ಕರ್ನಾಟಕ

’ಮೋನಿಕಾ ಮಿಸ್ಸಿಂಗ್’

Pinterest LinkedIn Tumblr

monika

ಮಿಸ್ ಮಲ್ಲಿಗೆ ಚಿತ್ರ ನಿರ್ಮಿಸಿ ವಿವಾದ ಸೃಷ್ಠಿಸಿದ್ದ ಆಸ್ಕರ್ ಕೃಷ್ಣ ೨೦೧೪ರಲ್ಲಿ ಬಿಡುಗಡೆಯಾಗಿ ಯಶಸ್ವಿಯಾದ ಫೂಟೇಜ್ ಚಿತ್ರ ೬-೫=೨ ಮಾದರಿಯಂತೆ ’ಮೋನಿಕಾ ಈಸ್ ಮಿಸ್ಸಿಂಗ್’ ಚಿತ್ರವನ್ನು ಸದ್ದಿಲ್ಲಿದೆ ಮುಗಿಸಿದ್ದಾರೆ.

’ಮೋನಿಕಾ ಈಸ್ ಮಿಸ್ಸಿಂಗ್’ ಚಿತ್ರಕ್ಕೆ ಬೆಂಗಳೂರು ಸುತ್ತಮುತ್ತ ಮುಗಿಸಲಾಗಿದ್ದು ಬಿಡುಗಡೆಯ ಸಿದ್ಧತೆ ನಡೆಸಲಾಗಿದೆ ಎನ್ನುತ್ತಾರೆ ಕೃಷ್ಣ ಯುಟ್ಯೂಬ್‌ನಲ್ಲಿ ಬಿತ್ತರವಾದ ಮತ್ತು ನೈಜ ಘಟನೆಗಳನ್ನು ಹೆಕ್ಕಿಕೊಂಡು ’ಮೋನಿಕಾ ಈಸ್ ಮಿಸ್ಸಿಂಗ್’ ಚಿತ್ರಕ್ಕೆ ಕತೆ,ಚಿತ್ರಕತೆ,ಸಂಭಾಷಣೆ ಬರೆದಿದ್ದಾರೆ.

ಜೀವನದಲ್ಲಿ ಒಂದಲ್ಲ ಒಂದು ವಿಷಯದಲ್ಲಿ ಎಲ್ಲರು ಮಿಸ್ ಆಗಿರುತ್ತಾರೆ. ನಮ್ಮ ಚಿತ್ರದಲ್ಲಿ ಒಬ್ಬರೆ ಮಿಸ್ ಆಗುವುದು. ನೇಟಿವಿಟಿ ತಕ್ಕಂತೆ, ನಮ್ಮದೆ ದೃಷ್ಟಿಕೋನದಿಂದ ಜನರು ಇಷ್ಟಪಡುವಂತೆ ಮಾಡಲಾಗಿದೆ ಎನ್ನುತ್ತಾರೆ. ಯುಟ್ಯೂಬ್‌ನಲ್ಲಿ ಬಿತ್ತರವಾದ ಯಾವ ನೈಜ ಘಟನೆಯನ್ನು ಆಧರಿಸಿ ಚಿತ್ರ ಮಾಡಿದ್ದೀರಾ ಎನ್ನುವ ಪ್ರರ್ಶನೆಗೆ ಗೌಪ್ಯತೆಯನ್ನು ಕಾಪಾಡಿಕೊಂಡ ಅವರು ಚಿತ್ರ ನೋಡಿ ಎನ್ನುತ್ತಾ ಜಾರಿಕೊಳ್ಳುತ್ತಾರೆ.

ರಾಧಿಕಾಮಲ್ಲೆಪ್ಪನವರ್ ಮೋನಿಕಾ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಇವರೊಂದಿಗೆ ಜಯೋನಪಿಂಟೋ, ಅಭಯ್, ಚೇತನ್. ಶುಭರಕ್ಷ, ಸೋನಮ್‌ರೈ ಎಲ್ಲರಿಗೂ ನಟನೆ ಹೊಸ ಅನುಭವ. ನಿರ್ಮಾಣದಲ್ಲಿ ಸಹಾಯ ಮಾಡಿರುವ ಗಜರಾಜ್ ಇನ್ಸೆಪಕ್ಟರ್ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಪತ್ನಿ ಹೆಸರಿನಲ್ಲಿ ವಿಷ್ಮಯ ವಿಷಯಲ್ಸ್ ಸಂಸ್ಥೆ ಹುಟ್ಟುಹಾಕಿರುವ ನಿರ್ದೇಶಕರು ಸದ್ಯದಲ್ಲೆ ವಿತರಕ ನವರತ್ನಪ್ರಸಾದ್ ಮೂಲಕ ಚಿತ್ರವನ್ನು ಬಿಡುಗಡೆ ಮಾಡಲು ಯೋಜನೆ ಹಾಕಿಕೊಂಡಿದ್ದಾರೆ.

Write A Comment