ಹಾಸನ, ಮಾ. ೧೦ – ಹಾಸನ ಜಿಲ್ಲೆ ಹೊಳೇನರಸೀಪುರ ತಾಲ್ಲೂಕಿನ ಹರದನಹಳ್ಳಿ ಹಾಗೂ ಸುತ್ತ
ಮುತ್ತಲಿನ ಗ್ರಾಮಗಳಲ್ಲಿ ಆತಂಕ ಮೂಡಿಸಿದ ಮೂರು ವರ್ಷಗಳ ಗಂಡು ಚಿರತೆಯನ್ನು ಇಂದು ಬೆಳಿಗ್ಗೆ ಬಲೆಗೆ ಬೀಳಿಸಲಾಗಿದೆ.
ಗ್ರಾಮದ ಸುತ್ತಮುತ್ತ ಚಿರತೆಯೊಂದು ಕಾಣಿಸಿಕೊಳ್ಳುತ್ತಿರುವುದಾಗಿ ಹರದನಹಳ್ಳಿ ಗ್ರಾಮಸ್ಥರು ದೂರು ನೀಡಿದ ಹಿನ್ನೆಲೆಯಲ್ಲಿ ಗ್ರಾಮದ ಜಮೀನಿನಲ್ಲಿ ಅರಣ್ಯ ಇಲಾಖೆಯವರು ಬೋನು ಇಟ್ಟಿದ್ದರು.
ಇಂದು ಬೆಳಿಗ್ಗೆ ಬಲೆಗೆ ಬಿದ್ದಿರುವ ಚಿರತೆ ಆರೋಗ್ಯದಿಂದ ಇದ್ದು ಇಂದೇ ಅರಣ್ಯದೊಳಗೆ ಬಿಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕ