ರಾಷ್ಟ್ರೀಯ

ಉಪ್ರ ವಿಧಾನ ಪರಿಷತ್ ಚುನಾವಣೆ, ಎಸ್​ಪಿಗೆ ಪ್ರಚಂಡ ಗೆಲುವು: ಬಿಜೆಪಿಗೆ ಭಾರಿ ಸೋಲು, ನಿರಾಸೆ

Pinterest LinkedIn Tumblr

06-terror-gujarath-webಲಖನೌ: ಉತ್ತರ ಪ್ರದೇಶದಲ್ಲಿ 2017ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗಳಿಗೆ ಮುಂಚಿತವಾಗಿ ವಿಧಾನಪರಿಷತ್ತಿನ 28 ಸ್ಥಾನಗಳಿಗೆ ಸ್ಥಳೀಯ ಸಂಸ್ಥೆಗಳಿಂದ ನಡೆದ ನಡೆದ ಚುನಾವಣೆಯಲ್ಲಿ 23 ಸ್ಥಾನಗಳನ್ನು ಗೆದ್ದುಕೊಳ್ಳುವ ಮೂಲಕ ಸಮಾಜವಾದಿ ಪಕ್ಷ (ಎಸ್​ಪಿ) ಭಾರಿ ವಿಜಯವನ್ನು ಗಳಿಸಿದೆ. ಪ್ರಮುಖ ಪ್ರತಿಸ್ಪರ್ಧಿಯಾಗಿದ್ದ ಬಿಜೆಪಿ ತೀವ್ರ ಪರಾಭವ ಅನುಭವಿಸಿದೆ.

ಉಳಿದ 5 ಸ್ಥಾನಗಳ ಪೈಕಿ ಬಿಎಸ್​ಪಿ 2, ಕಾಂಗ್ರೆಸ್ 1 ಮತ್ತು ಉಳಿದ 2 ಸ್ಥಾನಗಳನ್ನು ಪಕ್ಷೇತರರು ಹಂಚಿಕೊಂಡಿದ್ದಾರೆ. ಈ ವಿಜಯದೊಂದಿಗೆ 100 ಸದಸ್ಯಬಲದ ಉತ್ತರ ಪ್ರದೇಶ ವಿಧಾನಪರಿಷತ್​ನಲ್ಲಿ ಸಮಾಜವಾದಿ ಪಕ್ಷ ಬಹುಮತ ಪಡೆದುಕೊಂಡಿದೆ. ಪರಿಷತ್ತಿನಲ್ಲಿ ಬಹುಮತ ಇಲ್ಲದ ಪರಿಣಾಮವಾಗಿ ಸಮಾಜವಾದಿ ಪಕ್ಷವು ಭಾರಿ ತೊಂದರೆ ಅನುಭವಿಸುತ್ತಿತ್ತು.

35 ಸ್ಥಾನಗಳನ್ನು ಭರ್ತಿ ಮಾಡಲು ಚುನಾವಣಾ ಆಯೋಗವು ಫೆಬ್ರುವರಿ 8ರಂದು ಅಧಿಸೂಚನೆ ಹೊರಡಿಸಿ ಚುನಾವಣೆಗೆ ಆದೇಶ ನೀಡಿತ್ತು. 7 ಮಂದಿ ಸಮಾಜವಾದಿ ಪಕ್ಷದ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದರು.

Write A Comment