ಕರ್ನಾಟಕ

ನಂಜನಗೂಡಿನ ನಂಜುಂಡೇಶ್ವರ ಸನ್ನಿಧಿಯಲ್ಲಿ ಹೆಚ್ಚಿದ ಆತ್ಮಹತ್ಯೆ ಪ್ರಕರಣಗಳು

Pinterest LinkedIn Tumblr

nanjanaನಂಜನಗೂಡು, ಮಾ.10- ವಿಷವನ್ನು ತಾನುಂಡು ಭಕ್ತರಿಗೆ ಅಮೃತವನ್ನು ನೀಡುತ್ತಿರುವ ನಂಜುಂಡೇಶ್ವರನ ದೇವಸ್ಥಾನದ ಮುಂಭಾಗದಲ್ಲಿ ಹರಿಯುತ್ತಿರುವ ಕಪಿಲಾ ನದಿಯಲ್ಲಿ ಕಳೆದ ಮೂರು ತಿಂಗಳಿಂದ 20ಕ್ಕು ಹೆಚ್ಚು ಮಂದಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ದಾಖಲಾಗಿದೆ.

ನಮ್ಮ ದೇಶ ಪವಿತ್ರ ಪುಣ್ಯ ನದಿ ಗಂಗಾ ನದಿಯಲ್ಲಿ ಹೆಣಗಳ ರಾಶಿ ರಾಶಿ ಸಿಗುವ ರೀತಿ, ನಂಜುಂಡೇಶ್ವರನ ದೇವಾಲಯದ ಮುಂಭಾಗದಲ್ಲಿ ಹರಿಯುತ್ತಿರುವ ಕಪಿಲಾ ನದಿಯಲ್ಲಿ ಕಳೆದ ಮೂರು ತಿಂಗಳಿಂದ ಈಚೆಗೆ ಪ್ರೇಮ-ಪ್ರಕರಣಗಳಿಂದ, ಪ್ರೇಮ ಪ್ರಕರಣಗಳು ವಿಫಲವಾದಾಗ, ತಮಗೆ ಬಯಸಿದ್ದು ಸಿಗದೆ, ಬಡತನದ ಬೇಗೆಯಿಂದ ಅಥವಾ ಆಸ್ತಿ-ಪಾಸ್ತಿಗಳ ವಿಚಾರವಾಗಿ, ಪರೀಕ್ಷೆಗಳಲ್ಲಿ ಅನುತ್ತೀರ್ಣರಾದಾಗ ಆತ್ಮಹತ್ಯೆ ಪ್ರಕರಣಗಳು ನಡೆಯುತ್ತವೆ.

ಆದರೆ ಶ್ರೀಕಂಠೇಶ್ವರನ ಸನ್ನಿದಿಯ ಮುಂಭಾಗದಲ್ಲಿರುವ ಕಪಿಲಾ ನದಿಯಲ್ಲಿ ಕಳೆದ ಮೂರು ತಿಂಗಳ ಈಚೆಗೆ 20ಕ್ಕು ಹೆಚ್ಚು ಆತ್ಮಹತ್ಯೆ ಮಾಡಿಕೊಂಡಿರುವ ಶವಗಳು ಪತ್ತೆಯಾಗಿದ್ದು ನಗರದ ಪೊಲೀಸರಿಗೆ ಹೆಚ್ಚಿನ ಕೆಲಸದ ಹೊರೆಯಾಗಿದೆ. ಕೆಲವರ ಪ್ರಕಾರ ನದಿಯ ಸಮೀಪದಲ್ಲಿ ಸ್ಮಶಾನ, ದೇವಸ್ಥಾನಗಳಿರುವ ಸ್ಥಳಗಳಲ್ಲಿ ಆತ್ಮಹತ್ಯೆ ಮಾಡಿಕೊಂಡರೆ ಮುಕ್ತಿ ಸಿಗುತ್ತದೆ ಎಂಬ ಮೂಢನಂಬಿಕೆಯಿಂದ ಈ ರೀತಿ ಪ್ರಕರಣಗಳು ನಡೆಯುತ್ತವೆ ಎಂಬುದಾಗಿ ಕೆಲವರ ಅಭಿಪ್ರಾಯವಾಗಿದೆ.

Write A Comment