ಕರ್ನಾಟಕ

ಪ್ರೇಮ ಕಲಹಕ್ಕೆ ಯುವತಿ ಬಲಿ

Pinterest LinkedIn Tumblr

neha

ಬೆಂಗಳೂರು: ಪ್ರೀತಿಸಿದ ಯುವಕನೊಂದಿಗೆ ಜಗಳ ಮಾಡಿಕೊಂಡ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬಳು ಆತನ ಮನೆಯ ಬಳಿಯ ೪ ನೇಮಹಡಿಯಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಮಹದೇವಪುರದ ವಿಘ್ನೇಶ್ವರನಗರದಲ್ಲಿ ನಿನ್ನೆ ರಾತ್ರಿ ನಡೆದಿದೆ.

ಖಾಸಗಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ಓದುತ್ತಿದ್ದ ಎ.ನಾರಾಯಣಪುರದ ನೇಹ(೨೨) ಆತ್ಮಹತ್ಯೆ ಮಾಡಿಕೊಂಡವರು,ವಿಘ್ನೇಶ್ವರನಗರದ ಡಿಆರ್‌ಡಿಓದ ವಸತಿಗೃಹದಲ್ಲಿ ವಾಸಿಸುತ್ತಿದ್ದ ಬಿಕಾಂ ವಿದ್ಯಾರ್ಥಿ ವಿಘ್ನೇಶ್‌ನನ್ನು ಪ್ರೀತಿಸುತ್ತಿದ್ದ ನೇಹ ರಾತ್ರಿ ಆತನ ಮನೆ ಬಳಿ ಬಂದಿದ್ದಾಳೆ.

ಇಬ್ಬರ ನಡುವೆ ಕ್ಷುಲಕ ಕಾರಣಕ್ಕೆ ಜಗಳ ಉಂಟಾಗಿದ್ದು ಇದರಿಂದ ನೊಂದ ಆಕೆ ಆತನ ಮನೆ ಬಳಿಯ ೪ ನೇ ಮಹಡಿಯ ಮನೆಯೊಂದಕ್ಕೆ ಹತ್ತಿ ಅಲ್ಲಿಂದ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಮಹದೇವಪುರದ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Write A Comment