ಕರ್ನಾಟಕ

ಮೂವರು ಹೆಂಡಿರ ಶಿಕ್ಷಕ, ವಿದ್ಯಾರ್ಥಿನಿಯನ್ನೂ ಬಿಡ್ಲಿಲ್ಲ! ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿ ಜೈಲು ಸೇರಿದ

Pinterest LinkedIn Tumblr

teacher

ಬೆಂಗಳೂರು: ಆತ ಈಗಾಗಲೇ ಮೂರು ಮದುವೆಯಾಗಿದ್ದ. ಇಷ್ಟಾದ್ರೂ ಸುಮ್ಮನಿರದ ಆತ ತಾನು ಶಿಕ್ಷಕನಾಗಿದ್ದ ಶಾಲೆಯ ವಿದ್ಯಾರ್ಥಿನಿಯೊಬ್ಬಳನ್ನು ಬುಟ್ಟಿಗೆ ಹಾಕೊಂಡು, ಲೈಂಗಿಕ ಕಿರುಕುಳ ಕೊಟ್ಟು ಅತ್ಯಾಚಾರ ನಡೆಸಿದ್ದ. ಆತನ ಮೇಲೆ ಯಾವಾಗ ಫೋಕ್ಸೋ ಕೇಸ್ ಬಿತ್ತೋ ಆಗಲೇ ಇದೆಲ್ಲಾ ಕೃತ್ಯ ಬಯಲಾಗಿದೆ.

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕೋಣಂದೂರಿನ ವಾಸಿ ಲಕ್ಷ್ಮೀಕಾಂತ, ಬೆಂಗಳೂರಿನ ಜಾಲಹಳ್ಳಿ ವಿಲೇಜ್‍ನಲ್ಲಿ ಖಾಸಗಿ ಶಾಲೆಯೊಂದರಲ್ಲಿ ದೈಹಿಕ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ. ಮಕ್ಕಳಿಗೆ ಪಾಠ ಮಾಡುವುದನ್ನು ಬಿಟ್ಟು ಅದೇ ಶಾಲೆಯಲ್ಲೇ ಓದುತ್ತಿದ್ದ ಬಾಲಕಿಯನ್ನು ತನ್ನ ತೆಕ್ಕೆಗೆ ಕೆಡವಿಕೊಂಡ ಈತ ಆಕೆ ಮೇಲೆ ಅತ್ಯಾಚಾರ ಮಾಡಿದ್ದಾನೆ. ಅಲ್ಲದೇ ಬಲವಂತವಾಗಿ ಆಕೆಯ ನಗ್ನಚಿತ್ರಗಳನ್ನು ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಾಕಿಬಿಡುವುದಾಗಿ ಬೆದರಿಕೆ ಹಾಕಿದ್ದಾನೆ.

ಈ ಪ್ರಕರಣ ಹೇಗೋ ತಿಳಿದುಕೊಂಡ ಶಾಲೆಯ ಪ್ರಾಂಶುಪಾಲರು ಜಾಲಹಳ್ಳಿ ಪೊಲೀಸರಿಗೆ ದೂರು ಕೊಟ್ಟರು. ದೂರನ್ನು ಆಧಾರಿಸಿ ಪರಾರಿಯಾಗಿದ್ದ ಲಕ್ಷ್ಮೀಕಾಂತನನ್ನು ಪೊಲೀಸರು ಬಂಧಿಸಿದ್ದಾರೆ. ಇದಾದ ಬಳಿಕವೇ ಗೊತ್ತಾಗಿದ್ದು, ಲಕ್ಷ್ಮೀಕಾಂತನಿಗೆ ಈಗಾಗಲೇ ಮೂರು ಮದುವೆಯಾಗಿದ್ದಾನೆ ಎಂದು. ಅಲ್ಲದೇ ತನ್ನ ಪತ್ನಿಯರಿಗೆ ಈತ ಕಿರುಕುಳವನ್ನು ನೀಡುತ್ತಿದ್ದ ಎನ್ನುವುದು ತಿಳಿದುಬಂದಿದೆ.

ಮೂವರು ಪತ್ನಿಯರಿಗೂ ಮೋಸ: ಚಿತ್ರದುರ್ಗದ ನಿವಾಸಿ ಅಕ್ಷತಾ ಹಾಗೂ ಆಕೆಯ ಪತಿ ರಾಘವೇಂದ್ರ ನಡುವೆ ಸಾಮರಸ್ಯ ಇರಲಿಲ್ಲ. ಹೆಂಡತಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದ ರಾಘವೇಂದ್ರ. ಈ ಸಂಬಂಧ ಚಿತ್ರದುರ್ಗ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಈ ವೇಳೆಯಲ್ಲಿ ನಿಮಗೆ ಒಂದು ಹೆಣ್ಣು ಮಗುವಿದೆ ನಾನು ನ್ಯಾಯ ಕೊಡಿಸ್ತೀನಿ ಎಂದು ಮನಯವರೆನ್ನೆಲ್ಲಾ ಪುಸಲಾಯಿಸಿದ ಲಕ್ಷ್ಮೀಕಾಂತ ಆಕೆಯೊಂದಿಗೆ ಗುಟ್ಟಾಗಿ ದೈಹಿಕ ಸಂಭೋಗ ನಡೆಸಿ ಶೃಂಗೇರಿಯಲ್ಲಿ ಮದುವೇನೂ ಆಗಿದ್ದ. ನಂತರದ ದಿನದಲ್ಲಿ ಈ ವಿಷಯ ಯಾರಿಗಾದರೂ ಹೇಳಿದ್ರೆ ಕೊಲೆ ಮಾಡ್ತೀನಿ ಎಂದು ಬೆದರಿಕೆ ಒಡ್ಡಿದ್ದನಂತೆ.

ಇದಲ್ಲದೇ ತನಗೆ ಮದುವೆಯಾಗಿಲ್ಲ ಎಂದು ಯಶವಂತಪುರದಲ್ಲೂ ಇನ್ನೊಂದು ಮದುವೆಯಾಗಿದ್ದ. ಇಷ್ಟಕ್ಕೆ ನಿಲ್ಲದ ಇವನ ಕಾಮಚೇಷ್ಟೆ ಮತ್ತೋರ್ವ ತನ್ನೂರಿನ ಮಹಿಳೆಯನ್ನು ವರಿಸಿ ಮಗುವನ್ನು ಕೈಗೆ ಕೊಟ್ಟಿದ್ದಾನಂತೆ. ಫೋಕ್ಸೋ ಅಡಿ ಪ್ರಕರಣ ದಾಖಲಾದ ಬಳಿಕ ಈ ವಿಷಯಗಳು ಬೆಳಕಿಗೆ ಬಂದಿವೆ. ಒಂದು ವಾರಗಳ ಪೊಲೀಸ್ ಕಸ್ಟಡಿಯಲ್ಲಿದ್ದ ಲಕ್ಷ್ಮೀಕಾಂತ ಇದೆಲ್ಲವನ್ನೂ ಬಾಯ್ಬಿಟ್ಟಿದ್ದು, ಈಗ ಜೈಲು ಸೇರಿದ್ದಾನೆ.

Write A Comment