ಕರ್ನಾಟಕ

ಮಲ್ಯ ಸಾಮ್ರಾಜ್ಯದ ಮಹಾ ಪತನದ ಕತೆ

Pinterest LinkedIn Tumblr

Vijay Mallya
ಬೆಂಗಳೂರು, ಮಾ. ೯ – ಒಂದು ಕಾಲದ ಕೋಟ್ಯಾಧೀಶ್ವರ ವಿಜಯ್ ಮಲ್ಯ ತಮ್ಮ ಜೀವನ ಶೈಲಿಯಿಂದಾಗಿಯೇ ಜಗತ್ತನ್ನು ನಿಬ್ಬೆರಗಾಗಿಸಿದವರು. ಆದರೆ, ಈಗ ಅವರ ಚಕ್ರಾಧಿಪತ್ಯ ಕುಸಿಯತೊಡಗಿದೆ. ಮಲ್ಯ ಮಾಡಿರುವ ಸಾಲ ಹಾಗೂ ಬ್ಯಾಂಕುಗಳಿಗೆ ನೀಡಬೇಕಾಗಿರುವ ಸಾಲದ ವಿವರ ಇಲ್ಲಿದೆ.

ಬ್ಯಾಂಕ್‌ಗಳಿಗೆ ವಿಜಯ್ ಮಲ್ಯ ಕೊಡಬೇಕಾಗಿರುವ ಸಾಲದ ಮೊತ್ತ ಸುಮಾರು 7 ಸಾವಿರ ಕೋಟಿ ರೂ.ಗಳು ಅವುಗಳ ವಿವರ ಹೀಗಿದೆ.

1,600 ಕೋಟಿ ರೂ. ಎಸ್.ಬಿ.ಐ., 800 ಕೋಟಿ ರೂ. ಪಿಎನ್‌ಬಿ, 800 ಕೋಟಿ ರೂ. ಐಡಿಬಿಐ, 650 ಕೋಟಿ ರೂ. ಬ್ಯಾಂಕ್ ಆಫ್ ಇಂಡಿಯಾ, 550 ಕೋಟಿ ರೂ. ಬ್ಯಾಂಕ್ ಆಫ್ ಬರೋಡಾ, 430 ಕೋಟಿ ರೂ. ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ, 410 ಕೋಟಿ ರೂ. ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, 320 ಕೋಟಿ ರೂ. ಯುಕೊ ಬ್ಯಾಂಕ್, 310 ಕೋಟಿ ರೂ. ಕಾರ್ಪೊರೇಷನ್ ಬ್ಯಾಂಕ್, 150 ಕೋಟಿ ರೂ. ಎಸ್‌ಬಿಎಂ, 140 ಕೋಟಿ ರೂ. ಐಓಬಿ, 90 ಕೋಟಿ ರೂ. ಫೆಡರಲ್ ಬ್ಯಾಂಕ್, 60 ಕೋಟಿ ರೂ. ಪಂಜಾಬ್ ಅಂಡ್ ಸಿಂಧ್ ಬ್ಯಾಂಕ್, 50 ಕೋಟಿ ರೂ. ಆಕ್ಸಿಸ್ ಬ್ಯಾಂಕ್, ಇದರಲ್ಲಿ 1,300 ಕೋಟಿ ರೂ.ಗಳನ್ನು ಬ್ಯಾಂಕ್‌ಗಳು ವಸೂಲು ಮಾಡಿವೆ ಎಂದು ಮಲ್ಯ ಹೇಳಿದ್ದಾರೆ.

ಮಲ್ಯ ಒಡೆತನದ ಆಸ್ತಿಗಳು

7000 ಕೋಟಿ ರೂ. ಮೌಲ್ಯದ ಯುನೈಟೆಡ್ ಬ್ರೂವರೀಸ್‌ನಲ್ಲಿ ಶೇ. 33 ರಷ್ಟು ಒಡೆತನ, ಅದರಲ್ಲಿ ಅರ್ಧಕ್ಕಿಂತ ಹೆಚ್ಚನ್ನು ಅಡವಿಡಲಾಗಿದೆ.

ಮಂಗಳೂರು ಕೆಮಿಕಲ್ಸ್ ಅಂಡ್ ಫರ್ಟಿಲೈಜರ್ಸ್‌ನಲ್ಲಿ ಶೇ. 22 ಒಡೆತನ (140 ಕೋಟಿ ರೂ. ಮೌಲ್ಯ) ಇದರಲ್ಲಿ ಮೂರನೇ ಒಂದು ಭಾಗದಷ್ಟು ಶೇರುಗಳನ್ನು ಅಡವಿಟ್ಟಿದ್ದಾರೆ.

ಯುಬಿ ಹೂಡಿಕೆಯಲ್ಲಿ ಶೇ. 52 ರಷ್ಟಿದ್ದು, ಅದು ರಿಯಲ್ ಎಸ್ಟೇಟಿನಲ್ಲೂ ತೊಗಿದೆ. ಆದರೆ, ಬಾಡಿಗೆದಾರರ ಬಾಬ್ತನ್ನು ಈಗಾಗಲೇ ಅಡವಿಡಲಾಗಿದೆ.

ಬೇಯಱ್ಸ್ ಕಾರ್ಪ್ ಸೈನ್ಸ್‌ನಲ್ಲಿ ಶೇ. 10 ರಷ್ಟು ಷೇರುಗಳಿದ್ದು, ಮಲ್ಯ ಈಗಲೂ ಅದರ ಅಧ್ಯಕ್ಷರಾಗಿದ್ದಾರೆ.

ಮಲ್ಯ ಮೇಲೇರಿದ ರೀತಿ

1983 – ತಂದೆಯ ನಿಧನಾನಂತರ 28 ವರ್ಷದ ಮಲ್ಯ ಯುಬಿ ಗ್ರೂಪ್‌ನ ಅಧ್ಯಕ್ಷರಾದರು.

1999 – ಕಿಂಗ್ ಫಿಷರ್ ಸ್ಟ್ರಾಂಗ್ (ಬ್ರ್ಯಾಂಡ್) ಆರಂಭ, ಇದರಿಂದಾಗಿ ದೇಶಾದ್ಯಂತ ಇಂದಿಗೂ ಅತಿಹೆಚ್ಚು ಮಾರಾಟವಾಗುವ ಬ್ರ್ಯಾಂಡ್.

2002 – ರಾಜ್ಯಸಭೆಗೆ ನಾಮಕರಣ

ಖರೀದಿಯ ಭರಾಟೆ

2005 – ಕಿಂಗ್ ಫಿಷರ್ ಏರ್‌ಲೈನ್ಸ್ ಆರಂಭ, ಶಾವ್ಯಾಲೇಸ್ ಖರೀದಿಸಿ, ರಾಯಲ್ ಚಾಲೆಂಜ್ ನಂತಹ ವ್ಹಿಸ್ಕಿ ಬ್ರ್ಯಾಂಡ್‌ನ ಒಡೆತನ.

2002 – ಬ್ಯಾಗ್ ಪೈಪರ್ ವ್ಹಿಸ್ಕಿ ಮತ್ತು ರೋಮ ಮೋವ ವೋಡ್ಕಾ ತಯಾರಿಸುವ ಹರ್ಬರ್ಟ್ ಸನ್ಸ್ ಸಂಸ್ಥೆ ಖರೀದಿ.

2007 – ಫಾರ್ಮುಲಾ ಒನ್ ಟೀಮ್ ಸ್ಟ್ರೈಕರ್ ಖರೀದಿಸಿ ಫೋರ್ಸ್ ಇಂಡಿಯಾ ಎಂಬ ಮರುನಾಮಕರಣ, ಏರ್ ಡೆಕ್ಕನ್ ಖರೀದಿ, 595 ದಶಲಕ್ಷ ಪೌಂಡ್‌ಗಳಿಗೆ ಬ್ರಿಟಿಷ್ ವ್ಹಿಸ್ಕಿ ತಯಾರಿಸುವ ವ್ಹೈಟ್ ಅಂಡ್ ಮಾಕೆ ಸಂಸ್ಥೆ ಖರೀದಿ.

2008 – 11 ಕೋಟಿ 16 ಲಕ್ಷ ಡಾಲರ್‌ಗಳಿಗೆ ರಾಯಲ್ ಚಾಲೆಂಜಱ್ಸ್ ಬೆಂಗಳೂರು (ಆರ್‌ಸಿಬಿ)ಐಪಿಎಲ್ ತಂಡದ ಖರೀದಿ, ಬೆಂಗಳೂರಿನಲ್ಲಿ ತಲೆ ಎತ್ತಿದ ಯುಬಿಸಿಟಿ.

ವಿನಾಶದ ಹಾದಿ

Write A Comment