ಕರ್ನಾಟಕ

ಕೈಗಳಿಲ್ಲದಿದ್ದರೇನಂತೆ ಮತ ಚಲಾಯಿಸಲು ಕಾಲಿದೆಯಲ್ಲ!

Pinterest LinkedIn Tumblr

castಕೂಡ್ಲಿಗಿ ತಾಲ್ಲೂಕಿನ ಗುಂಡುಮುಣುಗು ಗ್ರಾಮದ ಮತಗಟ್ಟೆಯೊಂದರಲ್ಲಿ ಎರಡು ಕೈಗಳಿಲ್ಲದ ಲಕ್ಷ್ಮೀದೇವಿ ತನ್ನ ಕಾಲಿನಿಂದ ಮತ ದಾಖಲಾತಿ ಪುಸ್ತಕಕ್ಕೆ ಸಹಿ ಮಾಡಿದರು. ಬಳಿಕ ಲಕ್ಷ್ಮೀದೇವಿ ಕಾಲಿನಿಂದ ಮತ ಹಕ್ಕು ಚಲಾಯಿಸಿದರು. -ಪ್ರಜಾವಾಣಿ ಚಿತ್ರ

ಕೂಡ್ಲಿಗಿ: ತಾಲ್ಲೂಕಿನ ಗುಂಡುಮುಣುಗು ಗ್ರಾಮದ ಮತಗಟ್ಟೆಯೊಂದರಲ್ಲಿ ಎರಡು ಕೈಗಳಿಲ್ಲದ ಲಕ್ಷ್ಮೀದೇವಿ ತನ್ನ ಕಾಲಿನಿಂದ ಮತ ಹಕ್ಕು ಚಲಾಯಿಸಿ ಗಮನ ಸೆಳೆದರು.

ಕೈಗಳಿಲ್ಲ ಎಂದು ಮತದಾನದಿಂದ ಹಿಂದೆ ಸರಿದು ಮನೆಯಲ್ಲೇ ಕೂರದೆ ಮತಗಟ್ಟೆಯತ್ತ ಹೆಜ್ಜೆ ಹಾಕಿದ ಲಕ್ಷ್ಮೀದೇವಿ ಅವರು, ಮತಗಟ್ಟೆಯಲ್ಲಿ ಉತ್ಸಾಹದಿಂದ ತನ್ನ ಗುರುತಿನ ಚೀಟಿ ತೋರಿಸಿದರು. ಕಾಲಿನ ಬೆರಳಿಗೆ ಮತಗಟ್ಟೆ ಅಧಿಕಾರಿಗಳು ಶಾಹಿ ಹಾಕಿದ ಬಳಿಕ, ಕಾಲಿನಿಂದಲೇ ದಾಖಲಾತಿ ಪುಸ್ತಕಕ್ಕೆ ಸಹಿ ಹಾಕಿದರು. ಕಾಲಿನಿಂದಲೇ ಮತ ಯಂತ್ರದ ಗುಂಡಿ ಒತ್ತುವ ಮೂಲಕ ತಮ್ಮ ಹಕ್ಕು ಚಲಾಯಿಸಿದರು.

Write A Comment