ಅಂತರಾಷ್ಟ್ರೀಯ

ಅಮೆರಿಕದಲ್ಲಿ ದುಬಾರಿ ರೈಲು ನಿಲ್ದಾಣ

Pinterest LinkedIn Tumblr

amerikaವಾಷಿಂಗ್ಟನ್: ಅಮೆರಿಕದ ನ್ಯೂಯಾರ್ಕ್‌ನಲ್ಲಿ ಪ್ರಪಂಚದ ದುಬಾರಿ ರೈಲು ನಿಲ್ದಾಾಣ ನಿರ್ಮಾಣವಾಗಿದೆ. ಕಳೆದ 14 ವರ್ಷಗಳ ಹಿಂದೆ ಅಲ್ ಖೈದಾ ಉಗ್ರರು ಧ್ವಂಸಗೊಳಿಸಿದ್ದ ವರ್ಲ್‌ಡ್‌ ಟ್ರೇಡ್ ಸೆಂಟರ್ ಬಳಿ ಈ ರೈಲು ನಿಲ್ದಾಣವನ್ನು ನಿರ್ಮಿಸಲಾಗಿದೆ. ಇದನ್ನು ನಿರ್ಮಾಣ ಮಾಡಲು 12 ವರ್ಷ ತಗುಲಿದ್ದು, ಯಾವುದೇ ಯೋಜಿತ ಕಾರ್ಯಕ್ರಮವಿಲ್ಲದೆ ಪ್ರಯಾಣಿಕರೆ ಇದಕ್ಕೆ ಚಾಲನೆ ನೀಡಿದ್ದಾರೆ.

ಈ ರೈಲು ನಿಲ್ದಾಣ ನ್ಯೂಜೆರ್ಸಿ ಹಾಗೂ ನ್ಯೂಯಾರ್ಕ್‌ಗೆ ಸಂಪರ್ಕ ಕಲ್ಪಿಸಲಾಗಿದೆ. ರೈಲು ನಿಲ್ದಾಾಣಕ್ಕೂ ವರ್ಲ್‌ಡ್‌ ಟ್ರೇಡ್ ಸೆಂಟರ್‌ಗೂ ಪಾದಾಚಾರಿ ಮಾರ್ಗ ಕಲ್ಪಿಸಲಾಗಿದೆ. ಅಲ್ಲದೆ ಇಲ್ಲಿ ಶಾಪಿಂಗ್ ಸೆಂಟರ್ಸ್ ಹಾಗೂ ರೆಸ್ಟೊರೆಂಟ್‌ಗಳನ್ನು ತೆರೆಯಲಾಗುತ್ತದೆ ಎಂದು ಮೂಲಗಳು ಹೇಳಿವೆ. ಈ ಬಿಲ್ಡಿಂಗನ್ನು ಸ್ಪ್ಯಾನಿಶ್-ಸ್ವಿಸ್ ನ ವಾಸ್ತು ಶಿಲ್ಪಿ ಸ್ಯಾಂಟಿಯಾಗೊ ಕಲತ್ರವ ನಿರ್ಮಿಸಿದ್ದಾರೆ.

ಸ್ಟೀಲ್ ಪಟ್ಟಿ ಹಾಗೂ ಗಾಜು ಬಳಸಿ ಅಂಡಾಕಾರಾಕೃತಿಯಲ್ಲಿ ನಿರ್ಮಿಸಲಾಗಿದ್ದು, ಹಕ್ಕಿಯ ರೆಕ್ಕೆಯಂತೆ ಕಾಣುತ್ತದೆ. ಈ ನಿಲ್ದಾಣ 350 ಅಡಿ ಉದ್ದವಿದ್ದು, 115 ಅಡಿ ಅಗಲವಿದೆ ಎಂದು ಕಲತ್ರವ ಹೇಳಿದ್ದಾರೆ. ಗುರುವಾರ ಇದರ ಉದ್ಘಾಟನೆ ಮಾಡಲಾಗಿದ್ದು, ಅಂಗಡಿಗಳನ್ನು ಆಗಸ್‌ಟ್‌‌ನಲ್ಲಿ ತೆರೆಯಲಾಗುತ್ತದೆ ಎನ್ನಲಾಗಿದೆ. ಇದರ ನಿರ್ಮಾಣಕ್ಕೆ 2 ಶತಕೋಟಿ ಡಾಲರ್ ತಗಲುವುದಾಗಿ ಅಂದಾಜಿಸಲಾಗಿತ್ತು. ಈಗ ಖರ್ಚಿನ ಮೊತ್ತ 3.85 ಶತಕೋಟಿ ಡಾಲರ್ ತಲುಪಿದ್ದು, ಪ್ರಪಂಚದ ಅತಿ ದುಬಾರಿ ರೈಲು ನಿಲ್ದಾಣವಾಗಿದೆ.

Write A Comment