೆ ಎಂದು ಸಾಮಾಜಿಕ ಕಾರ್ಯಕರ್ತರು ಕೇಂದ್ರವನ್ನು ಟೀಕಿಸಿದ್ದಾರೆ.

ಸುಮಾರು 980 ಮಿಲಿಯ (98 ಕೋಟಿ) ನಾಗರಿಕರು ಆಧಾರ್ ಹೆಸರಿನ ವಿಶಿಷ್ಟ ಬಯೋಮೆಟ್ರಿಕ್ ಸಂಖ್ಯೆ ಸಲುವಾಗಿ ನೋಂದಾಯಿಸಿಕೊಂಡಿದ್ದಾರೆ. 2009ರ ವೇಳೆಗೆ ಯೋಜನೆ ಸಂಪೂರ್ಣವಾಗಿ ಜಾರಿಗೆ ಬರಲಿದೆ. 2016ರ ಕೊನೆಯ ಅಂತ್ಯದ ವೇಳೆಗೆ ಎಲ್ಲಾ ಅರ್ಹ 1.1 ಬಿಲಿಯನ್ (110 ಕೋಟಿ) ಮಂದಿಯನ್ನು ಯೋಜನೆಯಲ್ಲಿ ನೋಂದಾಯಿಸಲು ಭಾರತದ ವಿಶಿಷ್ಟ ಗುರುತಿನ ಸಂಖ್ಯೆ ಪ್ರಾಧಿಕಾರ (ಯುಐಡಿಎಐ) ಉದ್ದೇಶಿಸಿದೆ. ಮಾಹಿತಿಯನ್ನು ಏತಕ್ಕಾಗಿ ಸಂಗ್ರಹಿಸಲಾಗುತ್ತಿದೆ, ಮಾಹಿತಿ ಸಂಗ್ರಹದ ಉದ್ದೇಶವೇನು ಎಂಬುದು ಯುಪಿಎ ಯೋಜನೆಯಲ್ಲಿ ಸ್ಪಷ್ಟವಿರಲಿಲ್ಲ. ಈಗ ಕೇಂದ್ರದ ಯೋಜನೆಗಳ ಲಾಭಗಳನ್ನು ನೇರವಾಗಿ ಫಲಾನುಭವಿಗಳಿಗೆ ಯೋಜನೆ ಮೂಲಕ ತಲುಪಿಸಲು ಇದು ಅನುಕೂಲವಾಗಲಿದೆ ಎಂದು ಜೇಟ್ಲಿ ನುಡಿದರು.

Write A Comment