ಕರ್ನಾಟಕ

ಕಪಿಲಾ ನದಿಗೆ ಹಾರಿದ ಪ್ರೇಮಿಗಳು

Pinterest LinkedIn Tumblr

KAPILAನಂಜನಗೂಡು, ಮಾ.5- ಪ್ರೀತಿಗೆ ಮನೆಯವರು ವಿರೋಧ ವ್ಯಕ್ತಪಡಿಸಿದ್ದರಿಂದ ನೊಂದ ಪ್ರೇಮಿಗಳು ಕಪಿಲಾನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಂಜನಗೂಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಜ್ಯೋತಿ(17) ಮತ್ತು ಶಿವನಾಗ(23) ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು.

ಇವರಿಬ್ಬರ ಪ್ರೀತಿಯ ವಿಷಯ ಜ್ಯೋತಿ ಮನೆಯವರಿಗೆ ತಿಳಿದು, ವಿರೋಧ ವ್ಯಕ್ತಪಡಿಸಿ ಗ್ರಾಮಾಂತರ ಪೊಲೀಸರಿಗೆ ಶಿವನಾಗನ ವಿರುದ್ಧ ಹತ್ತು ದಿನಗಳ ಹಿಂದೆ ದೂರು ನೀಡಿದ್ದರು. ಈ ಸಂಬಂಧ ಶಿವನಾಗ ಜೈಲು ಸೇರಿದ್ದನು. ನಿನ್ನೆ ಜಾಮೀನಿನ ಮೇಲೆ ಶಿವನಾಗ ಬಿಡುಗಡೆಯಾಗಿ ತನ್ನ ಜೊತೆಯಲ್ಲಿ ಜ್ಯೋತಿಯನ್ನು ಕರೆದೊಯ್ದಿದ್ದನು.

ಇಂದು ಬೆಳಗ್ಗೆ ಮೈಸೂರು ಜಿಲ್ಲೆಯ ನಂಜನಗೂಡು ಬಳಿಯ ಕಪಿಲಾನದಿಗೆ ಹಾರಿ ಇಬ್ಬರೂ ಆತ್ಮಹತ್ಯೆಗೆ ಶರಣಾಗಿದ್ದಾರೆ. ವಿಷಯ ತಿಳಿದ ಪೊಲೀಸರು ಇವರಿಬ್ಬರ ಶವಗಳಿಗಾಗಿ ಸ್ಥಳೀಯರು ಹಾಗೂ ಅಗ್ನಿಶಾಮಕ ದಳದವರ ಸಹಾಯದಿಂದ ಶೋಧ ನಡೆಸುತ್ತಿದ್ದಾರೆ.

Write A Comment