ಕರ್ನಾಟಕ

ಜೆಎನ್‌ಯುನಲ್ಲಿ ಪಾಕ್ ಪರ ಘೋಷಣೆ ಕೂಗಿದರೆ ಗಂಭೀರವಾಗಿ ಪರಿಗಣಿಸಬೇಡಿ: ರಾಜ್‌ದೀಪ್ ಸರ್ದೇಸಾಯಿ

Pinterest LinkedIn Tumblr

serಬೆಂಗಳೂರು: ಜೆಎನ್‌ಯುನಲ್ಲಿ ಪಾಕ್ ಪರ, ಅಥವಾ ಜಮ್ಮು ಕಾಶ್ಮೀರದ ಸ್ವಾತಂತ್ರ್ಯದ ಪರ ಘೋಷಣೆ ಕೂಗಿದರೆ ಅದನ್ನು ಗಂಭೀರವಾಗಿ ಪರಿಗಣಿಸಬೇಕಾಗಿಲ್ಲ ಎಂದು ಹಿರಿಯ ಪತ್ರಕರ್ತ ರಾಜ್‌ದೀಪ್ ಸರ್ದೇಸಾಯಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಪ್ರೆಸ್ ಕ್ಲಬ್‌ನಲ್ಲಿ ಭಾನುವಾರ ಟಿವಿ ಜರ್ನಲಿಸ್ಟ್ ಅಸೋಸಿಯೇಶನ್ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾಗಿ, ದೇಶದ ಮಾಧ್ಯಮಗಳ ಸಮಕಾಲೀನ ಪರಿಸ್ಥಿತಿ ಬಗ್ಗೆ ಮಾತನಾಡಿದ ಇವರು, ಜೆಎನ್‌ಯುನಲ್ಲಿ ಪಾಕ್ ಪರ, ಅಥವಾ ಜಮ್ಮು ಕಾಶ್ಮೀರದ ಸ್ವಾತಂತ್ರ್ಯದ ಪರ ಘೋಷಣೆ ಕೂಗಿದರೆ ಅದನ್ನು ಗಂಭೀರವಾಗಿ ಪರಿಗಣಿಸಬೇಕಾಗಿಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಮಾಧ್ಯಮಗಳು ಅವಕಾಶ ನೀಡಬೇಕು.

ಕನ್ಹಯ್ಯನನ್ನು ಬಂಧಿಸಿ ಸರಕಾರ ತಪ್ಪುಹೆಜ್ಜೆಯಿಟ್ಟಿದೆ ಎಂದು ಹೇಳುವ ಮೂಲಕ ದೇಶದ್ರೋಹದ ಘೋಷಣೆ ಕೂಗಿದ ಆರೋಪದ ಮೇಲೆ ಬಂಧಿತನಾಗಿದ್ದ ಕನ್ಹಯ್ಯ ಕುಮಾರ್ ಹಾಗೂ ಆತನ ಗೆಳೆಯರ ವರ್ತನೆಯನ್ನು ರಾಜದೀಪ್ ಪರೋಕ್ಷವಾಗಿ ಸಮರ್ಥಿಸಿಕೊಂಡಿದ್ದಾರೆ

ಅರ್ನಾಬ್ ವಿರುದ್ದ ಕಿಡಿ:

8 ಜನರನ್ನು ಟಿವಿ ಸ್ಟುಡಿಯೋಗೆ ಕರೆದು, ಬೊಬ್ಬೆ ಹಾಕೋದು ಈಗಿನ ಪತ್ರಿಕೋದ್ಯಮವಾಗಿದ್ದು ಅತಿಥಿಗಳು ಪರಸ್ಪರ ಕಚ್ಚಾಡುವಂತೆ ಮಾಡಿ, ಮನರಂಜನೆ ನೀಡುವುದು ಸುಲಭ. ದುರ್ದೈವವೆಂದರೆ ಜನರು ಕೂಡ ಮನರಂಜನೆಯನ್ನು ಹೆಚ್ಚು ಇಷ್ಟ ಪಡುತ್ತಾರೆ ಎನ್ನುವ ಮೂಲಕ ಅರ್ನಾಬ್ ಗೋಸ್ವಾಮಿ ವಿರದ್ದ ರಾಜ್ದೀಪ್ ಪರೋಕ್ಷವಾಗಿ ಕಿಡಿಕಾರಿದ್ದಾರೆ.

ಲಂಚ ತೆಗೆದುಕೊಂಡು ಜೈಲಿಗೆ ಹೋಗಿರುವ ಝೀ ನ್ಯೂಸ್ ಸಂಪಾದಕರು ದೇಶಕ್ಕೆ ನೈತಿಕತೆಯ ಪಾಠ ಮಾಡುತ್ತಿದ್ದಾರೆ, ಪತ್ರಕರ್ತರೆಂದರೆ ಗೌರವ ನೀಡುತ್ತಿದ್ದ ಜನರು, ಸದ್ಯ ಪತ್ರಕರ್ತರನ್ನು ಕಂಡರೆ ಭಯಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸರ್ದೇಸಾಯಿ ಬೇಸರ ವ್ಯಕ್ತಪಡಿಸಿದರು.

Write A Comment