ಕರ್ನಾಟಕ

ವಿದೇಶೀಯರ ಚಿಕಿತ್ಸೆಗಾಗಿ ರಾಜ್ಯದಲ್ಲಿ “ಹೋಪ್‌’

Pinterest LinkedIn Tumblr

ut-khadar
ಬೆಂಗಳೂರು: ವಿದೇಶಿ ರೋಗಿಗಳು ಮತ್ತು ರಾಜ್ಯದ ಆಸ್ಪತ್ರೆಗಳಿಗೆ ಕೊಂಡಿಯಾಗಿ ಕಾರ್ಯನಿರ್ವಹಿಸುವ ಉದ್ದೇಶದಿಂದ ಆರಂಭವಾಗಿರುವ ಹೋಪ್‌ ಮೆಡಿಕಲ್‌ ಟೂರಿಸಂ ಸಂಸ್ಥೆ ಮತ್ತು ಅದರ ವೆಬ್‌ಸೈಟ್‌ಗೆ ಆರೋಗ್ಯ ಸಚಿವ ಯು.ಟಿ.ಖಾದರ್‌ ಮಂಗಳವಾರ ಚಾಲನೆ ನೀಡಿದ್ದಾರೆ. ಬಳಿಕ ಮಾತನಾಡಿದ ಅವರು, ರಾಜ್ಯದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳುವ ವಿದೇಶಿಗರಿಗೆ ಹೋಪ್‌ ಮೆಡಿಕಲ್‌ ಟೂರಿಸಂ ಸಂಸ್ಥೆಯು ಸೇತುವೆಯಾಗಿ ಕಾರ್ಯನಿರ್ವಹಿಸಲಿದೆ. ಇದರಿಂದ ವೈದ್ಯಕೀಯ ಟೂರಿಸಂ ಅಭಿವೃದಿಟಛಿಗೆ ಸಹಕಾರಿಯಾಗಲಿದೆ. ವಿದೇಶಿ ಆಸ್ಪತ್ರೆಗಳಿಗೆ ಹೋಲಿಸಿದರೆ ಬೆಂಗಳೂರು ಸೇರಿದಂತೆ ರಾಜ್ಯದ
ಆಸ್ಪತ್ರೆಗಳಲ್ಲಿ ಚಿಕಿತ್ಸಾ ವೆಚ್ಚ ಕಡಿಮೆಯಾಗಿದೆ. ಹೀಗಾಗಿ ಇಲ್ಲಿ ಬಂದು ಚಿಕಿತ್ಸೆ ಪಡೆದುಕೊಳ್ಳಲು ಹೋಪ್‌ ಮೆಡಿಕಲ್‌ ಟೂರಿಸಂ ಸಂಸ್ಥೆ ಸಹಕಾರಿಯಾಗಲಿದೆ ಎಂದರು.

ವಿದೇಶಿಗರು ರಾಜ್ಯದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳುವ ಮೂಲಕ ನಮ್ಮಲ್ಲಿನ ವೈದ್ಯಕೀಯ
ಸೌಲಭ್ಯಗಳ ಬಗ್ಗೆ ಹೊರ ರಾಷ್ಟ್ರಗಳಿಗೆ ತಿಳಿಸುವ ಕೆಲಸ ಮಾಡಿದಂತಾಗುತ್ತದೆ. ಮೊದಲ ಬಾರಿಗೆ ಇಂತಹ ಪ್ರಯತ್ನ ನಡೆದಿದ್ದು, ವೈದ್ಯಕೀಯ ಟೂರಿಸಂ ಬೆಳವಣಿಗೆಗೆ ಈ ಪ್ರಯತ್ನ ಪೂರಕವಾಗಿದೆ. ಇತರೆ ಸಂಸ್ಥೆಗಳೂ ಇಂತಹ ಪ್ರಯತ್ನಕ್ಕೆ ಮುಂದಾದರೆ ಕಾನೂನಿನ ವ್ಯಾಪ್ತಿಯಲ್ಲಿ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.

ಹೋಪ್‌ ಮೆಡಿಕಲ್‌ ಟೂರಿಸಂ ಸಂಸ್ಥೆಯ ಸ್ಥಾಪಕಿ ಮೆಟಿಲ್ಡಾ ಡಿ’ಸೋಜಾ ಮಾತನಾಡಿ, ತಂತ್ರಜ್ಞಾನ ಬೆಳೆದಂತೆ ರಾಜ್ಯದಲ್ಲಿನ ಆಸ್ಪತ್ರೆಗಳು ಅವುಗಳನ್ನು ಅಳವಡಿಸಿಕೊಂಡು ನುರಿತ ತಜ್ಞರು ಯಶಸ್ವಿಯಾಗಿ ಶಸOಉಚಿಕಿತ್ಸೆಗಳನ್ನು ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ಸಾಕಷ್ಟು ಕಿಷ್ಟಕರ ಸಮಸ್ಯೆಗಳಿಗೆ ಶಸOಉಚಿಕಿತ್ಸೆ ನೀಡಿರುವ ಉದಾಹರಣೆಗಳಿವೆ.

ವೈದ್ಯಕೀಯ ವೆಚ್ಚವು ವಿದೇಶಗಳಿಗೆ ಹೋಲಿಸಿದರೆ ಕಡಿಮೆ ಇದೆ. ನಮ್ಮಲ್ಲಿನ ವೈದ್ಯಕೀಯ ಸೇವೆಯನ್ನು ವಿದೇಶಿಗರಿಗೆ ಪರಿಚಯಿಸುವ ಹಿನ್ನೆಲೆಯಲ್ಲಿ ಸಂಸ್ಥೆ ಆರಂಭಿಸಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ದಂತ ವೈದ್ಯಕೀಯ ಪರಿಷತ್‌ ಸದಸ್ಯೆ ಡಾ.ನಾಗಲಕ್ಷ್ಮೀ ಸೇರಿದಂತೆ ಇತರರು ಉಪಸ್ಥಿತರಿದ್ದರು.

-ಉದಯವಾಣಿ

Write A Comment