ಜೂರಿಕ್: ಇಲ್ಲಿನ ಪ್ರಸಿದ್ಧ ವಾಚು ತಯಾರಕ ಕಂಪನಿ ಹೂಬ್ಲೊಟ್ ತನ್ನ ವಾಚುಗಳಿಗೆ ಭಾರತದಲ್ಲಿ ಬ್ರ್ಯಾಂಡ್ ಅಂಬಾಸಿಡರ್ ಆಗುವಂತೆ ಕುಮಾರಸ್ವಾಮಿಯವರಿಗೆ ಆಫರ್ ನೀಡಿದೆ. “ನಮ್ಮದು ಬಹಳ ದುಬಾರಿ ವಾಚಾಗಿರುವುದರಿಂದ ಭಾರತದಲ್ಲಿ ಇದಕ್ಕೆ ಅಷ್ಟೇನೂ ಬೇಡಿಕೆಯಿಲ್ಲ. ಇಷ್ಟಕ್ಕೂ ಹೂಬ್ಲೊಟ್ ವಾಚಿನ ಹೆಸರನ್ನೇ ಬಹುತೇಕ ಭಾರತೀಯರು ಕೇಳಿರಲಿಲ್ಲ. ಹೀಗಿರುವಾಗ ರಾಜಕಾರಣಿಯೊಬ್ಬರು ಇತ್ತೀಚೆಗೆ ಭಾರತದಲ್ಲಿ ನಮ್ಮ ಬ್ರ್ಯಾಂಡನ್ನು ಬಹಳ ಪ್ರಸಿದ್ಧಿಗೆ ತಂದಿದ್ದಾರೆ. ಅವರನ್ನೇ ಭಾರತಕ್ಕೆ ನಮ್ಮ ಬ್ರ್ಯಾಂಡ್ ಅಂಬಾಸಿಡರ್ ಮಾಡೋಣ’ ಎಂದು ಹೂಬ್ಲೊಟ್ ಕಂಪನಿಯ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಇದಕ್ಕೆ ಕುಮಾರಸ್ವಾಮಿ ಒಪ್ಪಿಕೊಳ್ಳುತ್ತಾರೋ ಇಲ್ಲವೋ ಎಂಬುದು ಖಚಿತಪಟ್ಟಿಲ್ಲ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 70 ಲಕ್ಷ ಬೆಲೆಯ ಹೂಬ್ಲೊಟ್ ವಾಚು ಧರಿಸುತ್ತಾರೆ ಎಂದು ಹೇಳುವ ಮೂಲಕ ಇತ್ತೀಚೆಗಷ್ಟೇ ಕುಮಾರಸ್ವಾಮಿ ಅವರು ಹೂಬ್ಲೊಟ್ ವಾಚ್ ಎಂಬ ಪದ ಭಾರತೀಯರ ಕಿವಿಗೆ ಬೀಳುವಂತೆ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.
-ಉದಯವಾಣಿ