ರಾಷ್ಟ್ರೀಯ

ಅಸ್ಸಾಂ, ಮೇಘಾಲಯ, ನೇಪಾಳದಲ್ಲಿ ಲಘು ಭೂಕಂಪನ

Pinterest LinkedIn Tumblr

bhooಗುವಾಹಟಿ, ಶಿಲ್ಲಾಂಗ್, ಕಠ್ಮಂಡು(ಪಿಟಿಐ): ಈಶಾನ್ಯ ಭಾರತದ ಅಸ್ಸಾಂ, ಮೇಘಾಲಯ ಹಾಗೂ ನೇಪಾಳದಲ್ಲಿ ಭಾನುವಾರ ಸಂಜೆ ಲಘು ಭೂಕಂಪನ ಸಂಭವಿಸಿದೆ. ಯಾವುದೇ ಸಾವು ನೋವು ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ.

ನೇಪಾಳದ ಪಶ್ಚಿಮ ಕಠ್ಮಂಡುವಿನಿಂದ 80 ಕಿ.ಮೀ.ದೂರದಲ್ಲಿ 4.8 ತೀವ್ರತೆಯ ಭೂಕಂಪನ ಸಂಭವಿಸಿದೆ. ಯಾವುದೇ ಸಾವು ನೋವು ಸಂಬವಿಸಿಲ್ಲ.

ಈಶಾನ್ಯ ಭಾರತದ ಅಸ್ಸಾಂನಲ್ಲಿ ಸಂಜೆ ಲಘು ಭೂಕಂಪನ ಉಂಟಾಗಿದ್ದು; ರಿಕ್ಟರ್‌ ಮಾಪಕದಲ್ಲಿ 4.3 ತೀವ್ರತೆ ದಾಖಲಾಗಿದೆ. 10 ಕಿ.ಮೀ. ಆಳದಲ್ಲಿ ಕೇಂದ್ರ ಬಿಂದು ಇತ್ತು. ಮೇಘಾಲಯದ ರಾಜಧಾನಿ ಶಿಲ್ಲಾಂಗ್‌ನಲ್ಲಿ ಸಂಜೆ 4.4ಕ್ಕೆ ಭೂಮಿ ಕಂಪಿಸಿದ ಅನುಭವವಾಗಿದ್ದು, ಜನರು ಮನೆಗಳಿಂದ ಹೊರಗೆ ಓಡಿ ಬಂದಿದ್ದಾರೆ. ರಿಕ್ಟರ್‌ ಮಾಪಕದಲ್ಲಿ 4.3 ತೀವ್ರತೆ ದಾಖಲಾಗಿದೆ ಎಂದು ಭೂಗರ್ಭ ಮಾಪನಾ ಇಲಾಖೆ ತಿಳಿಸಿದೆ.

Write A Comment