ರಾಷ್ಟ್ರೀಯ

ಮುಖ್ಯಮಂತ್ರಿ ದಾರಿಗಾಗಿ ಮಾನವೀಯತೆ ಮರೆತ ಪೊಲೀಸರು; ಸಿಎಂ ಬೆಂಗಾವಲು ವಾಹನಕ್ಕೆ ದಾರಿ ಮಾಡಿಕೊಡುವಾಗ ಅಪಘಾತಕ್ಕೊಳಗಾಗಿದ್ದ ಯುವಕ ಸಾವು

Pinterest LinkedIn Tumblr

Shivraj Singh Chouhan1

ಭೋಪಾಲ್: ಪೊಲೀಸರ ಅಮಾನವೀಯತೆಗೆ ಮಧ್ಯ ಪ್ರದೇಶದಲ್ಲಿ ವಿದ್ಯಾರ್ಥಿಯೊಬ್ಬ ಪ್ರಾಣ ತೆತ್ತಿದ್ದಾನೆ. ಮುಖ್ಯಮಂತ್ರಿ ಶಿವರಾಜ್ ಸಿಂಗ್ ಬೆಂಗಾವಲು ವಾಹನಕ್ಕೆ ದಾರಿ ಮಾಡಿಕೊಡುವ ರಭಸದಲ್ಲಿ ಪೊಲೀಸರು, ಬಸ್ಸಿಗೆ ಡಿಕ್ಕಿ ಹೊಡೆದು ರಕ್ತದ ಮಡುವಿನಲ್ಲಿ ಬಿದ್ದ ಯುವಕನನ್ನು ನಿರ್ಲಕ್ಷಿಸಿದ್ದರಿಂದ, ಆತ ಮೃತಪಟ್ಟ ಅಮಾನವೀಯ ಘಟನೆ ನಡೆದಿದೆ.

ಸಿಎಂ ಶಿವರಾಜ್ ಸಿಂಗ್ ಚೌಹಾಣ್ ವಾಹನಕ್ಕೆ ದಾರಿ ಮಾಡಿಕೊಡುವಾಗ ಬಸ್ಸೊಂದು ಯುವಕನಿಗೆ ಡಿಕ್ಕಿ ಹೊಡೆದಿತ್ತು. ರಕ್ತದ ಮಡುವಿನಲ್ಲಿ ಬಿದ್ದಿದ್ದ ವಿಕಾಸ್ ಪ್ರಸಾದ್ ಸೊನಿಯಾ ಎಂಬ ಯುವಕನನ್ನು ಪೊಲೀಸರು ಆಸ್ಪತ್ರೆಗೆ ಸೇರಿಸುವ ಬದಲು, ಪಾದಚಾರಿ ರಸ್ತೆಯಲ್ಲಿ ಹಾಕಿದರು. ಸುಮಾರು 45 ನಿಮಿಷಗಳ ಕಾಲ ವಿಕಾಸ್ ಹಾಗೆಯೇ ಒದ್ದಾಡಿ, ಪ್ರಜ್ಞಾ ಹೀನ ಸ್ಥಿತಿಗೆ ತಲುಪಿದರು. ಮುಖ್ಯಮಂತ್ರಿ ತೆರಳಿ, ರಸ್ತೆ ಬಿಡುವಾದ ನಂತರ ಆ್ಯಂಬುಲೆನ್ಸ್‌ವೊಂದು ಬಂದು ವಿಕಾಸ್‌ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಯಿತು.

ಅಲ್ಲಿಯೂ ಸುಮಾರು 20 ನಿಮಿಷಗಳ ಕಾಲ ಆತನಿಗೆ ಯಾವ ಚಿಕಿತ್ಸೆಯೂ ನೀಡದ ಕಾರಣ ಕಾರಿಡಾರಿನಲ್ಲಿಯೇ ಕಾಲ ಕಳೆಯುವಂತಾಯಿತು. 11.45ಕ್ಕೆ ಆತನನ್ನು ಆ್ಯಂಬುಲೆನ್ಸ್ ಆಸ್ಪತ್ರೆಗೆ ತಲುಪಿಸಿದರೆ, ಸುಮಾರು 12.06 ಗಂಟೆಗೆ ವೈದ್ಯರು ಪರೀಕ್ಷಿಸಿದ್ದಾರೆ. ಆದರೆ, ತಕ್ಷಣವೇ ಆತನನ್ನು ನರ್ಮದಾ ತುರ್ತು ನಿಗಮ ಘಟಕಕ್ಕೆ ಹೋಗಲು ಹೇಳಿದ್ದಾರೆ. ಅಲ್ಲಿ ಸುಮಾರು ಎರಡು ಗಂಟೆಗಳ ನಂತರ ವಿಕಾಸ ಕೊನೆಯುಸಿರೆಳೆದಿದ್ದಾನೆ. ‘ಅಗತ್ಯ ಯಂತ್ರಗಳು ಕಾರ್ಯನಿರ್ವಹಿಸದ ಕಾರಣ ವಿಕಾಸ್ ಗಂಟಲೊಳಗೆ ಹೋಗುತ್ತಿದ್ದ ರಕ್ತವನ್ನು ನಿಯಂತ್ರಿಸಲು ವೈದ್ಯರು ವಿಫಲರಾದರು. ನನ್ನ ಕಣ್ಣೆದುರೇ ಮಗ ಕೊನೆಯುಸಿರೆಳೆದ,’ ಎಂದು ತಂದೆ ಗೋಕುಲ್ ಪ್ರಸಾದ್ ಸೋನಿಯಾ ನೊಂದು ನುಡಿದಿದ್ದಾರೆ.

Write A Comment