ರಾಷ್ಟ್ರೀಯ

ಕಮಲ್ ಹಾಸನ್ ಜತೆಗೆ ಕ್ರಿಕೆಟ್ ಆಡಲಿದ್ದಾರೆ ರಜನಿಕಾಂತ್!

Pinterest LinkedIn Tumblr

SOUTH-WEBಚೆನ್ನೈ: ಸೂಪರ್​ಸ್ಟಾರ್ ರಜನಿಕಾಂತ್, ಕಮಲ್ ಹಾಸನ್ ಸೇರಿದಂತೆ ದಕ್ಷಿಣ ಭಾರತದ ಸುಮಾರು ಐವತ್ತು ಸ್ಟಾರ್ ನಟರು ಮಾ 17ರಂದು ಎಂ ಎ ಚಿದಂಬರಂ ಕ್ರೀಡಾಂಗಣದಲ್ಲಿ್ಲ ಸಿಕ್ಸರ್, ಬೌಂಡರಿ ಸಿಡಿಸಲು ಕಾತರರಾಗಿದ್ದಾರೆ.

ಹೌದು, ತಮ್ಮ ಸ್ಟಾರ್ ನಟರನ್ನು ಅಭಿಮಾನಿಗಳು ಕ್ರೀಡಾಂಗಣದಲ್ಲಿ ಕಣ್ತುಂಬಿಕೊಳ್ಳಬಹುದಾಗಿದೆ. ದಕ್ಷಿಣ ಭಾರತ ಚಲನಚಿತ್ರ ಕಲಾವಿದರ ಸಂಘ ಸೂಪರ್ ಸಿಕ್ಸ್ ಸ್ಟಾರ್ ಕ್ರಿಕೆಟ್ ಈ ಪಂದ್ಯವನ್ನು ಆಯೋಜನೆ ಮಾಡಿದೆ. ಈ ಪಂದ್ಯದಲ್ಲಿ ದಕ್ಷಿಣ ಭಾರತದ ಸ್ಟಾರ್ ನಟರು ಕ್ರಿಕೆಟ್ ಆಡಲಿದ್ದಾರೆ. ಒಟ್ಟು ಏಳು ತಂಡಗಳಾಗಿ ವಿಂಗಡಿಸಲಾಗಿದ್ದು, ಪ್ರತಿ ಪಂದ್ಯ ಆರು ಓವರ್​ಗೆ ಸೀಮಿತ. ನಾಲ್ಕು ಕ್ವಾಟರ್ ಫೈನಲ್, ಎರಡು ಸೆಮಿ ಫೈನಲ್ ಹಾಗೂ ಫೈನಲ್ ಗುರುವಾರವೇ ನಡೆಯಲಿದೆ.

ಈ ಪಂದ್ಯ ಆಯೋಜನೆಯ ಮುಖ್ಯಉದ್ದೇಶ ಟಿ ನಗರದಲ್ಲಿರುವ ದಕ್ಷಿಣ ಭಾರತ ಚಲನಚಿತ್ರ ಕಲಾವಿದರ ಸಂಘದ ಕಟ್ಟಡಕ್ಕೆ ಹಣ ಸಂಗ್ರಹ ಮಾಡುವುದು ಎಂದು ದಕ್ಷಿಣ ಭಾರತ ಚಲನಚಿತ್ರ ಕಲಾವಿದರ ಸಂಘದ ಅಧ್ಯಕ್ಷ ನಾಸ್ಸರ್ ಬುಧವಾರ ತಿಳಿಸಿದ್ದಾರೆ.

Write A Comment