ರಾಷ್ಟ್ರೀಯ

ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಚೀನಾ ಸೇನೆ ಪತ್ತೆ

Pinterest LinkedIn Tumblr

China-Armyಶ್ರೀನಗರ (ಪಿಟಿಐ): ಪದೇ ಪದೇ ಲಡಾಖ್‌ ಪ್ರದೇಶದಲ್ಲಿ ಅಕ್ರಮವಾಗಿ ನುಗ್ಗುತ್ತಿದ್ದ ಚೀನಾ ಸೇನೆಯು ಇದೀಗ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ(ಪಿಒಕೆ) ಗಡಿ ನಿಯಂತ್ರಣ ರೇಖೆಯಲ್ಲಿ ಕಾಣಿಸಿಕೊಂಡಿದ್ದು, ಭದ್ರತಾ ಆತಂಕ ಸೃಷ್ಟಿಸಿದೆ.

ಉತ್ತರ ಕಾಶ್ಮೀರದ ನೌಗಮ್‌ ವಲಯದಲ್ಲಿ ಚೀನೀಸ್ ಪೀಪಲ್ಸ್‌ ಲಿಬರೇಶನ್ ಆರ್ಮಿಯ(ಪಿಎಲ್‌ಎ) ಕೆಲವು ಹಿರಿಯ ಅಧಿಕಾರಿಗಳು ಭಾರತೀಯ ಸೇನೆಗೆ ಗೋಚರಿಸಿದ್ದಾರೆ. ಈ ಕುರಿತು ಪಾಕ್ ಸೇನಾಧಿಕಾರಿಗಳನ್ನು ಪ್ರಶ್ನಿಸಲಾಗಿ, ಗಡಿನಿಯಂತ್ರಣ ರೇಖೆಯುದ್ದಕ್ಕೂ ಮೂಲಸೌಕರ್ಯ ನಿರ್ಮಿಸಿಲು ಚೀನಾ ಪಡೆಗಳು ಬಂದಿವೆ ಎಂದು ತಿಳಿಸಿರುವುದಾಗಿ ಮೂಲಗಳು ಹೇಳಿವೆ.

ಈ ಕುರಿತು ಭಾರತೀಯ ಸೇನೆ ಅಧಿಕೃತವಾಗಿ ಮೌನ ತಾಳಿದೆ. ಆದರೆ ಈ ಆತಂಕಕಾರಿ ಬೆಳವಣಿಗೆ ಬಗ್ಗೆ ಗುಪ್ತಚರ ಸಂಸ್ಥೆಗಳಿಗೆ ಸತತವಾಗಿ ಮಾಹಿತಿ ಒದಗಿಸುತ್ತಿದೆ ಎಂದೂ ಮೂಲಗಳು ತಿಳಿಸಿವೆ.

ಚೀನಾ ಪಡೆಗಳು ಮೊದಲ ಬಾರಿಗೆ ಕಳೆದ ವರ್ಷಾಂತ್ಯದಲ್ಲಿ ಕಂಡಿದ್ದವು. ಅಂದಿನಿಂದ ತಂಗ್ಧಾರ್‌ ವಲಯದಲ್ಲಿ ಗೋಚರಿಸಿದ್ದವು. ಈ ಪ್ರದೇಶದಲ್ಲಿ ಚೀನಾ ಸರ್ಕಾರಿ ಕಂಪೆನಿಯೊಂದು ಜಲವಿದ್ಯುತ್ ಘಟಕವೊಂದನ್ನು ನಿರ್ಮಿಸುತ್ತಿದೆ.

Write A Comment