ಅಂತರಾಷ್ಟ್ರೀಯ

ಐಎಸ್‌ನಿಂದ ರಾಸಾಯನಿಕ ದಾಳಿ; ಮಗು ಸಾವು, 600 ಜನರಿಗೆ ಗಾಯ

Pinterest LinkedIn Tumblr

Fleeಬಾಗ್ದಾದ್‌ (ಎಪಿ): ಇಸ್ಲಾಮಿಕ್ ಸ್ಟ್ರೇಟ್ ಉಗ್ರ ಸಂಘಟನೆ ಉತ್ತರ ಇರಾಕಿನ ಕಿರ್ಕುಕ್‌ ಪ್ರಾಂತ್ಯದ ಪಟ್ಟಣವೊಂದರಲ್ಲಿ ಎರಡು ರಾಸಾಯನಿಕ ದಾಳಿ ನಡೆಸಿದ್ದು, ಮೂರು ವರ್ಷದ ಹಸುಳೆಯೊಂದು ಮೃತಪಟ್ಟಿ‌ದೆ.

ಕಿರ್ಕುಕ್‌ನ ದಕುಕ್‌ ಜಿಲ್ಲೆಯ ತಾಜಾ ಪಟ್ಟಣದಲ್ಲಿ ನಡೆದ ಘಟನೆಯಲ್ಲಿ ಸುಮಾರು 600 ಜನರು ಗಾಯಗೊಂಡಿದ್ದು, ನೂರಾರು ಜನರು ಊರು ತೊರೆದಿದ್ದಾರೆ ಎಂದು ಇರಾಕ್ ಅಧಿಕಾರಿಗಳು ತಿಳಿಸಿದ್ದಾರೆ.

‘ತಾಜಾ ನಗರದಲ್ಲಿ ನಡೆಸಿರುವ ಕೃತ್ಯಕ್ಕೆ ದಾಯೇಷ್‌ ಭಯೋತ್ಪಾದಕ ಸಂಘಟನೆಗಳನ್ನು ಸುಮ್ಮನೆ ಬಿಡುವುದಿಲ್ಲ. ದಾಳಿಯ ಸಂಚುಕೋರರು ಸಾಕಷ್ಟು ಬೆಲೆ ತೆರಲಿದ್ದಾರೆ’ ಎಂದು ಇರಾಕ್ ಪ್ರಧಾನಿ ಹೈದರ್‌ ಅಲ್‌–ಅಬಾದಿ ಎಚ್ಚರಿಸಿದ್ದಾರೆ.

ದಾಯೇಷ್ ಎಂಬುದು ಐಎಸ್‌ ಉಗ್ರರಿಗೆ ಬಳಸುವ ಮತ್ತೊಂದು ಹೆಸರು.

ಕಿರ್ಕುಕ್‌ನಲ್ಲಿ ಐಎಸ್‌ ವಿರುದ್ಧ ಹೋರಾಡುತ್ತಿರುವ ಶಿಯಾ ಸೇನಾ ಯೋಧ ಸಮೀರ್ ವೈಸ್‌ ಅವರ ಪುತ್ರಿ ಫಾತಿಮಾ ದಾಳಿಯಲ್ಲಿ ಮೃತಪಟ್ಟಿರುವ ದುರ್ದೈವಿ.

ತಾಜಾದಲ್ಲಿ ಕಳೆದ ಮೂರು ದಿನಗಳ ಹಿಂದೆಯೂ ರಾಸಾಯನಿಕಗಳನ್ನು ಒಳಗೊಂಡಿದ್ದ ರಾಕೆಟ್‌ ದಾಳಿ ನಡೆದಿತ್ತು.

Write A Comment