ಕರ್ನಾಟಕ

ಒಂಟಿ ಸಲಗ ದಾಳಿ, ಇಬ್ಬರು ಮಹಿಳೆಯರ ಸಾವು

Pinterest LinkedIn Tumblr

eleಗೋಣಿಕೊಪ್ಪಲು: ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಕಾಡಾನೆ ತುಳಿದು ಇಬ್ಬರು ಮಹಿಳಾ ಕಾರ್ವಿುಕರು ಸಾವನ್ನಪ್ಪಿರುವ ಘಟನೆ ನಡೆದಿದೆ. ಮಟ್ಟಪರಂಬುವಿನ ಭಾಗ್ಯ (35), ರಾಜಿ (46) ಸಾವನ್ನಪ್ಪಿರುವ ದುರ್ದೈವಿಗಳು.

ಗುರುವಾರ ಮಧ್ಯಾಹ್ನ ತೋಟದಲ್ಲಿ ಕಾಫಿ ಬೀಜ ಹೆಕ್ಕುತ್ತಿದ್ದ ಸಂದರ್ಭ ಒಂಟಿ ಸಲಗ ದಾಳಿ ನಡೆಸಿದೆ. ಪರಿಣಾಮ ರಾಜಿ ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಭಾಗ್ಯ ಅವರನ್ನು ಅಮ್ಮತ್ತಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದರಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾದರು.

ಸ್ಥಳಕ್ಕೆ ವಿರಾಜಪೇಟೆ ಆರ್ ಎಫ್ ಓ ವಿಕ್ರಂ, ತಿತಿಮತಿ ಆರ್ ಎಫ್ ಓ ಗೋಪಾಲ್ ಹಾಗೂ ಸಿಬ್ಬಂದಿ ಗಣಪತಿ ಭೇಟಿ ನೀಡಿದ್ದಾರೆ.

Write A Comment