ರಾಷ್ಟ್ರೀಯ

ಇಂಡೋ-ಪಾಕ್ ಪಂದ್ಯ ಈಡನ್ ಗಾರ್ಡನ್​ಗೆ ಸ್ಥಳಾಂತರ ಸಾಧ್ಯತೆ!

Pinterest LinkedIn Tumblr

CRICEKT-WEBನವದೆಹಲಿ: ಮಾರ್ಚ್ 19 ರಂದು ಧರ್ಮಶಾಲಾ ಕ್ರೀಡಾಂಗಣದಲ್ಲಿ ನಡೆಯ ಬೇಕಾಗಿದ್ದ ಇಂಡೋ-ಪಾಕ್ ಪಂದ್ಯಕ್ಕೆ ಭದ್ರತಾ ವಿಚಾರವಾಗಿ ಹಿಮಾಚಲ ಪ್ರದೇಶ ಸರ್ಕಾರ ಖ್ಯಾತೆ ತೆಗೆದ ಹಿನ್ನಲೆಯಲ್ಲಿ ಈ ಪಂದ್ಯ ಕೋಲ್ಕತಾದ ಈಡನ್ ಗಾರ್ಡ್​ನ್ಗೆ ವರ್ಗಾವಣೆ ಆಗುವ ಸಾಧ್ಯತೆ ಇದೆ.

ಈ ಕುರಿತು ಪ್ರತಿಕ್ರಿಯಿಸಿರುವ ಬಿಸಿಸಿಐ ಪ್ರಧಾನ ಕಾರ್ಯದರ್ಶಿ ಅನುರಾಗ್ ಠಾಕೂರ್, ಕ್ರೀಡೆಯಲ್ಲಿ ರಾಜಕೀಯ ಸುಳಿದಾಡಿರುವುದೆ ಇದಕ್ಕೆ ಕಾರಣ. ಕೊನೆಯ ಘಳಿಗೆಯಲ್ಲಿ ಭದ್ರತಾ ವಿಚಾರವಾಗಿ ಹಿಮಾಚಲ ಪ್ರದೇಶ ಸರ್ಕಾರ ಪಂದ್ಯಕ್ಕೆ ಅಡ್ಡಿಯಾಗಿರುವುದು ಸರಿಯಲ್ಲ. ಧರ್ಮಶಾಲೆಯಲ್ಲಿ ಇಂಡೋ-ಪಾಕ್ ಮ್ಯಾಚ್ ನಡೆಯದಿದ್ದರೆ ಮುಂದಿನ ಹತ್ತು ವರ್ಷ ಐಸಿಸಿ ಈ ಕ್ರೀಡಾಂಗಣವನ್ನು ಬ್ಯಾನ್ ಮಾಡಬೇಕೆಂದು ಸೂಚಿಸಿರುವುದಾಗಿ ಗುರುವಾರ ತಿಳಿಸಿದರು.

ಕೇಂದ್ರದಲ್ಲಿ ಎನ್ ಡಿ ಎ ಸರ್ಕಾರ ಆಡಳಿತದಲ್ಲಿರುವುದರಿಂದ ಹಿಮಾಚಲ ಪ್ರದೇಶದಲ್ಲಿರುವ ಕಾಂಗ್ರೆಸ್ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದು ಠಾಕೂರ್ ಆರೋಪಿಸಿದರು.

ಈ ಮಧ್ಯೆ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಸಹ ತಂಡಕ್ಕೆ ಹೆಚ್ಚಿನ ಭದ್ರತೆ ಒದಗಿಸಬೇಕು ಎಂದು ಮನವಿ ಸಲ್ಲಿಸಿರುವುದರಿಂದ ಪಂದ್ಯವನ್ನು ಕೋಲ್ಕತಾದ ಈಡನ್​ಗಾರ್ಡನ್​ಗೆ ವರ್ಗಾಯಿಸಲು ಐಸಿಸಿ ಚಿಂತಿಸುತ್ತಿದೆ.

ಭಾರತ ಮತ್ತು ಪಾಕಿಸ್ತಾನ ನಡುವೆ ಧರ್ಮಶಾಲಾದಲ್ಲಿ ನಡೆಯಲಿರುವ ಹೈವೋಲ್ಟೇಜ್ ಪಂದ್ಯಕ್ಕೆ ಭದ್ರತೆ ಒದಗಿಸುವುದು ಕಷ್ಟ ಎಂದು ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ವೀರಭದ್ರ ಸಿಂಗ್ ಗೃಹ ಸಚಿವಾಲಯಕ್ಕೆ ಈ ಹಿಂದೆ ಪತ್ರ ಬರೆದಿದ್ದರು.

Write A Comment