ಕರ್ನಾಟಕ

ವಾಟ್ಸಾಪ್ ಮುಲಕ ದೂರು ವ್ಯವಸ್ಥೆ

Pinterest LinkedIn Tumblr

watsapp

ಬೆಂಗಳೂರು: ನಗರದ ನಾಗರೀಕರು ತಮಗಾಗಿರುವ ಆನ್ಯಾಯ ನಮ್ಮೆದರಿಗೆ ನಡೆಯುವ ಅಪರಾಧ ಪ್ರಕರಣಗಳ ಬಗ್ಗೆ ವಾಟ್ಸಾಪ್ ಮೂಲಕವೂ ನಗರ ಪೊಲೀಸರಿಗೆ ದೂರು ನೀಡಬಹುದಾದ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.

ಕಳ್ಳ ಕಾಕರ ಸಮಸ್ಯೆ ಸೇರಿದಂತೆ ದೂರು ದುಮ್ಮಾನಗಳ ಕುರಿತು ಜನ ಪೊಲೀಸರಿಗೆ ಸುಲಭವಾಗಿ ಮಾಹಿತಿ ನೀಡಲು ಕ್ರಮ ಕೈಗೊಳ್ಳಲಾಗಿದೆ. ನಗರದ ಜನತೆ ಯಾವುದೇ ದೂರು ನೀಡಲು ಪೊಲೀಸ್ ಠಾಣೆಗಳಿಗೆ ಖುದ್ದು ಅಲೆಯಬೇಕಿಲ್ಲ. ಖುದ್ದಾಗಿ ಅಲೆಯುವುದನ್ನು ತಪ್ಪಿಸಲು ವಾಟ್ಸಾಪ್ ವ್ಯವಸ್ಥೆ ಜಾರಿಗೆ ಬಂದಿದೆ. ಸಾರ್ವಜನಿಕರು ವಾಟ್ಸಾಪ್ ಮೂಲಕವೂ ನಗರ ಪೊಲೀಸರಿಗೆ ದೂರು ನೀಡಬಹುದಾಗಿದೆ.

ದೂರು ನೀಡುವುದೇ ಒಂದು ಸಮಸ್ಯೆಯಾಗುವುದನ್ನು ತಪ್ಪಿಸಲು ಪೊಲೀಸ್ ಇಲಾಖೆ ಈ ಕ್ರಮ ಕೈಗೊಂಡಿದೆ.ನಗರ ಪೊಲೀಸರು ಫೇಸ್‌ಬುಕ್, ಟ್ವಿಟ್ಟರ್‌ಗಳಲ್ಲಿ ಜಾಹೀರಾತುಗಳ ಮೂಲಕ ವಾಟ್ಸಾಪ್‌ನಲ್ಲಿ (ವಾಟ್ಸಾಪ್ ಸಂಖ್ಯೆ ೯೪೮೦೮೦೧೦೦೦)ದೂರು ಸಲ್ಲಿಸುವ ವ್ಯವಸ್ಥೆ ಜಾರಿಗೊಳಿಸಿರುವುದನ್ನು ಸದುಪಯೋಗ ಪಡೆದುಕೊಳ್ಳಲು ಮನವಿ ಮಾಡಲಾಗಿದೆ.

Write A Comment