ಕರ್ನಾಟಕ

ಸಿಎಂ ಸಿದ್ದರಾಮಯ್ಯರಿಗೆ ಬೆದರಿಕೆ ಪತ್ರ; ಚಿತ್ರದುರ್ಗದಲ್ಲಿ ವ್ಯಕ್ತಿ ಬಂಧನ

Pinterest LinkedIn Tumblr

siddu

ಚಿತ್ರದುರ್ಗ: ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಅನಾಮಧೇಯ ಬೆದರಿಕೆ ಪತ್ರ ಬರೆದಿದ್ದ ವ್ಯಕ್ತಿಯನ್ನು ಚಿತ್ರದುರ್ಗದಲ್ಲಿ ಪೊಲೀಸರು ಬಂಧಿಸಿದ್ದಾರೆ.

ಅನಾಮಧೇಯ ಬೆದರಿಕೆ ಪತ್ರ ಬರೆದಿದ್ದ ದಾವಣಗೆರೆ ಮೂಲದ 35 ವರ್ಷದ ಶಂಕರಪ್ಪನನ್ನು ಬಂಧಿಸಲಾಗಿದ್ದು, ಬೆದರಿಕೆ ಪತ್ರವನ್ನು ಜಿಲ್ಲಾ ಸಚಿವ ಹೆಚ್. ಆಂಜನೇಯ ಕಚೇರಿ ಸಿಬ್ಬಂದಿಗಳು ಎಸ್ ಪಿ ಎಂಎನ್ ಅನುಚೇತ್ ಅವರಿಗೆ ನೀಡಿದ್ದಾರೆ.

ಕಾಲೇಜು ತೊರೆದಿರುವ ಶಂಕರಪ್ಪನಿಗೆ ಪ್ರಸಿದ್ಧ ವ್ಯಕ್ತಿಗಳಿಗೆ ಅನಾಮಧೇಯ ಬೆದರಿಕೆ ಪತ್ರಗಳನ್ನು ಬರೆಯುವುದೇ ಕೆಲಸವಾಗಿದೆ. ರಾಜಕೀಯದಲ್ಲಿ ತೊಡಗಿಕೊಳ್ಳಲು ಸಕ್ರಿಯನಾಗಿರುವ ಶಂಕರಪ್ಪ ರಾಜಕೀಯ ಮುಂಖಡರ ಗಮನ ಸೆಳೆಯುವ ಸಲುವಾಗಿ ಈ ರೀತಿ ಪತ್ರಗಳನ್ನು ಬರೆಯುತ್ತಿದ್ದಾನೆ ಎಂದು ತನಿಖಾಧಿಕಾರಿ ಹೇಳಿದ್ದಾರೆ.

ಎಸ್ ಪಿ ಅನುಚೇತ್ ಅವರು ಬೆದರಿಕೆ ಪತ್ರ ಬರೆದಿದ್ದ ಅನಾಮಧೇಯ ವ್ಯಕ್ತಿಯನ್ನು ಬಂಧಿಸುವ ಸಲುವಾಗಿ ನಾಲ್ಕು ತಂಡಗಳನ್ನು ರಚಿಸಿದ್ದರು. ಫೆಬ್ರವರಿ 23 ರಂದು ಮುರುಘಮಠದ ಡಾ.ಶಿವಮೂರ್ತಿ ಮುರುಘ ಶರಣರ ಆರೋಹಣದ ಸಿಲ್ವರ್ ಜುಬಿಲಿ ಸಂಭ್ರಮಾಚರಣೆ ವೇಳೆ ಹೆಚ್. ಆಂಜನೇಯ ಅವರಿಗೆ ಈ ಪತ್ರವನ್ನು ನೀಡಲಾಗಿತ್ತು.

Write A Comment