ಅಂತರಾಷ್ಟ್ರೀಯ

ಐಎಸ್‌ಐಎಸ್ ಉಗ್ರ ಸಂಘಟನೆ ಸೇರಲು ಸಿಇಟಿ ಪರೀಕ್ಷೆ ..!

Pinterest LinkedIn Tumblr

isiಲಂಡನ್, ಮಾ.10- ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯನ್ನು ಮತ್ತಷ್ಟು ಕಠಿಣವಾಗಿ ರೂಪಿಸುವ ನಿಟ್ಟಿನಲ್ಲಿ ಹೊಸದಾಗಿ ಐಎಸ್‌ಐಎಸ್ ಸಂಘಟನೆ ಅಥವಾ ಅದರ ಅಧೀನ ಸಂಘಟನೆಗಳಿಗೆ ಸೇರುವ ಜಿಹಾದಿಗಳಿಗೆ 23 ಪ್ರಶ್ನೆಗಳನ್ನು ಮುಂದಿಡಲಾಗುತ್ತದೆಯಂತೆ..! ಈ 23 ಪ್ರಶ್ನೆಗಳಲ್ಲಿ ಹೊಸ ಜಿಹಾದಿಯ ಜನ್ಮ ದಿನಾಂಕ, ರಾಷ್ಟ್ರೀಯತೆ, ಬ್ಲಡ್‌ಗ್ರೂಪ್ ಹಾಗೂ ಹಿಂದಿನ ಜಿಹಾದಿ ಅನುಭವಗಳು ಸೇರಿದ್ದು, ಈ ಎಲ್ಲ ವಿಷಯಗಳಲ್ಲೂ ಲಿಖಿತ ದಾಖಲೆಗಳನ್ನು ಸಲ್ಲಿಸಬೇಕು. ಅನುಭವಿಗಳಿಗೆ ಮೊದಲ ಆದ್ಯತೆ. ಐಎಸ್ ಸಿದ್ಧಪಡಿಸಿರುವ ಈ ಪ್ರಶ್ನೆ ಪತ್ರಿಕೆಯಲ್ಲಿ ಸೋರಿಕೆಯಾದ ಅಂಶಗಳಲ್ಲಿ ಇವೆಲ್ಲ ಸೇರಿದ್ದು, ಬ್ರಿಟನ್, ಅಮೆರಿಕ ಸೇರಿದಂತೆ 51 ರಾಷ್ಟ್ರಗಳ 22 ಸಾವಿರ ಮಂದಿ ಹೆಸರು ನೋಂದಾಯಿಸಿರುವುದೂ ತಿಳಿದುಬಂದಿದೆ.

ಸಾವಿರಾರು ಸೇರ್ಪಡೆ ಅರ್ಜಿ ಫಾರಂಗಳು ಈಗಾಗಲೇ ವಿತರಣೆಯಾಗಿರುವ ಬಗ್ಗೆಯೂ ಸಂಪೂರ್ಣ ಮಾಹಿತಿಗಳು ಲಭ್ಯವಾಗಿವೆ. ಈ ಅರ್ಜಿ ನಮೂನೆಯಲ್ಲಿ ಕೇಳಿರುವ ಅಂಶಗಳನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳನ್ನು ಲಗತ್ತಿಸಿ ನೀಡಬೇಕು. ತಾನು ಸಂಘಟನೆಗೆ ಸೇರುತ್ತೇನೆ ಎಂಬುದನ್ನೂ ಸ್ಪಷ್ಟವಾಗಿ ಸೂಚಿಸಬೇಕು. ಜಮಾನ್-ಅಲ್-ವಾಸಲ್ ಎಂಬ ಸಿರಿಯ ವಿರೋಧಿ ಅಂತರ್ಜಾಲ ತಾಣದಲ್ಲಿ ಈ ಅರ್ಜಿ ವಿವರಣೆಗಳು ಲಭ್ಯವಿವೆ. ಇದೇ ಜಾಲತಾಣದಲ್ಲಿ ಈಗಾಗಲೇ 40 ದೇಶಗಳ 1,736 ಜಿಹಾದಿಗಳು ಹೆಸರು ನೋಂದಾಯಿಸಿದ್ದು, ಇವರಲ್ಲಿ ಸೌದಿ ರಾಷ್ಟ್ರಗಳು, ಟುನಿಷಿಯಾ, ಮೊರಾಕ್ಕೊ ಮತ್ತು ಈಜಿಪ್ಟಿನವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ಈ ಎಲ್ಲ ದಾಖಲೆಗಳು ಅರೇಬಿಕ್ ಭಾಷೆಯಲ್ಲಿವೆ ಮತ್ತು ಇದಕ್ಕೆ ಸ್ವಯಂಘೋಷಿತ ಇಸ್ಲಾಮಿಕ್ ಸ್ಟೇಟ್ ಲಾಂಛನವನ್ನು ಬಳಸಲಾಗಿದೆ. ಜಿಹಾದಿ ಮತ್ತು ಅವನ ತಾಯಿಯ ಹೆಸರು, ವಿದ್ಯಾರ್ಹತೆ ಹಾಗೂ ಶಿರಿಯಾ (ಮುಸ್ಲಿಂ ಕಾಯ್ದೆ) ಬಗ್ಗೆ ಹೊಂದಿರುವ ಜ್ಞಾನಗಳು ಪ್ರಮುಖವಾಗಿರಬೇಕು. ಈ ಎಲ್ಲ ಐಎಸ್‌ಐಎಸ್ ನಿಬಂಧನೆಗಳು ಸೋರಿಕೆಯಾಗಿದ್ದು, ಅವು ತನಗೆ ದೊರೆತಿರುವುದಾಗಿ ಸ್ಕೈ ನ್ಯೂಸ್ ತಿಳಿಸಿದೆ.

Write A Comment