ರಾಷ್ಟ್ರೀಯ

ರೈತರ ಮೇಲಿನ ಲಾಠಿಚಾರ್ಜ್ ಗೆ ಜೋಷಿ ಖಂಡನೆ

Pinterest LinkedIn Tumblr

joshiದೆಹಲಿ: ಶಾಶ್ವತ ನಿರಾವರಿಗಾಗಿ ಆಗ್ರಹಿಸಿ ಇಂದು ರೈತರ ಮೇಲಿನ ಲಾಠಿಚಾರ್ಜ್ ಅನ್ನು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಷಿ ಖಂಡಿಸಿದ್ದಾರೆ.

ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಇದನ್ನು ಬಗೆಹರಿಸುವಲ್ಲಿ ಸರಕಾರ ಎಡವಿದೆ. ಈ ಹಿನ್ನಲೆಯಲ್ಲಿ ರೈತರು ಇಂದು ತೀವ್ರ ಹೋರಾಟ ನಡೆಸಿದ್ದು, ಪರಿಸ್ಥಿತಿ ಹತೋಟಿಗೆ ತರುವ ಸಲುವಾಗಿ ಲಾಠಿಚಾರ್ಜ್ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಅನೆಕ ರೈತರಿಗೆ ತಲೆ, ಸೊಂಟ ಹಾಗೂ ಓರ್ವ ರೈತನ ಕೈ ಬೆರಳು ತುಂಡಾಗಿದ್ದು, ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಬಗ್ಗೆ ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜೋಷಿ, ರೈತರ ಮೇಲಿನ ಈ ರೀತಿಯ ಹಲ್ಲೆಯನ್ನು ಖಂಡಿಸುವುದಾಗಿ ತಿಳಿಸಿದ ಅವರು ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುವಂತೆ ಸರಕಾರವನ್ನು ಆಗ್ರಹಿಸಿದರು.

Write A Comment