ಅಂತರಾಷ್ಟ್ರೀಯ

ಶ್ರೀಮಂತರ ಹೆಚ್ಚಳದಲ್ಲಿ ಭಾರತ ಪ್ರಥಮ; 2025ರ ವೇಳೆಗೆ 6ನೇ ಸ್ಥಾನದಿಂದ 4ನೇ ಸ್ಥಾನಕ್ಕೆ !

Pinterest LinkedIn Tumblr

money_3

ಮುಂಬೈ: ಕಳೆದ ಹತ್ತು ವರ್ಷಗಳಲ್ಲಿ ಭಾರತದಲ್ಲಿ ಸೂಪರ್ ಶ್ರೀಮಂತರ ಹೆಚ್ಚಳ ಪ್ರಮಾಣ ಶೇ.340ರಷ್ಟು ವೇಗದಲ್ಲಿ ಸಾಗಿದ್ದು, ಶ್ರೀಮಂತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು ಇದು ಜಾಗತಿಕ ಮಟ್ಟದ ಸರಾಸರಿ ಬೆಳವಣಿಗೆಯನ್ನು ಹಿಂದಿಕ್ಕಿದೆ.

ಜಾಗತಿಕ ಮಟ್ಟದಲ್ಲಿ ಈ ಬೆಳವಣಿಗೆ ಪ್ರಮಾಣ ಶೇ.68ರಷ್ಟಿದೆ ಎಂದು ನೈಟ್ ಫ್ರಾಂಕ್ ಗ್ಲೋಬಲ್ ವೆಲ್ತ್ ರಿಪೋರ್ಟ್-2016 ಹೇಳಿದೆ. ಅತಿ ಹೆಚ್ಚು ವೈಯಕ್ತಿ ಆದಾಯ (ಯುಎಚ್ಎನ್ಐ) ಹೊಂದಿರುವವರು (3 ಕೋಟಿ ಡಾಲಗ್ ಗಿಂತ ಹೆಚ್ಚು ಆದಾಯ) ಸಂಖ್ಯೆ ಸಹ ಶೇ.340ರ ಬೆಳವಣಿಗೆ ಕಾಣುತ್ತಿದ್ದು ನಾಲ್ಕನೇ ಸ್ಥಾನಕ್ಕೇರುವ ಸಾಧ್ಯತೆ ಎಂದು ವರದಿಯಲ್ಲಿ ಹೇಳಲಾಗಿದೆ.

ಸದ್ಯ ಶ್ರೀಮಂತರ ಪಟ್ಟಿಯಲ್ಲಿ ಅಮೆರಿಕ, ಚೀನಾ ಮತ್ತು ಬ್ರಿಟನ್ ಕ್ರಮವಾಗಿ ಮೊದಲ ಮೂರು ಸ್ಥಾನಗಳಲ್ಲಿವೆ. ಭಾರತದಲ್ಲಿ ಅತಿ ಹೆಚ್ಚು ಶ್ರೀಮಂತರು ನೆಲೆಸಿರುವ ನಗರಗಳಲ್ಲಿ ಮುಂಬೈ ಮೊದಲು ಮತ್ತು ದೆಹಲಿ ಎರಡನೇ ಸ್ಥಾನದಲ್ಲಿದೆ.

Write A Comment