ಕರ್ನಾಟಕ

ಜಾಗತೀಕರಣದ ನೆಪದಲ್ಲಿ ಕೃಷಿಯನ್ನು ಕಡೆಗಣಿಸಲಾಗುತ್ತಿದೆ

Pinterest LinkedIn Tumblr

kriಕುಶಾಲನಗರ: ಜಾಗತೀಕರಣದ ನೆಪದಲ್ಲಿ ಕೃಷಿಯನ್ನು ಕಡೆಗಣಿಸುತ್ತಿರುವುದು ಉತ್ತಮ ಬೆಳವಣಿಗೆ ಅಲ್ಲ ಎಂದು ವಿರಾಜಪೇಟೆಯ ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅಭಿಪ್ರಾಯಪಟ್ಟರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಇಲ್ಲಿನ ಜಾತ್ರಾ ಮೈದಾನದಲ್ಲಿ ನಡೆಯುತ್ತಿರುವ 36ನೇ ರಾಜ್ಯ ಮಟ್ಟದ ಕೃಷಿ ಮೇಳ ಉದ್ಘಾಟನಾ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು.

ಕೊಡಗು ಎಂದ ಕೂಡಲೇ ಇಲ್ಲಿನ ಕಾವೇರಿ ಮಾತೆ, ಪ್ರಕೃತಿ ಸೌಂದರ್ಯ, ವೀರ ಸೈನಿಕರು, ಕಾಫಿ, ಏಲಕ್ಕಿ ಹಾಗೂ ಭತ್ತದ ಕೃಷಿ ಕಣ್ಮುಂದೆ ಬರುತ್ತದೆ. ಆದರೆ ಈಗ ಕಾಲ ಬದಲಾಗಿದ್ದು, ಭತ್ತದ ಕಣಜ ಎಂದೇ ಹೆಸರಾಗಿದ್ದ ವಿರಾಜಪೇಟೆ ತಾಲೂಕಿನಲ್ಲಿ ಗದ್ದೆಗಳನ್ನು ಪಾಳು ಬಿಡಲಾಗಿರುವುದು ಕೃಷಿಯ ಬಗೆಗಿನ ನಿರಾಸಕ್ತಿಗೆ ಒಂದು ಉತ್ತಮ ಉದಾಹರಣೆ ಎಂದು ತಿಳಿಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು. ದೇಶದ ಆರ್ಥಿಕ ಸಬಲೀಕರಣಕ್ಕೆ ಕೃಷಿಯ ಕೊಡುಗೆ ಅಪಾರವಾಗಿದ್ದು, ಆಧುನಿಕತೆಯನ್ನು ಬಳಸಿಕೊಂಡು ಕೃಷಿ ಮಾಡಬೇಕು. ಉತ್ಪಾದನೆಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ನಬಾರ್ಡ್​ನ ಮುಖ್ಯ ಮಹಾ ಪ್ರಬಂಧಕ ಎಂ.ಐ. ಗಣಗಿ, ಮೂಡಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥಯ ಮುಖ್ಯಸ್ಥ ಡಾ.ಮೋಹನ್ ಆಳ್ವಾ ಮೊದಲಾದವರು ಉಪಸ್ಥಿತರಿದ್ದರು.

Write A Comment