ಅಂತರಾಷ್ಟ್ರೀಯ

ಕ್ಯಾನ್ಸರ್ ವಿರುದ್ಧ ಹೋರಾಡುವ ಬ್ಲ್ಯಾಕ್ ಕಾಫಿ ಕುಡಿದರೆ ಏನೇನು ಲಾಭ..ಇಲ್ಲಿದೆ ಓದಿ…

Pinterest LinkedIn Tumblr

Black-Coffee

ಕ್ಯಾನ್ಸರ್ ವಿರುದ್ಧ ಹೋರಾಡುವ ಬ್ಲ್ಯಾಕ್ ಕಾಫಿಯನ್ನು ಯಾವಾಗಲೂ ಆರೋಗ್ಯಕರ. ಇದರಲ್ಲಿ ಕ್ಯಾಲರಿ ಬಹಳ ಕಡಿಮೆ ಇರುತ್ತದೆ ಹಾಗೂ ಕ್ಯಾಲ್ಶಿಯಂ ಮತ್ತು ಪೊಟ್ಯಾಶಿಯಂ ಹೆಚ್ಚಾಗಿರುತ್ತದೆ.

ಪ್ರಯೋಜನಗಳು…
* ಬ್ಲ್ಯಾಕ್ ಕಾಫಿ ಕುಡಿಯುವುದರಿಂದ ನೆನಪಿನ ಶಕ್ತಿ ಹೆಚ್ಚಾಗುತ್ತದೆ. ಅಲ್ಲದೇ ನರವ್ಯೂಹ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.
* ಕಾಫಿಯಲ್ಲಿರುವ ಕೆಫೈನ್ ಸೈಕೊಆಕ್ಟೀವ್ ಆಗಿದ್ದು ಇದು ನಿಮ್ಮ ಮೂಡ್ ಚೆನ್ನಾಗಿರುವಂತೆ ಮಾಡುತ್ತದೆ. ಅಲ್ಲದೇ ಆಯಾಸವಾಗದಂತೆ ನಿಮ್ಮನ್ನು ಕಾಪಾಡುತ್ತದೆ.
* ಸಕ್ಕರೆ ಇಲ್ಲದೆ ಬ್ಲ್ಯಾಕ್ ಕಾಫಿ ಪ್ರತಿ ದಿನ ಸೇವನೆ ಮಾಡುವುದರಿಂದ ಟಾಕ್ಸಿನ್ ಮತ್ತು ಬ್ಯಾಕ್ಟೀರಿಯಾ ಎಲ್ಲಾ ಹೊರಗೆ ಬಂದು ಹೊಟ್ಟೆ ಶುದ್ಧವಾಗುತ್ತದೆ.
* ತೂಕ ಕಡಿಮೆ ಮಾಡಲು ಸಹ ಬ್ಲ್ಯಾಕ್ ಕಾಫಿ ಸಹಾಯ ಮಾಡುತ್ತದೆ. .
* ಹೃದಯ ಸಂಬಂಧಿ ರೋಗಗಳಿಂದ ಹೃದಯವನ್ನು ಸುರಕ್ಷಿತವಾಗಿಡಲು ಕಾಫಿ ಸಹಕಾರಿ.
* ಬ್ಲ್ಯಾಕ್ ಕಾಫಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಂಟಿಆಕ್ಸಿಡೆಂಟ್ ಇದೆ. ಒಂದು ಕಪ್ ಕಾಫಿ ಕುಡಿಯುವುದರಿಂದ ವಿಟಾಮಿನ್ ಬಿ ೨, ಬಿ೩ ಮತ್ತು ಬಿ ೫,
ಮ್ಯಾಂಗನೀಸ್, ಮೆಗ್ನೇಶಿಯಮ್ ಹಾಗೂ ಪೊಟ್ಯಾಶಿಯಂ ಸಿಗುತ್ತದೆ.
* ಬ್ಲ್ಯಾಕ್ ಕಾಫಿ ಕುಡಿಯುವುದರಿಂದ ಟೈಪ್ ೨ ಡಯಾಬಿಟೀಸ್ ತೊಂದರೆ ಬರುವುದು ಕಡಿಮೆಯಾಗುತ್ತದೆ.
* ಡಿಪ್ರೆಶನ್ ದೂರ ಮಾಡಲು ಸಹ ಬ್ಲ್ಯಾಕ್ ಕಾಫಿ ಸಹಾಯಕ.

Write A Comment