ಮುಂಬೈ

ಕೌಟುಂಬಿಕ ಕಲಹ: ಮಹಾರಾಷ್ಟ್ರದಲ್ಲಿ ಒಂದೇ ಕುಟುಂಬದ 14 ಮಂದಿಯನ್ನು ಹತ್ಯೆಗೈದು ತಾನು ಆತ್ಮಹತ್ಯೆಗೈದ

Pinterest LinkedIn Tumblr

thane2-compressed

ನವದೆಹಲಿ: ಒಂದೇ ಕುಟುಂಬದ 14 ಮಂದಿಯನ್ನು ಕತ್ತು ಕುಯ್ದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆಯೊಂದು ಥಾಣೆಯ ಕಾಸರ್ ವಡವಲಿಯಲ್ಲಿ ಭಾನುವಾರ ನಡೆದಿದೆ.

ಹಸನ್ ವರೇಕರ್ ಹತ್ಯೆ ಮಾಡಿದ ಕುಟುಂಬದ ಸದಸ್ಯನಾಗಿದ್ದು, ಈತ ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ತನ್ನದೇ ಕುಟುಂಬದ 7 ಮಕ್ಕಳು ಹಾಗೂ 6 ಮಹಿಳೆಯರ ಕತ್ತು ಕುಯ್ದು ಹತ್ಯೆ ಮಾಡಿರುವುದಾಗಿ ತಿಳಿದುಬಂದಿದೆ. ಹತ್ಯೆ ಮಾಡಿದ ಬಳಿಕ ಹಸನ್ ವರೇಕರ್ ಕೈಯಲ್ಲಿ ಚಾಕು ಹಿಡಿದುಕೊಂಡೇ ತಾನು ಕೂಡ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಹತ್ಯಾಕಾಂಡದಲ್ಲಿ ಹಲ್ಲೆಗೊಳಗಾದ ಮತ್ತೊಬ್ಬ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದು, ಆಕೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಸ್ತುತ ಘಟನಾ ಸ್ಥಳಕ್ಕೆ ಥಾಣೆಯ ಪೊಲೀಸ್ ಆಯುಕ್ತ ಭೇಟಿ ನೀಡಿದ್ದು, ಪ್ರಕರಣವನ್ನು ಮಹಾರಾಷ್ಟ್ರ ಪೊಲೀಸರು ತನಿಖೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.

Write A Comment