ಮುಂಬೈ

ವಿಜಯ್ ಮಲ್ಯ ಬಂಧನಕ್ಕೆ ಎಸ್ ಬಿ ಐ ಮನವಿ

Pinterest LinkedIn Tumblr

vijayaಮುಂಬಯಿ: ಸಾಲ ಮರುಪಾವತಿ ಮಾಡದ ಹಿನ್ನಲೆಯಲ್ಲಿ ವಿಜಯ್ ಮಲ್ಯ ಅವರನ್ನು ಬಂಧಿಸುವಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ‘ಸಾಲ ವಸೂಲಿ ನ್ಯಾಯಾಧಿಕರಣ’ಕ್ಕೆ ಮನವಿ ಮಾಡಿದೆ.

ಮದ್ಯದ ದೊರೆ ವಿಜಯ ಮಲ್ಯ ಬ್ರಿಟನ್ ಗೆ ಹೋಗಿ ನೆಲೆಸುವ ಸುಳಿವು ನೀಡಿರುವ ಹಿನ್ನೆಲೆಯಲ್ಲಿ ಅವರ ಪಾಸ್‌ಪೋರ್ಟ್ ಜಪ್ತಿಗೆ ಆದೇಶಿಸುವಂತೆಯೂ ಬೆಂಗಳೂರಿನಲ್ಲಿರುವ ನ್ಯಾಯಾಧಿಕರಣಕ್ಕೆ ಬ್ಯಾಂಕ್ ಮನವಿಮಾಡಿದೆ. ಸಾಲ ಮರುಪಾವತಿಸದ ಬೃಹತ್ ಕಂಪನಿಗಳ ವಿಚಾರದಲ್ಲಿ ಸರ್ಕಾರಿ ಬ್ಯಾಂಕ್‌ಗಳ ಮೃದು ಧೋರಣೆ ಬಗ್ಗೆ ಸಿಬಿಐ ಮುಖ್ಯಸ್ಥ ಅನಿಲ್ ಸಿನ್ಹಾ ಕಟುವಾಗಿ ಟೀಕಿಸಿದ್ದರು. ಇದರ ನಡುವೆಯೇ ಎಸ್‌ಬಿಐ ಈ ಕ್ರಮಕ್ಕೆ ಮುಂದಾಗಿದೆ. ಕಿಂಗ್ ಫಿಶರ್ ಏರ್ ಲೈನ್ಸ್ ವಿರುದ್ಧ ದೂರು ನೀಡಲು ಯಾರು ಮುಂದೆ ಬರದುದ್ದಕ್ಕೆ ಅಸಮಾಧಾನ ವ್ಯಕ್ತ ಪಡಿಸಿದ್ದರು.

ಮಲ್ಯ ಅವರ ಬಂಧನ, ಪಾಸ್‌ಪೋರ್ಟ್ ಜಪ್ತಿ ಹಾಗೂ ದೇಶ-ವಿದೇಶಗಳಲ್ಲಿ ಮಲ್ಯ ಹೊಂದಿರುವ ಸಂಪೂರ್ಣ ಆಸ್ತಿಗಳ ವಿವರ ಬಹಿರಂಗಕ್ಕೆ ಕೋರಿ ಸಂಬಂಧಿಸಿದಂತೆ ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಲಾಗಿದೆ.

ಸುಮಾರು 7,000 ಕೋಟಿ ರೂ. ಮೊತ್ತದ ಬ್ಯಾಂಕ್ ಸಾಲವನ್ನು ಹಿಂತಿರುಗಿಸದಿರುವ ಕಿಂಗ್‌ಫಿಶರ್ ಏರ್‌ಲೈನ್ಸ್ ವಿರುದ್ಧ ಸಿಬಿಐ ವಂಚನೆಯ ಪ್ರಕರಣ ದಾಖಲಿಸಿದೆ.

ಪ್ರಕರಣವನ್ನು 2015ರ ಜುಲೈನಲ್ಲಿ ದಾಖಲಿಸಿಕೊಳ್ಳಲಾಗಿದೆ. ಆದರೆ ಪ್ರಕರಣ ನಡೆದಿರುವುದು 2004 ಮತ್ತು 2012ರ ಅವಧಿಯಲ್ಲಿ. ಹಲವಾರು ಸಲ ಮನವಿ ಮಾಡಿದ್ದರೂ ಬ್ಯಾಂಕ್‌ಗಳು ಸಿಬಿಐಗೆ ದೂರು ನೀಡಲು ಮುಂದೆ ಬಂದಿರಲಿಲ್ಲ. ಹೀಗಾಗಿ ಸ್ವಯಂ ಪ್ರೇರಿತವಾಗಿ ಸಿಬಿಐ ಪ್ರಕರಣ ದಾಖಲಿಸಿಕೊಂಡಿದೆ.

Write A Comment