ಕರ್ನಾಟಕ

ಆರ್ಯಪುತ್ರನಾಗಿ ಆಗಮನ ಮತ್ತೆ ಬಂದ ಹನುಮಂತು

Pinterest LinkedIn Tumblr

hanuma

“ಬಂಗಾರು ಹನುಮಂತು” ಮತ್ತೆ ಬಂದಿದ್ದಾರೆ.ಈ ಬಾರಿ ಹೊಸತನದೊಂದಿಗೆ ಹೊಸ ಹುರುಪಿನೊಂದಿಗೆ ಮೇಲಾಗಿ ಗೆಲ್ಲುವ ತವಕ ಮತ್ತು ಉತ್ತಮ ಚಿತ್ರ ನೀಡುವ ಉದ್ದೇಶವೊತ್ತು”ಆರ್ಯಪುತ್ರ”ನ ಮೂಲಕ ಮರಳಿ ಚಂದನವನಕ್ಕೆ ಬಂದಿದ್ದಾರೆ.

“ಮನಮೆಚ್ಚಿದ ಬಂಗಾರು” ಚಿತ್ರದ ಮೂಲಕ ಚಿತ್ರರಂಗದಲ್ಲಿ ಭರವಸೆ ಮೂಡಿಸಿದ್ದ ಹನುಮಂತು, ತಮ್ಮ ಎರಡನೇ ಚಿತ್ರಕ್ಕಾಗಿ ಬಾಡಿ ಬಿಲ್ಡಿಂಗ್, ಪೈಟ್,ಸೇರಿದಂತೆ ವಿವಿಧ ಕಲೆಗಳನ್ನು ಕಲಿತು ಅವುಗಳನ್ನು ಪ್ರದರ್ಶನ ಮಾಡಲು ಮುಂದಾಗಿದ್ದಾರೆ.

ಈ ಬಾರಿ ಕ್ಲಾಸ್ ಮತ್ತು ಮಾಸ್ ಚಿತ್ರದ ಅಂಶಗಳನ್ನು ಮುಂದಿಟ್ಟುಕೊಂಡು ಎಲ್ಲರಿಗೂ ಮೆಚ್ಚುಗೆಯಾಗುವ ಚಿತ್ರವನ್ನು ಪ್ರೇಕ್ಷಕರ ಮುಂದಿಡಲು ಸಿದ್ದರಾಗಿದ್ದಾರೆ.ಅದಕ್ಕಾಗಿ ಸದ್ದುಗದ್ದಲವಿಲ್ಲದೆ ಚಿತ್ರದ ಪೂಜೆ ಮಾಡಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆದರೆ ಮಾರ್ಚ್ ಮಧ್ಯಭಾಗದಲ್ಲಿ ಚಿತ್ರದ ಮಹೂರ್ತ ನಡೆಸಿ ಚಿತ್ರೀಕರಣ ಆರಂಭಿಸುವ ಗುರಿಹೊಂದಿದ್ದಾರೆ. ಈಗಾಗಲೇ ಚಿತ್ರದ ಹಾಡುಗಳು ಧ್ವನಿಮುದ್ರಣ ಕಾರ್ಯ ಗೌತಮ್ ಶ್ರೀವತ್ಸ ಸಂಗೀತ ನಿರ್ದೇಶನದಲ್ಲಿ ಭರದಿಂದ ಸಾಗಿದೆ.

ನಾಗತಿಹಳ್ಳಿ ಚಂದ್ರಶೇಖರ್, ನಾಗಾಭರಣ ಸೇರಿದಂತೆ ಅನೇಕ ಹಿರಿಯ ನಿರ್ದೇಶಕರ ಜೊತೆ ಕೆಲಸ ಮಾಡಿದ ಬಾಬು ಬೇವಿನಹಳ್ಳಿ ಇದೇ ಮೊದಲ ಬಾರಿಗೆ ಪೂರ್ಣ ಪ್ರಮಾಣದ ನಿರ್ದೇಶಕರಾಗಿ ಭಡ್ತಿ ಪಡೆದಿದ್ದಾರೆ. ಜೊತೆಗೆ ಕನ್ನಡದಲ್ಲಿ ಉತ್ತಮ ಚಿತ್ರ ನೀಡುವ ಉದ್ದೇಶವೊಂದಿದ್ದಾರೆ.ಚಿತ್ರದ ಟ್ರೈಲರ್,ಹಾಡು ಫಸ್ಟ್ ಲುಕ್ ಬಿಡುಗಡೆಯಾಗಿದ್ದು.ಉತ್ತಮ ಕಥಾ ಹಂದರವಿದೆ ಎಂದು ವಿವರ ನೀಡಿದರು ಬಂಗಾರು ಹನುಮಂತು.

ನಾವೆಲ್ಲಾ ಆರ್ಯರು ಮತ್ತೊಬ್ಬರಿಗೆ ಗೌರವ ನೀಡುವ ಸಂಪ್ರದಾಯವನ್ನು ಬೆಳೆಸಿಕೊಂಡವರು. ಭರತ ಭೂಮಿಯಲ್ಲಿ ಹುಟ್ಟಿದ ನಾವೇ ಶ್ರೇಷ್ಠ. ಈ ಹಿನ್ನೆಲೆಯಲ್ಲಿ ಚಿತ್ರಕ್ಕೆ ಆರ್ಯಪುತ್ರ ಎನ್ನುವ ಹೆಸರಿಟ್ಟಿದ್ದೇವೆ ಎಂದು ಮಾತಿಗಿಳಿದರು ನಿರ್ದೇಶಕ ಬಾಬು ಬೇವಿನಹಳ್ಳಿ.

ಚಿತ್ರದಲ್ಲಿ ಕ್ಲಾಸ್ ಮತ್ತು ಮಾಸ್ ಅಂಶಗಳಿವೆ.ನಾಯಕ ಬದುಕು ಕಟ್ಟಿಕೊಳ್ಳಲು ಹೋರಾಟ ಮಾಡುತ್ತಾನೆ.ಅದು ಯಾವ ರೀತಿಯ ಹೋರಾಟ ಎನ್ನುವುದು ಚಿತ್ರದ ಕಥನ ಕುತೂಹಲ. ರೆಗ್ಯುಲರ್ ಸಿನಿಮಾ. ಅದಕ್ಕೊಂದಿಷ್ಟು ಹೊಸತನದ ಅಂಶಗಳನ್ನು ಸೇರಿಸಲಾಗಿದೆ.ನಾಯಕಿಯರ ಹುಡುಕಾಟ ನಡೆದಿದೆ.ಅದರಲ್ಲಿ ಕೆಲವರನ್ನು ಸಂಪರ್ಕಿಸಿದ್ದು ಆರಂಭದಲ್ಲಿ ಒಪ್ಪಿಗೆ ನೀಡಿದ್ದಾರೆ.ದಿನಾಂಕದ ಹೊಂದಾಣಿಕೆ ಸೇರಿದಂತೆ ಹಣಕಾಸಿನ ವಿಷಯಗಳು ಅಂತಿಮವಾದ ನಂತರ ಚಿತ್ರದಲ್ಲಿ ಯಾರು ನಟಿಸಲಿದ್ದಾರೆ ಎನ್ನುವುದು ಪಕ್ಕಾ ಆಗಲಿದೆ. ಅಲ್ಲದೆ ಹಿರಿಯ ಹಾಸ್ಯ ಕಲಾವಿದರನ್ನೂ ಸಂಪರ್ಕಿಸಿದ್ದು ಅವರು ಬೆಂಬಲ ನೀಡುವುದಾಗಿ ಭರವಸೆ ನೀಡಿದ್ದಾರೆ ಎಲ್ಲರ ಸಹಕಾರದಿಂದ ಉತ್ತಮ ಚಿತ್ರ ನೀಡುವ ಉದ್ದೇಶವಿದೆ ಎಂದು ವಿವರ ನೀಡಿದರು.

Write A Comment