ಮನೋರಂಜನೆ

‘ನೀರ್ಜಾ’ ಭಾರತದಿಂದ ಅಧಿಕೃತ ಆಸ್ಕರ್ ಪ್ರವೇಶ ಪಡೆಯಬೇಕು: ನಿರ್ಮಾಪಕರು

Pinterest LinkedIn Tumblr

sonam-kapoor-neerja

ಮುಂಬೈ: ಸೋನಮ್ ಕಪೂರ್ ನಟನೆಯ ‘ನೀರ್ಜಾ’ ಸಿನೆಮಾವನ್ನು ೨೦೧೬ರ ಅಕಾಡೆಮಿ ಪ್ರಶಸ್ತಿ ಸ್ಪರ್ಧೆಗೆ ದೇಶ ಅಧಿಕೃತವಾಗಿ ಕಳುಹಿಸಬೇಕು ಎಂದಿದ್ದಾರೆ ನಿರ್ಮಾಪಕರು.

“ಈ ಸಿನೆಮಾ ಆಸ್ಕರ್ ಪ್ರವೇಶಿಸಲು ಅರ್ಹತೆ ಪಡೆದಿದೆ ಎಂದು ನಂಬಿದ್ದೇನೆ… ಇದು ಭಾರತಕ್ಕೆ ಹೆಮ್ಮೆ ತರುವ ಸಾಮರ್ಥ್ಯ ಹೊಂದಿದೆ. ಆದುದರಿಂದ ‘ನೀರ್ಜಾ’ ಆಸ್ಕರ್ ಪ್ರಶಸ್ತಿಗೆ ದೇಶದ ಅಧಿಕೃತ ಸಿನೆಮಾ ಆಗಿ ಪ್ರವೇಶ ಪಡೆಯಬೇಕು” ಎಂದು ಫಾಕ್ಸ್ ಸ್ಟಾರ್ ಸ್ಟುಡಿಯೋದ ಸಿ ಇ ಒ ವಿಜಯ್ ಸಿಂಗ್ ವರದಿಗಾರರಿಗೆ ಹೇಳಿದ್ದಾರೆ.

ಬೇರೆ ದೇಶಗಳಲ್ಲಿ ಈ ಸಿನೆಮಾವನ್ನು ಬಿಡುಗಡೆ ಮಾಡುವುದಾಗಿ ಕೂಡ ಸಿಂಗ್ ಹೇಳಿದ್ದಾರೆ.
“ನೀರ್ಜಾ ನಮಗೆ ಸಾಕಷ್ಟು ಕಲಿಸಿದೆ. ಇದಿನ್ನೂ ಪ್ರಾರಂಭ… ಇದನ್ನು ಬಾಲಿವುಡ್ ಸಿನೆಮಾಗಳು ಸಾಮಾನ್ಯವಾಗಿ ಬಿಡುಗಡೆಯಾಗದ ತೈವಾನ್ ಮತ್ತಿತರ ದೇಶಗಳಲ್ಲಿ ಬಿಡುಗಡೆ ಮಾಡಬೇಕೆಂದಿದ್ದೇವೆ. ಇದು ಸುದೀರ್ಘ ಪಯಣ” ಎಂದು ಕೂಡ ಅವರು ಹೇಳಿದ್ದಾರೆ.

Write A Comment