ಬೆಂಗಳೂರು,ಫೆ.೧೧-ಕಳವು ಮಾಡಿದ ಬೈಕ್‌ಗಳಲ್ಲಿ ನಗರದ ವಿವಿಧೆಡೆಗಳಲ್ಲಿ ಸುತಾಡುತ್ತಾ ನಿರ್ಜನ ಪ್ರದೇಶಗಳಲ್ಲಿ ಸಂಚರಿಸುವ ಮಹಿಳೆಯರ ಚಿನ್ನದ ಸರಗಳನ್ನು ಕಸಿದು ಪರಾರಿಯಾಗುತ್ತಿದ್ದ ಇಬ್ಬರು ಹಳೆ ಕಳ್ಳರನ್ನು ಕೆಂಪೇಗೌಡನಗರ ಪೊಲೀಸರು ಬಂಧಿಸಿದ್ದಾರೆ.
ಚಾಮರಾಜಪೇಟೆಯ ಎಂ.ಡಿ. ಬ್ಲಾಕ್‌ನ ಅಲೀಂಖಾನ್(೨೦)ಹಾಗೂ ಚಿನ್ನಪ್ಪಗಾರ್ಡನ್‌ನ ಮೊಹಮದ್ ಶಫಿ ಅಹಮದ್(೨೪)ಬಂಧಿತ ಆರೋಪಿಗಳಾಗಿದ್ದಾರೆ ಬಂಧಿತರಿಂದ ೨ಲಕ್ಷ ೭೦ ಸಾವಿರ ಮೌಲ್ಯದ ೨ ಬೈಕ್‌ಗಳು ಹಾಗೂ ೨ ಚಿನ್ನದ ಸರಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳ ಬಂಧನದಿಂದ ಕೆಂಪೇಗೌಡನಗರ,ಹನುಮಂತನಗರ ಪೊಲೀಸ್ ಠಾಣೆಯ ೨ ಸರಗಳ್ಳತನ ಹಾಗೂ ಅಶೋಕ ನಗರ ಕೆಂಪೇಗೌಡನಗರ ಪೊಲೀಸ್ ಠಾಣೆಯ ೨ ದ್ವಿ ಚಕ್ರ ವಾಹನಗಳು ಕಳವು ಪ್ರಕರಣಗಳು ಪತ್ತೆ ಯಾಗಿವೆ.
ಆರೋಪಿಗಳು ೨೦೧೦ ರಿಂದ ಹೈಗ್ರೌಂಡ್, ಚಾಮರಾಜಪೇಟೆ, ಸೆಂಟ್ರಲ್, ಹಲಸೂರು ಗೇಟ್, ಎಸ್.ಜೆ ಪಾರ್ಕ್, ಎಸ್.ಆರ್ ನಗರ, ಬನಶಂಕರಿ, ಕಮರ್ಷಿಯಲ್ ,ಸುಬ್ರಮಣ್ಯಪುರ, ಜೆ.ಪಿ ನಗರ, ಮಲ್ಲೇಶ್ವರಂ, ಕಾಟನ್ ಪೇಟೆ, ಕುಮಾರಸ್ವಾಮಿ ಲೇಔಟ್, ಕೆ.ಜಿ ಹಳ್ಳಿ, ಮಡಿವಾಳ , ಶಿವಾಜಿನಗರ, ಡಿ.ಜೆ.ಹಳ್ಳಿ, ಪೊಲೀಸ್ ಠಾಣೆಗಳ ಸರಗಳವು ವಾಹನಗಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದು ಜೈಲಿಗೆ ಹೋಗಿದ್ದರು.
ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದ ನಂತರವೂ ವಾಹನಗಳನ್ನು ಕಳವು ಮಾಡಿ ಸರಗಳ್ಳತನ ಮಾಡಿ ಸಿಕ್ಕಿಬಿದ್ದಿದ್ದಾರೆ ಎಂದು ಡಿಸಿಪಿ ಲೋಕೇಶ್‌ಕುಮಾರ್ ಅವರು ತಿಳಿಸಿದ್ದಾರೆ.