ಮನೋರಂಜನೆ

ಗೂಗಲ್ ಇರುವದು ಮುದುಕರಿಗೆ: ಆಲಿಯಾ ಭಟ್

Pinterest LinkedIn Tumblr

alia-bhatt

ನವದೆಹಲಿ: ಇತ್ತೀಚೆಗಷ್ಟೇ ಸಿದ್ಧಾರ್ಥ್ ಮಲಹೋತ್ರಾ ಅವರೊಂದಿಗೆ ವೋಗ್ ಫೋಟೋ ಶೂಟ್ ನಲ್ಲಿ ಭಾಗವಹಿಸಿದ ಬಾಲಿವುಡ್ ನಟಿ ಆಲಿಯಾ ಭಟ್ ಗೂಗಲ್ ಯುವ ಜನತೆಗಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಅದೇ ಪತ್ರಿಕೆಗೆ ಸಂದರ್ಶನ ನೀಡಿರುವ ೨೨ ವರ್ಷದ ನಟಿ ದಿನಕ್ಕೆ ಎಷ್ಟು ಬಾರಿ ಗೂಗಲ್ ನಲ್ಲಿ ಹುಡುಕುತ್ತೀರಿ ಎಂಬ ಪ್ರಶ್ನೆಗೆ “ಗೂಗಲ್ ಇರುವುದು ಮುದುಕರಿಗೆ, ಇನ್ಸ್ಟಾಗ್ರಾಮ್ ಈಗ ನೂತನ ಗೂಗಲ್!” ಎಂದಿದ್ದಾರೆ.

ಈ ಮಧ್ಯೆ ‘ಬ್ರದರ್ಸ್’ ಸಿನೆಮಾದ ನಾಯಕ ನಟನನ್ನು ಹೆಚ್ಚುತ್ತಿರುವ ಸಾಮಾಜಿಕ ಜಾಲತಾಣದ ಚಟುವಟಿಕೆಗಳ ಬಗ್ಗೆ ಪ್ರಶ್ನಿಸಿದಾಗ “ಇದು ಪೀಳಿಗೆಯ ವಿಷಯ. ನಮ್ಮ ವಯಸ್ಸಿನ ಜನ ಯಾವಾಗಲೂ ಫೋನಿನಲ್ಲಿರುತ್ತಾರೆ- ಇನ್ಸ್ಟಾಗ್ರಾಮ್ ಬಳಸುತ್ತಲೋ, ಟ್ವೀಟ್ ಮಾಡುತ್ತಲೋ, ವಾಟ್ಸ್ ಆಪ್ ಬಳಸುತ್ತಲೋ ಮತ್ತು ನಾವು ಸಿನೆಮಾರಂಗದಲ್ಲಿರುವುದರಿಂದ ಅವರ ಬಳಕೆಗೆ ಪೂರೈಕೆ ಮಾಡಬೇಕಾಗುತ್ತದೆ” ಎಂದಿದ್ದಾರೆ ಸಿದ್ಧಾರ್ಥ್.

ಮಾರ್ಚ್ ೧೮ ರಂದು ಬಿಡುಗಡೆಯಾಗಲಿರುವ ‘ಕಪೂರ್ ಅಂಡ ಸನ್ಸ್’ ಸಿನೆಮಾದಲ್ಲಿ ಆಲಿಯಾ ಭಟ್ ಮತ್ತು ಸಿದ್ಧಾರ್ಥ್ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ.

Write A Comment