ಕರ್ನಾಟಕ

ಗರ್ಭಿಣಿಯರೇ ಝಿಕಾ ಸೋಂಕು ಪೀಡಿತ ದೇಶಗಳ ಪ್ರವಾಸ ಬೇಡ: ಕೇಂದ್ರ ಸರ್ಕಾರ

Pinterest LinkedIn Tumblr

zikavirus

ನವದೆಹಲಿ: ಝಿಕಾ ಸೋಂಕಿನಿಂದ ಪೀಡಿತವಾಗಿರುವ ದೇಶಗಳಿಗೆ ಗರ್ಭಿಣಿಯರು ಮತ್ತು ಗರ್ಭಿಣಿಯಾಗಬೇಕೆಂದಿರುವ ಮಹಿಳೆಯರು ಪ್ರಯಾಣಿಸಬೇಡಿ ಎಂದು ಕೇಂದ್ರ ಸರ್ಕಾರ ಸಲಹೆ ನೀಡಿದೆ.

ಝಿಕಾ ಸೋಂಕು ಗರ್ಭಿಣಿ ತಾಯಿಯಿಂದ ಮಗುವಿಗೆ ಕೂಡಾ ಗರ್ಭದಲ್ಲೇ ಹರಡುತ್ತದೆ. ಈ ಹಿನ್ನಲೆಯಲ್ಲಿ ಭಾರತದ ಗರ್ಭಿಣಿ ಮಹಿಳೆಯರು ಝಿಕಾ ಸೋಕು ಪೀಡಿತ ದೇಶಗಳಿಗೆ ತೆರಳದಿರುವುದು ಉತ್ತಮ ಎಂದು ಸಲಹೆ ನೀಡಿದೆ.

ಈಗಾಗಲೇ ಪ್ರಯಾಣಿಸಬೇಕು ಎಂದಿರುವ ಗರ್ಭಿಣಿಯರು ಕೂಡ ತಮ್ಮ ಪ್ರಯಾಣವನ್ನು ರದ್ದುಗೊಳಿಸಿ ಎಂದು ಹೇಳಿರುವ ಕೇಂದ್ರ ಸಚಿವ ಜೆಪಿ ನಡ್ಡಾ, ಒಂದು ವೇಳೆ ತೆರಳಿದರೆ ಮುಂಜಾಗ್ರತೆ ಕ್ರಮಕೈಗೊಳ್ಳಿ ಎಂದು ತಿಳಿಸಿದ್ದಾರೆ.

ಝೀಕಾ ಪೀಡಿತ ದೇಶಗಳಿಗೆ ತೆರಳಿ ಎರಡೇ ವಾರದಲ್ಲಿ ಆರೋಗ್ಯದಲ್ಲಿ ಏರುಪೇರಾಗಿ ಮತ್ತೆ ವಾಪಸ್ಸಾಗಬೇಕೆನ್ನುವ ಗರ್ಭಿಣಿಯರು ಸ್ಥಳೀಯ ಆರೋಗ್ಯ ಇಲಾಖೆಗೆ ಮಾಹಿತಿ ನೀಡಿ ಚಿಕಿತ್ಸೆ ಪಡೆಯಿರಿ. ಈಗಾಗಲೇ ಪ್ರಯಾಣಿಸುತ್ತಿರುವ ಅನೇಕ ಮಹಿಳೆಯರಿಗೆ ಸಲಹಾ ಸೂಚನಾ ಪುಸ್ತಕವನ್ನು ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.

Write A Comment