ಕರ್ನಾಟಕ

ಬದಲಾಗಲಿದೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್ಎಸ್ಎಸ್) ಸಮವಸ್ತ್ರ

Pinterest LinkedIn Tumblr

rssಬೆಂಗಳೂರು , ಮಾ. 13 : ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನೂತನ ಸಮವಸ್ತ್ರದ ಚರ್ಚೆಯ ತೀರ್ಮಾನ ಕೊನೆಗೂ ಅಂತಿಮ ಘಟ್ಟಕ್ಕೆ ತಲುಪಿದೆ. 1925 ರಿಂದ ಬಳಸುತ್ತಿದ್ದ ಖಾಕಿ ಚಡ್ಡಿ ಹಾಗೂ ಬಿಳಿ ಅಂಗಿಯು ಹೊಸ ರೂಪಕ್ಕೆ ಮಾರ್ಪಡಲಿದೆ. ಬಹಳ ದಿನಗಳಿಂದ ಹೊಸ ಸಮವಸ್ತ್ರದ ರೂಪದಲ್ಲಿ ಚಡ್ಡಿಯ ಬದಲು ಪ್ಯಾಂಟ್ ಬಳಸುವ ಬಗ್ಗೆ ಚರ್ಚೆಯಲ್ಲಿತ್ತು. ಆದರೆ ಸಂಪೂರ್ಣವಾಗಿ ಯಾವ ರೀತಿಯ ಬದಲಾವಣೆಯಾಗಲಿದೆ ಎಂಬುದು ಜಿಜ್ಞಾಸೆಯಾಗಿತ್ತು. ರಾಜಸ್ಥಾನದಲ್ಲಿ ನಡೆದ ಮೂರು ದಿನಗಳ ಅಖಿಲ ಭಾರತೀಯ ಪ್ರತಿನಿಧಿ ಸಭೆಯಲ್ಲಿ ಈ ಬಗ್ಗೆ ಸುಧೀರ್ಘವಾಗಿ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗಿದೆ.

ಈ ಬಗ್ಗೆ ಇಂದು ಸವಿವರವಾಗಿ ಘೊಷಿಸಲಾಗುವುದು ಎಂದು ಆರ್.ಎಸ್.ಎಸ್ ಪ್ರಮುಖರೊಬ್ಬರು ತಿಳಿಸಿದ್ದಾರೆ.

ಬದಲಾಗುತ್ತಿರುವ ಕಾಲದೊಂದಿಗೆ ಯುವ ಜನತೆಯನ್ನು ಗಮನಲ್ಲಿಟ್ಟುಕೊಂಡು ನೀಲಿ ಅಥವಾ ಕಪ್ಪು ಬಣ್ಣದ ಪ್ಯಾಂಟ್, ಬಿಳಿ ಬಣ್ಣದ ಟೀಶರ್ಟ್, ಕಪ್ಪು ಬಣ್ಣದ ಕ್ಯಾನ್ವಾಸ್ ಬೆಲ್ಟ್ ಹಾಗೂ ಕಪ್ಪು ಟೋಪಿ ಮುಂದಿನ ಹೊಸ ಸಮವಸ್ತ್ರವಾಗಲಿದೆ. ಸಮವಸ್ತ್ರ ಬದಲಾವಣೆಯ ಬಗ್ಗೆ ಕಳೆದ ವರ್ಷ ಆರ್.ಎಸ್.ಎಸ್. ಪ್ರಧಾನ ಕಚೇರಿಯಾದ ನಾಗ್ಪುರದಲ್ಲಿ ಚಿಂತನೆ ನಡೆಸಲಾಗಿತ್ತು ಹಾಗೂ ಐಟಿ ಪ್ರೊಫೆಶನಲ್ಸ್ ವ್ಯಕ್ತಿಗಳಿಗೆ ತಮ್ಮ ಶಾಖೆಗಳಲ್ಲಿ ಟ್ರ್ಯಾಕ್ ಪ್ಯಾಂಟ್ ಧರಿಸಲು ಅವಕಾಶ ನೀಡಿತ್ತು.

Write A Comment