ಕರ್ನಾಟಕ

ವೀರಶೈವ ವಿರೋಧಿ ನೀತಿ ಖಂಡಿಸಿ ಪ್ರತಿಭಟನೆ

Pinterest LinkedIn Tumblr

veerashaivaಬೆಂಗಳೂರು,ಮಾ.೧೦-ರಾಜ್ಯ ಸರ್ಕಾರ ವೀರಶೈವ ವಿರೋಧಿ ನೀತಿ ಅನುಸರಿಸುತ್ತಿರುವುದನ್ನು ವಿರೋಧಿಸಿ ಅಖಿಲ ಭಾರತ ವೀರಶೈವ ಜಾಗೃತ ವೇದಿಕೆ ಕಾರ್ಯಕರ್ತರು ನಗರದಲ್ಲಿ ಇಂದು ಪ್ರತಿಭಟನೆ ನಡೆಸಿದರು.
ವೇದಿಕೆಯ ಅಧ್ಯಕ್ಷ ಹಿರಿಯ ವಕೀಲ ಅಮೃತೇಶ್ ನಿವೃತ್ತ ಪೊಲೀಸ್ ಆಯುಕ್ತ ಜ್ಯೋತಿ ಪ್ರಕಾಶ್ ಮಿರ್ಜಿ ಅವರ ನೇತೃತ್ವದಲ್ಲಿ ಪ್ರೀಡಂಪಾರ್ಕ್‌ನಲ್ಲಿ ಸೇರಿದ ನೂರಾರು ಮಂದಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದ ನಂತರ ವೀರಶೈವರ ವಿರೋಧಿ ನಿರ್ಧಾರ ಕೈಗೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಜ್ಯೋತಿ ಪ್ರಕಾಶ್ ಮಿರ್ಜಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೇವಾ ಹಿರಿತನ ಅರ್ಹತೆ ಹೊಂದಿದ್ದರೂ ಅವರನ್ನು ಮುಖ್ಯ ಕಾರ್ಯದರ್ಶಿಯನ್ನಾಗಿ ನೇಮಿಸದೇ ವೀರಶೈವರಿಗೆ ಆನ್ಯಾಯ ಮಾಡಲಾಯಿತು ಎಂದರು. ರಾಜ್ಯದ ಯಾವುದೇ ಜಿಲ್ಲೆಗೆ ಜಿಲ್ಲಾಧಿಕಾರಿಯನ್ನಾಗಿ ವೀರಶೈವ ಅರ್ಹ ದಕ್ಷ ಐಎಎಸ್ ಅಧಿಕಾರಿಗಳನ್ನು ನಿಯೋಜಿಸಿದೇ ವಂಚಿಸಲಾಗಿದೆ ಅಯಕಟ್ಟಿನ ಸ್ಥಳಗಳಿಗೆ ವೀರಶೈವ ಅಧಿಕಾರಿಗಳನ್ನು ನಿಯೋಜಿಸದೇ ಅಹಿಂದ ಹೆಸರಲ್ಲಿ ವೀರಶೈವರನ್ನು ಕಡೆಗಣಿಸಲಾಗಿದೆ ಎಂದು ದೂರಿದರು.
ಉಪಲೋಕಾಯುಕ್ತ ಸುಭಾಷ್ ಅಡಿ ಅವರನ್ನು ವೀರಶೈವರು ಎಂಬ ಕಾರಣಕ್ಕೆ ಪದಚ್ಯುತಿ ಯತ್ನ ನಡೆಸಲಾಗಿದೆ ಇತ್ತಿಚಿನ ಮಾಹಿತಿ ಹಕ್ಕು ಆಯೋಗದ ನೇಮಕಾತಿಯಲ್ಲೂ ವೀರಶೈಯವರನ್ನು ವಂಚಿಸಲಾಗಿದೆ ಎಂದು ದೂರಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವೀರಶೈವ ವಿರೋಧಿ ನೀತಿಯನ್ನು ಮುಂದುವರೆಸಿದರೆ ವೀರಶೈವರು ಒಟ್ಟಾಗಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

Write A Comment