ಕರ್ನಾಟಕ

ಬೆಳ್ಳಂಬೆಳಗ್ಗೆ 10 ಕುರಿಗಳ ರಕ್ತ ಹೀರಿ ಕಾಡಿಗೆ ಚಿರತೆ ಪರಾರಿ

Pinterest LinkedIn Tumblr

kuriಕೋಲಾರ, ಮಾ.13-ಹೋಬಳಿ ಕೇಂದ್ರದ ಜನವಸತಿ ಪ್ರದೇಶಕ್ಕೆ ಚಿರತೆಯೊಂದು ದಾಳಿ ಮಾಡಿ 10 ಕುರಿಗಳನ್ನು ಬಲಿ ಪಡೆದಿದ್ದು ವೇಮಗಲ್‌ನಲ್ಲಿ ಆತಂಕ ಸೃಷ್ಟಿ ಮಾಡಿದೆ.

ಬೆಳಗಿನ ಜಾವ ಪಟ್ಟಣಕ್ಕೆ ನುಗ್ಗಿರುವ ಚಿರತೆ ಪಾತಾಂಡಹಳ್ಳಿಯ ವೆಂಕಟಸ್ವಾಮಪ್ಪ ಎಂಬುವರಿಗೆ ಸೇರಿದ 10 ಕುರಿಗಳ ರಕ್ತ ಹೀರಿ ಪರಾರಿಯಾಗಿದೆ. ಸುದ್ದಿ ತಿಳಿದು ಡಿಎಫ್‌ಒ ರಾಮಲಿಂಗೇಗೌಡ ಅವರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ಪ್ರತಿ ಕುರಿಗೆ 5 ಸಾವಿರ ರೂ. ಪರಿಹಾರ ನೀಡುವುದಾಗಿ ತಿಳಿಸಿದ್ದಾರೆ.

ಚಿರತೆ ಹೆಜ್ಜೆ ಗುರುತು ಪತ್ತೆಯಾಗಿದ್ದು ಪಟ್ಟಣ ಸುತ್ತಮುತ್ತ ಗಸ್ತು ಹೆಚ್ಚಿಸಿರುವುದಾಗಿ ತಿಳಿಸಿದ್ದಾರೆ.ಗಸ್ತಿಗಾಗಿ 2 ತಂಡಗಳನ್ನು ರಚಿಸಿದ್ದು, ಈ ತಂಡಗಳು ಬಂಗಾರಪೇಟೆ, ಮಾಲೂರು, ಮುಳಬಾಗಿಲು ಪ್ರದೇಶದಲ್ಲಿ ರಾತ್ರಿ 10 ರಿಂದ ಬೆಳಗಿನ ಜಾವ 3 ಗಂಟೆವರೆಗೆ ಗಸ್ತು ಕಾರ್ಯ ಮಾಡಲಿವೆ ಎಂದು ಹೇಳಿದ್ದಾರೆ.

ಪಟ್ಟಣಕ್ಕೆ ಚಿರತೆ ಲಗ್ಗೆಯಿಟ್ಟಿರುವುದರಿಂದ ಇಲ್ಲಿನ ಜನತೆ ಒಳಗಾಗಿದ್ದು ಹೊರಗೆ ಓಡಾಡಲು ಹೆದರುತ್ತಿದ್ದಾರೆ. ಬೇಸಿಗೆಯಾದ್ದರಿಂದ ಸೆಖೆಯೆಂದು ಮನೆಯ ಹೊರಗೆ ಜನತೆ ಮಲಗುತ್ತಿದ್ದು, ಎಚ್ಚರದಿಂದ ಇರುವಂತೆ ಡಿಎಫ್‌ಒ ಅವರು ಸೂಚಿಸಿದ್ದಾರೆ.

Write A Comment