ರಾಷ್ಟ್ರೀಯ

ಸಿಯಾಚಿನ್ ನಲ್ಲಿ 130 ಅಡಿ ಆಳದ ಹಿಮಕಂದಕದಿಂದ ದೇಹವನ್ನು ಹೊರತೆಗೆದ ಯೋಧರು

Pinterest LinkedIn Tumblr

2

ನವದೆಹಲಿ: ಭಾರತ-ಪಾಕಿಸ್ತಾನ ಗಡಿಭಾಗದಲ್ಲಿರುವ ಹಿಮಾಲಯದ ತಪ್ಪಲಿನಲ್ಲಿರುವ ಸಿಯಾಚಿನ್ ನೀರ್ಗಲ್ಲು ಇತ್ತೀಚೆಗೆ ಭಾರೀ ಸುದ್ದಿ ಮಾಡಿರುವುದು ಗೊತ್ತೇ ಇದೆ. ಕರ್ನಾಟಕದ ಮೂವರು ಸೇರಿದಂತೆ 9 ಮಂದಿ ಯೋಧರು ಭಾರೀ ಹಿಮಪಾತದಡಿ ಸಿಲುಕಿ ಸಾವನ್ನಪ್ಪಿದ್ದರು. ಹಿಮಪಾತದಡಿ ಸಿಲುಕಿ ಕೆಲ ದಿನಗಳವರೆಗೆ ಧಾರವಾಡ ಮೂಲದ ಯೋಧ ಹನುಮಂತಪ್ಪ ಬದುಕಿದ್ದರು. ಶವಗಳನ್ನೆಲ್ಲಾ ಸೇನಾಪಡೆ ಹೇಗೋ ಹೊರಗೆ ತೆಗೆದಿತ್ತು.

3

1

ಇದೀಗ ಭಾರತೀಯ ಯೋಧರು ಸಿಯಾಚಿನ್ ನಲ್ಲಿ ಮತ್ತೊಂದು ಸಾಹಸ ಮೆರೆದಿದ್ದಾರೆ. 130 ಅಡಿ ಆಳದ ಹಿಮಕಂದಕದಲ್ಲಿ ಬಿದ್ದಿದ್ದ ಕೂಲಿ ಕಾರ್ಮಿಕರೊಬ್ಬರ ದೇಹವನ್ನು ಮೇಲಕ್ಕೆತ್ತಿದ್ದಾರೆ. ನಿನ್ನೆ 130 ಅಡಿ ಆಳದಲ್ಲಿ ಬಿದ್ದಿದ್ದ ತುಕ್‌ಜೇ ಗ್ಯಾಸ್ಕೆಟ್‌ ಎಂಬ ವ್ಯಕ್ತಿಯ ದೇಹವನ್ನು ನೋಡಿದ ಸೇನಾ ಯೋಧರು ತಮ್ಮ ಕಾರ್ಯಚರಣೆಯನ್ನು ಆರಂಭಿಸಿದರು.

ಈತ ಕಳೆದ ಶುಕ್ರವಾರ ಹಿಮಕಂದಕದಡಿ ಬಿದ್ದಿದ್ದರು.ಮೈನಸ್‌ 45 ಡಿಗ್ರಿ ಸೆಲ್ಸಿಯಸ್ ನಷ್ಟು ಮೈಕೊರೆಯುವ ಚಳಿಯಲ್ಲೂ 4 ದಿನ ಭಾರೀ ಹೋರಾಟ ನಡೆಸಿ ದೇಹವನ್ನು ಮೇಲೆತ್ತುವಲ್ಲಿ ಯಶಸ್ವಿಯಾಗಿದ್ದಾರೆ. ಸಿಯಾಚಿನ್‌ ನೀರ್ಗಲ್ಲು ಗಡಿಯಲ್ಲಿ ಕಾರ್ಯನಿರ್ವಹಿಸುವ ಸೈನಿಕರಿಗೆ ಅಗತ್ಯ ವಸ್ತುಗಳನ್ನು ಪೂರೈಸುವ ಕೂಲಿ ಕಾರ್ಮಿಕನಾಗಿ ತುಕ್‌ಜೇ ಗ್ಯಾಸ್ಕೆಟ್‌ ಕೆಲಸ ಮಾಡುತ್ತಿದ್ದರು. ಅವರ ಶರೀರವನ್ನು ಪರ್ತಾಪುರ್ ಹತ್ತಿರ ಹುಂದರ್ ಗೆ ತರಲಾಗಿದ್ದು, ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗುವುದು ಎಂದು ಭಾರತೀಯ ಸೇನೆ ಹೇಳಿದೆ.ತುಕ್‌ಜೇ ಅವರಿಗೆ ಮಡದಿ ಹಾಗೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

ತುಕ್ ಜೇ, ಸಮುದ್ರ ಮಟ್ಟದಿಂದ 19 ಸಾವಿರ ಅಡಿ ಮೇಲೆ ಇರುವ ಉಷ್ಣತೆ -40ರಿಂದ -60 ಡಿಗ್ರಿ ಸೆಲ್ಸಿಯಸ್ ಇರುವ ಹಿಮಕಂದಕಕ್ಕೆ ಮೊನ್ನೆ ಫೆಬ್ರವರಿ 27ರಂದು ಆಕಸ್ಮಿಕವಾಗಿ ಜಾರಿ ಬಿದ್ದಿದ್ದ. ವಿಷಯ ಗೊತ್ತಾದ ಕೂಡಲೇ ಸೇನೆಯ ರಕ್ಷಣಾ ವಿಶೇಷ ತಂಡ ಹಗಲಿರುಳು ರಕ್ಷಣಾ ಕಾರ್ಯ ಆರಂಭಿಸಿತು. ದಟ್ಟವಾದ ಹಿಮವನ್ನು ಕಡಿಯುತ್ತಾ 130 ಅಡಿ ಆಳದವರೆಗೆ ಹೋದಾಗ ಅಲ್ಲಿ ತುಕ್ ಜೇ ಶವ ದೊರಕಿತು.

ತುಕ್ ಜೇ ಗ್ಯಾಸ್ಕೆಟ್ ಸೇನಾ ಯೋಧರಿಗೆ ಅಗತ್ಯ ವಸ್ತುಗಳನ್ನ ಪೂರೈಸುವ ಕಾರ್ಯದಲ್ಲಿ ತೊಡಗಿದ್ದರು. ಅವರ ಕಾರ್ಯವನ್ನು ಸೇನಾ ಮುಖ್ಯಸ್ಥ ಜ.ದಲ್ಬಿàರ್‌ ಸಿಂಗ್‌ ಸುಹಾಗ್‌ ಪ್ರಶಂಸಿಸಿದ್ದಾರೆ. ಸಿಯಾಚಿನ್‌ನಂಥ ಪ್ರದೇಶದಲ್ಲಿ ಸರಕು ಸಾಗಿಸುವುದು ಸಾಮಾನ್ಯ ವಿಷಯವಲ್ಲ. ಅದಕ್ಕೆ ಭಾರೀ ದೈಹಿಕವಾಗಿ ಸಶಕ್ತನಾಗಿರಬೇಕು. ಆತನನ್ನು ನಾವು ನಮ್ಮಲ್ಲಿಯೇ ಒಬ್ಬ ಎಂದು ಭಾವಿಸುತ್ತೇವೆ ಎಂದು ಹೇಳಿದ್ದಾರೆ. ಗ್ಯಾಸ್ಕೆಟ್‌ನ ಕುಟುಂಬಕ್ಕೆ ಸಾಧ್ಯವಿರುವ ಎಲ್ಲಾ ನೆರವು ನೀಡುವುದಾಗಿ ಸೇನೆ ಹೇಳಿದೆ.

Write A Comment