ಮಂಗಳೂರು, ಫೆ. 11 : ಖ್ಯಾತ ಲೇಖಕ ಮತ್ತು ಧಾರ್ಮಿಕ ಚಿಂತಕ ದಿವಂಗತ ಮಂಗಲ್ಪಾಡಿ ನಾಮದೇವ ಶೆಣೈ ಅವರು ಬರೆದ ಶ್ರೀ ವೀರ ವೆಂಕಟೇಶ ದೇವರನ್ನು ಸ್ತುತಿಸುವ ಶೀರ್ಷಿಕೆ ಹಾಡಿನೊಂದಿಗೆ ಅವರ ಪುತ್ರ ಮಂಗಲ್ಪಾಡಿ ನರೇಶ್ ಶೆಣೈ ನಿರ್ಮಿತ ರಥಬೀದಿ ಶ್ರೀ ವೀರ ವೆಂಕಟೇಶ ದೇವರ ಕುರಿತ ಕೊಂಕಣಿ ಕಿರು ಸಾಕ್ಷ್ಯಚಿತ್ರ ‘ದೇವಾಲೋ ಉಡ್ಗಾಸು’ ಫೆ. 11 ರಂದು ನಗರದ ಭಾರತ್ ಮಾಲ್‍ನ ಬಿಗ್ ಸಿನಿಮಾ ಮಂದಿರದಲ್ಲಿ ಬಿಡುಗಡೆಗೊಂಡಿತು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ಬಸ್ತಿ ವಾಮನ್ ಶೆಣೈ, ಮಾಜಿ ಶಾಸಕ ಬಿ. ಯೋಗೀಶ್ ಭಟ್, ಕೊಡಿಯಾಲ್ ಖಬರ್ ಕೊಂಕಣಿ ನಿಯತ ಕಾಲಿಕೆ ಸಂಪಾದಕ ಎಂ. ವೆಂಕಟೇಶ ಬಾಳಿಗಾ, ಮಂಗಲ್ಪಾಡಿ ಪುಂಡಲೀಕ ಶೆಣೈ, ಶ್ರೀಮತಿ ಮೀನಾಕ್ಷಿ ಎನ್. ಶೆಣೈ, ಚಿತ್ರದ ನಿರ್ಮಾಪಕ ಎಂ. ನರೇಶ್ ಶೆಣೈ, ವೇದವ್ಯಾಸ ಕಾಮತ್, ಕಲಾವಿದ ಗೋಪಿನಾಥ ಭಟ್, ಚಿತ್ರದ ನಿರ್ದೇಶಕ ಸಿತೇಶ್ ಸಿ ಗೋವಿಂದ್, ರತ್ನಾಸ್ ವೈನ್‍ಗೇಟ್ ಮಾಲಕ ರಮೇಶ ನಾೈಕ್, ಬಿಗ್ ಸಿನಿಮಾದ ಪ್ರಬಂಧÀಕ ಅಶ್ವಿನ್ ಪ್ರಭು ಉಪಸ್ಥಿತರಿದ್ದರು.
ಪ್ರಪ್ರಥಮ ಬಾರಿಗೆ ಅತ್ಯಾಧುನಿಕ ಡ್ರೋನ್ ಕ್ಯಾಮೆರಾ ಬಳಸಿ ತಯಾರಿಸಿದ ಈ ವಿಶಿಷ್ಟ ಕೊಂಕಣಿ ಕಿರು ಸಾಕ್ಷ್ಯಚಿತ್ರವನ್ನು ಸಿತೇಶ್ ಸಿ ಗೋವಿಂದ ನಿರ್ದೇಶಿಸಿದ್ದಾರೆ. ಮಂಗಳೂರಿನ ಜಿಎಸ್‍ಬಿ ಇನ್ಫೊ ಮಿಡಿಯಾ ಅರ್ಪಿಸುವ ಆ ಸಾಕ್ಷ್ಯಚಿತ್ರದಲ್ಲಿ ಜಿಎಸ್‍ಬಿ ಸಮುದಾಯದ ಧಾರ್ಮಿಕ ಭಾವನೆಯನ್ನು ಪ್ರತಿಬಿಂಬಿಸಲಾಗಿದೆ.
ಈ ಕೊಂಕಣಿ ಕಿರು ಸಾಕ್ಷ್ಯಚಿತ್ರವು ಫೆ. 13ರವರೆಗೆ ನಗರದಲ್ಲಿ ಪ್ರದರ್ಶಿತಗೊಳ್ಳುತ್ತಿದ್ದು ಆಸಕ್ತ ಜಿಎಸ್‍ಬಿ ಬಾಂಧವರು ಅತಿಥಿ ಪಾಸುಗಳನ್ನು ನಗರದ ವಿ.ಟಿ.ರಸ್ತೆಯ ಧನ್ವಂತರಿ ನಗರದಲ್ಲಿರುವ ವಿವೇಕ್ ಟ್ರೇಡರ್ಸ್‍ನಲ್ಲಿ ಪಡಕೊಳ್ಳಬಹುದಾಗಿದೆ.
ಇತ್ತೀಚೆಗೆ ಬ್ರಹ್ಮೆಕ್ಯರಾದ ಶ್ರೀ ಕಾಶೀಮಠ ಸಂಸ್ಥಾನದ 20ನೇ ಮಠಾಧಿಪತಿ ಪರಮಪೂಜ್ಯ ಶ್ರೀ ಶ್ರೀ ಸುಧೀಂದ್ರ ತೀರ್ಥ ಸ್ವಾಮೀಜಿಯವರು ಸನ್ಯಾಸತ್ವ ಸ್ವೀಕರಿಸಿ 74 ವರ್ಷಗಳ ಕಾಲ ಗುರುಪರಂಪರೆಯನ್ನು ಮುಂದುವರೆಸಿಕೊಂಡು ಬಂದು ಸಮಾಜ ಕಂಡ ಏಳಿಗೆಯ ಸ್ವ ಅನುಭವವನ್ನು ತಿಳಿಸುವ ಚಲನಚಿತ್ರವನ್ನು ಸದ್ಯದಲ್ಲೇ ಬಿಡುಗಡೆಗೊಳಿಸಲಾಗುವುದೆಂದು ಮಂಗಲ್ಪಾಡಿ ನರೇಶ್ ಶೆಣೈ ಈ ಸಂದರ್ಭದಲ್ಲಿ ತಿಳಿಸಿದ್ದಾರೆ.