ಕರ್ನಾಟಕ

‘ನೀರ್ ದೋಸೆ’ಗೆ ಕೊನೆಗೂ ಸುಖಾಂತ್ಯ

Pinterest LinkedIn Tumblr

Neer Dose

ಬೆಂಗಳೂರು: ಇದು ಸಿನೆಮಾದ ಕ್ಲೈಮ್ಯಾಕ್ಸ್ ಅಲ್ಲ. ಆದರೆ ‘ನೀರ್ ದೋಸೆ’ ಚಿತ್ರೀಕರಣ ಬುಧವಾರ ಸುಖಾಂತ್ಯ ಕಂಡಿದ್ದು, ನಿರ್ದೇಶಕ ವಿಜಯ್ ಪ್ರಸಾದ್ ನಿಟ್ಟುಸಿರು ಬಿಟ್ಟಿದ್ದಾರೆ. ಜಗ್ಗೇಶ್, ದತ್ತಾತ್ರೇಯ, ಸುಮನ್ ರಂಗನಾಥ್ ಮತ್ತು ಹರಿಪ್ರಿಯಾ ಕಂಠೀರವ ಸ್ಟುಡಿಯೋದಲ್ಲಿ ಕೊನೆಯ ಹಾಡಿನ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು.

ಸಿನೆಮಾದಲ್ಲೂ ಸಂತಸದ ಅಂತ್ಯ ಇದೆ ಎನ್ನುವ ನಿರ್ದೇಶಕ “ನೀರ್ ದೋಸೆ’ಗೆ ಸುಖಾಂತ್ಯ ನೀಡುವ ಇರಾದೆಯುತ್ತು, ಸಿನೆಮಾ ಜಗ್ಗೇಶ್ ಮತ್ತು ಸುಮನ್ ರಂಗನಾಥ್ ಅವರ ಮದುವೆಯ ಮೂಲಕ ಕೊನೆಗೊಳ್ಳುತ್ತದೆ” ಎಂದು ವಿವರಿಸುತ್ತಾರೆ.

ಹಲವಾರು ವಿವಾದಗಳು, ತಪ್ಪುಗಳ ನಂತರ ಬಹಳಷ್ಟು ಕಲಿತೆ ಎನ್ನುವ ನಿರ್ದೇಶಕನಿಗೆ ಇದು ಮರುಹುಟ್ಟಂತೆ.
“ನನ್ನ ಧೃಢತೆ ಮತ್ತು ಕಾರ್ಯಕ್ಷಮತೆ ಗುರಿ ಮುಟ್ಟುವಂತೆ ಮಾಡಿದೆ. ತಪ್ಪುಗಳು ಮಾನವಸಹಜ. ಜೀವನದಲ್ಲಿ ಇವುಗಳನ್ನು ಮೀರುವುದನ್ನು ತ್ರಾಸದಾಯಕವಾಗಿಯೇ ಕಲಿಯಬೇಕು” ಎನ್ನುವ ವಿಜಯಪ್ರಸಾದ್ ಈ ಯೋಜನೆ ಮುಂದಿನ ಸಿನೆಮಾಗಳಿಗೆ ಸ್ಫೂರ್ತಿ ಎಂದಿದ್ದಾರೆ.

ಈಗ ಸದ್ಯಕ್ಕೆ ಸಿನೆಮಾದ ಸಂಕಲನ ಕಾರ್ಯ ಪ್ರಗತಿಯಲ್ಲಿದ್ದು “ಡಬ್ಬಿಂಗ್ ಕೂಡ ಮುಗಿಯಬೇಕಿದೆ, ಎಲ್ಲವೂ ಸುಸೂತ್ರವಾಗಿ ನಡೆದರೆ, ಮೇ ಅಂತ್ಯಕ್ಕೆ ಅಥವಾ ಜೂನ್ ವೇಳೆಗೆ ಸಿನೆಮಾ ಬಿಡುಗಡೆಯಾಗಲಿದೆ. ಆ ಹೊತ್ತಿಗೆ ಕ್ರಿಕೆಟ್ ಜ್ವರ ಇಳಿದಿರುತ್ತದೆ” ಎನ್ನುತಾರೆ ವಿಜಯ್. ಅನೂಪ್ ಸೀಳಿನ್ ಸಿನೆಮಾಗೆ ಸಂಗೀತ ನೀಡಿದ್ದು, ಸುಜ್ಞಾನ ಮೂರ್ತಿ ಸಿನೆಮ್ಯಾಟೋಗ್ರಾಫರ್.

Write A Comment