ಕರ್ನಾಟಕ

‘ಭರ್ಜರಿ’; ಮಾರ್ಚ್ 10ರಿಂದ ಉತ್ತರ ಕರ್ನಾಟಕದಲ್ಲಿ ಚಿತ್ರೀಕರಣ

Pinterest LinkedIn Tumblr

Bharjari

ಬೆಂಗಳೂರು: ಧ್ರುವ ಸರ್ಜಾ ಮತ್ತು ರಚಿತಾ ರಾಮ್ ನಟಿಸುತ್ತಿರುವ ‘ಭರ್ಜರಿ’ ಚಿತ್ರತಂಡ ಇತ್ತೀಚಿಗಷ್ಟೇ ಹೈದರಾಬಾದಿನಲ್ಲಿ ಪ್ರಮುಖ ಘಟ್ಟದ ಚಿತ್ರೀಕರಣ ಮುಗಿಸಿದೆ. ಹರಿಪ್ರಿಯಾ ಈ ಸಿನೆಮಾದ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಪಾತ್ರಗಳ-ಕಥೆಯ ಗುಟ್ಟು ಬಿಚ್ಚಿಡದ ನಿರ್ದೇಶಕ ಚೇತನ್ ಕುಮಾರ್ “ಇದು ಪ್ರಮುಖ ಹಂತದ ಚಿತ್ರೀಕರಣ. ಕಥೆಗೆ ತಿರುವು ಸಿಕ್ಕುವ ಭಾಗ. ಇದರ ಬಗ್ಗೆ ಈಗ ಹೇಳಲು ಸಾಧ್ಯವಿಲ್ಲ. ಪ್ರೇಕ್ಷಕರು ಕುತೂಹಲ ಉಳಿಸಿಕೊಳ್ಳಬೇಕು” ಎಂದಿದ್ದಾರೆ.

ಆರ್ ಎಸ್ ಪ್ರೊಡಕ್ಷನ್ಸ್ ನಿರ್ಮಾಣದ ಈ ಸಿನೆಮಾ ಚಿತ್ರೀಕರಣ ಅರ್ಧ ಮುಗಿದಿದ್ದು, ಮಾರ್ಚ್ ೧೦ರಿಂದ ಉತ್ತರ ಕರ್ನಾಟಕದಲ್ಲಿ ಚಿತ್ರೀಕರಣ ಮುಂದುವರೆಯಲಿದೆ.

ಸಿನೆಮಾ ಅತ್ಯುತ್ತಮವಾಗಿ ಮೂಡಿಬರುತ್ತಿದೆ ಎನ್ನುವ ಅನಿರ್ದೇಶಕ “ನಟರನ್ನು ಸೇರಿದಂತೆ ಎಲ್ಲರು ಸಂಪೂರ್ಣವಾಗಿ ತೊಡಗಿಸಿಕೊಂಡು ಅತ್ಯುತ್ತಮವಾಗಿ ಕೆಲಸ ಮಾಡುತ್ತಿದ್ದಾರೆ” ಎನ್ನುತ್ತಾರೆ.

ಚಿತ್ರತಂಡಕ್ಕೆ ಬೇಕಾಗಿರುವ ಡಿಂಪಲ್ ಕೆನ್ನೆಯ ಮೂರನೆ ನಟಿಯ ಶೋಧನೆಯನ್ನು ಇನ್ನೂ ಮುಗಿದಿಲ್ಲ. ರವಿಶಂಕರ್ ಮತ್ತು ಶ್ರೀನಿವಾಸ ಮೂರ್ತಿ ಪೋಷಕ ನಟರಾಗಿದ್ದು, ವಿ ಹರಿಕೃಷ್ಣ ಸಂಗೀತ ನೀಡಿದ್ದಾರೆ ಹಾಗೂ ಶ್ರೀಷಾ ಕುಡುವಲ್ಲಿ ಸಿನೆಮ್ಯಾಟೋಗ್ರಾಫರ್.

Write A Comment