ರಾಷ್ಟ್ರೀಯ

ರಾಜೀವ್ ಹಂತರಿಗೆ ಕ್ಷಮಾದಾನ, ಕೇಂದ್ರಕ್ಕೆ ಪತ್ರ ಬರೆದ ತಮಿಳುನಾಡು

Pinterest LinkedIn Tumblr

raನವದೆಹಲಿ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿರುವ 7 ಜನರಿಗೆ ಕ್ಷಮಾದಾನ ನೀಡುವಂತೆ ತಮಿಳುನಾಡು ಸರ್ಕಾರ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದೆ. ಈ ಪತ್ರವನ್ನು ಪರಿಶೀಲಿಸಲಾಗುತ್ತಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಲೋಕಸಭೆಯಲ್ಲಿ ತಿಳಿಸಿದ್ದಾರೆ.

ರಾಜೀವ್ ಹಂತರಿಗೆ ಕ್ಷಮಾದಾನ ನೀಡುವ ಸಂಬಂಧ ತಮಿಳುನಾಡು ಸರ್ಕಾರ ಪತ್ರ ಬರೆದಿದೆ. ಆದರೆ ಈ ವಿಚಾರವಾಗಿ ಈಗಾಗಲೇ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಸುಪ್ರೀಂ ಕೋರ್ಟ್ ನೀಡುರುವ ತೀರ್ಪನ್ನು ಎತ್ತಿ ಹಿಡಿಯುವುದು ಸಂವಿಧಾನಬದ್ಧ ಕರ್ತವ್ಯ ಮತ್ತು ನಮ್ಮ ನೈತಿಕ ಜವಾಬ್ದಾರಿ ಕೂಡ ಹೌದು. ಕೇಂದ್ರ ಸರ್ಕಾರ ತಮಿಳುನಾಡಿನ ಪತ್ರವನ್ನು ಪರಿಶೀಲಿಸಲಿದೆ ಎಂದು ರಾಜನಾಥ್ ಸಿಂಗ್ ತಿಳಿಸಿದ್ದಾರೆ.

ಮೇ 21, 1991 ರಲ್ಲಿ ಶ್ರೀಪೆರಂಬದೂರಿನಲ್ಲಿ ಚುನಾವಣಾ ಸಭೆಯಲ್ಲಿ ಭಾಗವಹಿಸಿದ್ದ ರಾಜೀವ್ ಗಾಂಧಿ ಅವರನ್ನು ಹತ್ಯೆ ಮಾಡಲಾಗಿತ್ತು. ಈ ಸಂಬಂಧ ವಿಶೇಷ ಟಾಡಾ ನ್ಯಾಯಾಲಯ ಮುರುಗನ್, ಸಂತನ್, ಅರಿವು, ಜಯಕುಮಾರ, ರಾಬರ್ಟ್ ಪಯಾಸ್, ರವಿಚಂದ್ರ ಮತ್ತು ಅಶ್ವಿನಿ ಎಂಬುವರನ್ನು ಜೀವಾವಧಿ ಶಿಕ್ಷೆಗೆ ವಿಧಿಸಿತ್ತು.

ಶಿಕ್ಷೆಗೊಳಗಾಗಿರುವ ಅಪರಾಧಿಗಳು ತಮಗೆ ಕ್ಷಮಾದಾನ ನೀಡುವಂತೆ ತಮಿಳುನಾಡು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಈ ಸಂಬಂಧ ಹಂತಕರಿಗೆ ಕ್ಷಮಾದಾನ ನೀಡಲು ನಿರ್ಧರಿಸಿ, ಕೇಂದ್ರದ ಅಭಿಪ್ರಾಯ ಕೇಳಿ ತಮಿಳುನಾಡು ಸರ್ಕಾರ ಪತ್ರ ಬರೆದಿತ್ತು.

ರಾಜೀವ್ ಹಂತರಿಗೆ ಕ್ಷಮಾದಾನ ನೀಡುವ ಸಂಬಂಧ ಕೇಂದ್ರ ಸರ್ಕಾರ ನಿರ್ಧಾರ ನಿರ್ಧಾರ ತೆಗೆದುಕೊಳ್ಳಲಿ ಎಂದು ಸುಪ್ರೀಂ ಕೋರ್ಟ್ 2015ರ ಡಿಸೆಂಬರ್ 2 ರಂದು ತಿಳಿಸಿತ್ತು.

(ವಿವರ, ವೈವಿಧ್ಯಮಯ ಸುದ್ದಿಗಳಿಗೆ ವಿಜಯವಾಣಿ ಪತ್ರಿಕೆ ಓ

Write A Comment